ಬಿಜೆಪಿ ಪಕ್ಷವನ್ನು ಆರಂಭಿಕ ಹಂತದಲ್ಲಿ ಕಡು ಕಷ್ಟದಲ್ಲಿ ಬೆಳೆಸಲು ಶ್ರಮ ಪಟ್ಟವರಲ್ಲಿ ಒಬ್ಬರು, ಸಂಘ ಪರಿವಾರದ ರಾಷ್ಟ್ರೀಯ ಮುಖಂಡರಾಗಿದ್ದ ದಿ.ಚಕ್ಕೋಡಬೈಲು ಬೆನಕ ಭಟ್ಟರ ಧರ್ಮಪತ್ನಿ ವಿಶಾಲಾಕ್ಷಮ್ಮ (90) ನಿಧನರಾಗಿದ್ದಾರೆ. ವಿಶಾಲಾಕ್ಷಮ್ಮ ಮೂಲತಃ ಕೇರಳ ಗಡಿನಾಡು ಕಾಸರಗೋಡು ಸಮೀಪದವರು. ಅವರಿಗೆ ಮೂರು ಗಂಡು, ಎರಡು ಹೆಣ್ಣು ಮಕ್ಕಳು ಇದ್ದಾರೆ.
ಚಕ್ಕೋಡಬೈಲು ಬೆನಕಭಟ್,
ತಾರೊಗೊಳ್ಳಿ ನಾಗರಾಜ ರಾಯ, ಕುರುವಳ್ಳಿ ಕೆ.ನರಸಿಂಹ ನಾಯಕ್ ಇವರುಗಳ ಅವಿರತ ಪರಿಶ್ರಮದಿಂದ 80ರ ದಶಕದ
ಆರಂಭದಲ್ಲಿ ಅಂಬೆಗಾಲಿಟ್ಟ ಬಿಜೆಪಿ ಬಳಿಕ ನಿದಾನಕ್ಕೆ ತೀರ್ಥಹಳ್ಳಿಯಲ್ಲಿ ಪ್ರಬಲ ಪ್ರತಿಪಕ್ಷಗಳಾದ
ಕಾಂಗ್ರೆಸ್, ಜನತಾದಳ, ರೈತ ಸಂಘದ ನಡುವೆ ತನ್ನ ಅಸ್ಥಿತ್ವ ರೂಪಿಸಿಕೊಂಡಿತ್ತು. ಅಲ್ಲದೇ ರಾಜಕೀಯವಾಗಿ
ಈ ಮೂವರ ಅತ್ಯುತ್ತಮ ಕೊಡುಗೆ ಈಗಿನ ಶಾಸಕ ಆರಗ ಜ್ಞಾನೇಂದ್ರ.
ಆರ್ಥಿಕವಾಗಿ ಅತ್ಯಂತ
ಸಂಕಷ್ಟದ ದಿನಗಳಲ್ಲಿ ಚಕ್ಕೋಡಬೈಲು ಬೆನಕ ಭಟ್ ಪಕ್ಷ ಸಂಘಟನೆ ಎಂದು ತಾಲ್ಲೂಕು, ಜಿಲ್ಲೆ, ರಾಜ್ಯ
ಮತ್ತು ರಾಷ್ಟ್ರವನ್ನು ಸುತ್ತುತ್ತಿದ್ದಾಗ ಕೌಟುಂಬಿಕವಾಗಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ಪತ್ನಿ
ವಿಶಾಲಾಕ್ಷಮ್ಮ. ಕುಟುಂಬದ ಜೊತೆಗೆ ಪಕ್ಷದ ಕಾರ್ಯಕರ್ತರನ್ನು ಕೂಡ ಕುಟುಂಬದವರಂತೆ ನೋಡಿಕೊಂಡು ಎಲ್ಲರ
ಗೌರವಕ್ಕೆ ಪಾತ್ರರಾಗಿದ್ದರು. ಅವರ ನಿಧನಕ್ಕೆ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಹಲವಾರು ಗಣ್ಯರು
ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
