ಸೆಪ್ಟೆಂಬರ್‌ 20ರ ಭಾನುವಾರ ಕುರುವಳ್ಳಿ ಯುವಕ ಸಂಘದ ವತಿಯಿಂದ

ಉಡುಪಿ ಆದರ್ಶ ಆಸ್ಪತ್ರೆಯ ಡಾ.ವಿನೋದ್‌ ಸೇರಿದಂತೆ 16 ತಜ್ಞ ವೈದ್ಯರ ಆಗಮನ
ಎಲ್ಲಾ ಬಗೆಯ ರೋಗ ತಪಾಸಣೆ ಹಾಗೂ ಉಚಿತ ಸಲಹೆ ಔಷಧಿ ವಿತರಣೆ
ಸೇವೆ ಪಡೆದುಕೊಳ್ಳುವಂತೆ ಅಧ್ಯಕ್ಷ ಹೆಚ್.ಪಿ.ಅನಿಲ್‌ ಮನವಿ

ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದರು ಆರೋಗ್ಯ ಸೇವೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬಡವರಿಗೆ ಲಭ್ಯವಾಗುತ್ತಿಲ್ಲ. ಮಧುಮೇಹ ಮತ್ತು ಏರು ರಕ್ತದೊತ್ತಡದಂತಹ ಕಾಯಿಲೆಯ ತಪಾಸಣೆ ಕೂಡ ಎಲ್ಲರಿಗೂ ದೊರಕುತ್ತಿಲ್ಲ. ಬದಲಾದ ಸನ್ನಿವೇಶದಲ್ಲಿ ಇವು ಎಲ್ಲಾ ಜೀವನಶೈಲಿಯ ಜನರನ್ನು ಬಾಧಿಸುತ್ತಿರುವುದರಿಂದ ಆರಂಭಿಕ ತಪಾಸಣೆ ಮುಖ್ಯ. ಈ ಕಾರಣದಿಂದ ಯುವಕ ಸಂಘ ಕುರುವಳ್ಳಿ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಉಡುಪಿ ಆದರ್ಶ ಆಸ್ಪತ್ರೆಯ 16 ಮಂದಿ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಸಮಾಲೋಚನ ಕಾರ್ಯಕ್ರಮವನ್ನು ಕುರುವಳ್ಳಿಯ ನಾಗರತ್ನ ಸಭಾ ಭವನದಲ್ಲಿ ಸೆಪ್ಟೆಂಬರ್‌ 20ರ ಭಾನುವಾರ ಬೆಳಿಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಹೆಚ್.ಪಿ.ಅನಿಲ್‌ ತಿಳಿಸಿದ್ದಾರೆ.

ಇಂದು ಯುವಕ ಸಂಘದ ವಿವೇಕ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಶಿಬಿರದಲ್ಲಿ ಹೆಸರಾಂತ ನರರೋಗ ತಜ್ಞ ತೀರ್ಥಹಳ್ಳಿಯ ಡಾ.ವಿನೋದ್‌ ಸೇರಿದಂತೆ ಬಹುತೇಕ ಎಲ್ಲಾ ಕಾಯಿಲೆಗಳ ತಜ್ಞ ವೈದ್ಯರು ಭಾಗವಹಿಸುತ್ತಿದ್ದು ಪ್ರಯೋಜನ ಪಡೆದುಕೊಳ್ಳಬೇಕೆಂದು ಅನಿಲ್‌ ವಿನಂತಿಸಿಕೊಂಡಿದ್ದಾರೆ.

ಆದರ್ಶ ಆಸ್ಪತ್ರೆಯ ಮ್ಯಾನೇಜರ್ ಡಿಯಾಗೋ ಕ್ವಾಡ್ರಸ್‌ ಮಾತನಾಡಿ, ಆದರ್ಶ ಆಸ್ಪತ್ರೆ ಕಳೆದ 21 ವರ್ಷಗಳಲ್ಲಿ ಜನಸ್ನೇಹಿಯಾಗಿ ಮನ್ನಣೆಗಳಿಸಿದೆ. ಈ ಶಿಬಿರದಲ್ಲಿ ಹಿರಿಯ ವೈದ್ಯಕೀಯ ತಜ್ಞರಾದ ಡಾ.ಚಂದ್ರಶೇಖರ್‌, ಡಾ.ಉದಯ ಕುಮಾರ್‌ ಪ್ರಭು, ಡಾ.ಸುದೀಪ್‌ ಶೆಟ್ಟಿ, ಮೂಳೆ ಕೀಲು ರೋಗ ತಜ್ಞ ಡಾ.ಮೋಹನ್‌ ದಾಸ್‌ ಶೆಟ್ಟಿ, ನರರೋಗ ಶಸ್ತ್ರಚಿಕಿತ್ಸ ತಜ್ಞ ಡಾ.ರಾಜೇಶ್‌ ನಾಯರ್‌, ನರರೋಗ ತಜ್ಞ ಡಾ.ವಿನೋದ್‌, ಶಸ್ತ್ರಚಿಕಿತ್ಸಾ ತಜ್ಞ ಪ್ರಶಾಂತ್‌ ಶೆಟ್ಟಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ದಮಯಂತಿ, ಹೃದ್ರೋಗ ತಜ್ಞ ಡಾ.ಸುಹಾಸ್‌, ಮೂಳೆ ಮತ್ತು ಕೀಲುರೋಗ ತಜ್ಞ ಡಾ.ಸಾಗರ್‌ ಭಟ್‌, ಕ್ಯಾನ್ಸರ್‌ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಅಪರ್ಣ ವಾರಿಯರ್‌, ಅನಂತ್‌ ಎಸ್‌ ಮಹನ್‌ ಭಾಗವಹಿಸುತ್ತಿದ್ದಾರೆ. ರೋಗ ಪತ್ತೆ ಮತ್ತು 10 ದಿನಗಳ ಔಷಧಿಯನ್ನು ಉಚಿತವಾಗಿ ನೀಡಲಾಗುವುದು. ಹಾಗೂ ಆಸ್ಪತ್ರೆಯಲ್ಲಿ ಬಿಪಿಎಲ್‌ ಕಾರ್ಡುದಾರರಿಗೆ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು ಯಶಸ್ವಿನಿ ಹೊರತುಪಡಿಸಿ ಎಲ್ಲಾ ರೀತಿಯ ಆರೋಗ್ಯ ಕಾರ್ಡುಗಳ ಸೇವೆ ಲಭ್ಯವಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಆಸ್ಪತ್ರೆಯ ರೋವಿಯನ್‌ ಡಿಸೋಜ, ಸಂತೋಷ್‌ ಶೆಟ್ಟಿ, ಯುವಕ ಸಂಘದ ಕಾರ್ಯದರ್ಶಿ ಕುರುವಳ್ಳಿ ನಾಗರಾಜ್‌, ಗೌರವಾಧ್ಯಕ್ಷ ಬಿ.ಎನ್.ಗುರುರಾಜ್‌, ಪ್ರಮೋದ್‌ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post