ಡಾನ್‌ ರಾಮಣ್ಣ ನೇತೃತ್ವದಲ್ಲಿ ಪ್ರಗತಿಯತ್ತ ದಾಪುಗಾಲು

78 ಕೋಟಿಗೂ ಹೆಚ್ಚಿನ ವಹಿವಾಟು 26 ಲಕ್ಷ ನಿವ್ವಳ ಲಾಭ
ಶೀಘ್ರದಲ್ಲಿ ಚೀಟಿನಿಧಿ, ಸ್ವಂತ ಕಟ್ಟಡ ಘೋಷಣೆ ಮಾಡಿದ ವರ್ತಕ ಸೌಹಾರ್ದ ಸಹಕಾರಿ

ಗ್ರಾಮೀಣ ಭಾಗದ ಸಹಕಾರಿ ಕ್ಷೇತ್ರ ನಿರೀಕ್ಷೆಗೂ ಮೀರಿ ಬೆಳೆದಿದೆ. ಗ್ರಾಹಕರು ಸರಾಗ ಸೇವೆ ಮತ್ತು ಆಕರ್ಷಕ ಬಡ್ಡಿದರ ಹಾಗೂ ಭದ್ರತಾ ದೃಷ್ಟಿಯಿಂದ ಹೆಚ್ಚು ಸಹಕಾರಿ ಸಂಸ್ಥೆಗಳತ್ತ ಧಾವಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದ್ದಾರೆ.

ಕಳೆದ ವಾರ ವರ್ತಕರ ಸೌಹಾರ್ದ ಸಹಕಾರಿಯ 9ನೇ ಸರ್ವ ಸದಸ್ಯರ ಮಹಾಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವರ್ತಕರ ಸಹಕಾರಿಯ ಅಧ್ಯಕ್ಷ ಡಾನ್‌ ರಾಮಣ್ಣ ಶೆಟ್ಟಿ ಮಾತನಾಡಿ, ಸಂಸ್ಥೆ ಆರ್ಥಿಕ ವರ್ಷದಲ್ಲಿ 78.43 ಕೋಟಿ ವ್ಯವಹಾರ ನಡೆಸಿ 26.11 ಲಕ್ಷ ನಿವ್ವಳ ಲಾಭಗಳಿಸಿದೆ. ಷೇರುದಾರರಿಗೆ ಶೇಕಡಾ 18 ರಷ್ಟು ಡಿವಿಡೆಂಟ್‌ ಕೊಡಲು ತೀರ್ಮಾನಿಸಲಾಗಿದೆ. ಅಲ್ಲದೇ ಮರಣನಿಧಿ, ನೂತನ ಶಾಖೆ ಪ್ರಾರಂಭಕ್ಕೆ ಚಿಂತಿಸಲಾಗುತ್ತಿದೆ. ದಶಮಾನೋತ್ಸವ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ಸಾಲ ಪಡೆದು ಆರ್ಥಿಕ ವಹಿವಾಟು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ. ಚಿಟ್‌ ಫಂಡ್‌ ಆರಂಭಿಸುವ ಗುರಿ ಇದೆ ಎಂದು ತಿಳಿಸಿದರು.

ಹಿರಿಯ ಷೇರುದಾರ ನಾಗರಾಜ್‌ ಸಭೆ ಉದ್ಘಾಟಿಸಿದರು.

ಉಪಾಧ್ಯಕ್ಷ ರಾಘವೇಂದ್ರ ಮಲ್ಯ, ನಿರ್ದೇಶಕರಾದ ಸಹನಾ ಎಸ್‌ ಭಟ್‌, ಎಸ್.ಯುವರಾಜ್‌, ಎಸ್.ನಾಗರಾಜ್‌, ಚೈತನ್ಯ ಜವಳಿ, ಮಹಮ್ಮದ್‌ ಶಫಿ, ಮೋಹಿನಿ ಎ ಆಚಾರ್ಯ, ಕೆ.ರಾಘವೇಂದ್ರ ಶೆಣೈ, ಬಿ.ಎಸ್.ಗಿರೀಶ್‌, ಸೊಪ್ಪುಗುಡ್ಡೆ ರಾಘವೇಂದ್ರ, ಎಸ್.ಇ.ಅಶೋಕ್‌ ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post