ಕಾರ್ಯದರ್ಶಿಯಾಗಿ ಮುರುಘರಾಜ್ ಕೋಣಂದೂರು, ಸಂತೋಷ್ ಕುಮಾರ್
ತೀರ್ಥಹಳ್ಳಿ ತಾಲ್ಲೂಕು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮುನ್ನೂರು ಮೋಹನ್ ಅವಿರೋಧವಾಗಿ ಮಂಗಳವಾರ
ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಮುರುಘರಾಜ್ ಕೋಣಂದೂರು,
ಸಂತೋಷ್ ಕುಮಾರ್ ಆಯ್ಕೆಯಾದರು.
ಈ ಸಂದರ್ಭದಲ್ಲಿ
ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ವೈದ್ಯನಾಥ, ಕಾರ್ಯದರ್ಶಿ ಹಾಲಸ್ವಾಮಿ,
ರಾಜ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಟೆಲೆಕ್ಸ್ ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ
ಸತ್ಯನಾರಾಯಣ, ಹುಚ್ಚರಾಯಪ್ಪ, ಖಜಾಂಚಿ ರೋಹಿತ್, ತಾಲ್ಲೂಕು ಉಸ್ತುವಾರಿ ರಾಘು ಶೆಟ್ಟಿ ಚುನಾವಣಾ
ಪ್ರಕ್ರಿಯೆಯನ್ನು ನಡೆಸಿದರು.
