ಇಬ್ಬರು ಆರೋಪಿಗಳನ್ನು
ಬಂಧಿಸಿದ ಅರಣ್ಯ ಇಲಾಖೆ
ಮಂಡಗದ್ದೆ ಆರ್‌ಎಫ್‌ಓ
ವಿನಯಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ
ತೀರ್ಥಹಳ್ಳಿ ತಾಲ್ಲೂಕಿನ
ಕಣಗಲುಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ 33 ಕೆಜಿ 250 ಗ್ರಾಂ ತೂಕದ ಶ್ರೀಗಂಧದ ತುಂಡುಗಳನ್ನು ಸಾಗಾಣೆಗೆ
ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಡಗದ್ದೆ ವಲಯಾರಣ್ಯಾಧಿಕಾರಿ ವಿನಯಕುಮಾರ್ ನೇತೃತ್ವದ
ತಂಡ ಸೋಮವಾರ ಬಂಧಿಸಿದೆ.
ಮೇಲಿನ ಪಟ್ರೊಳ್ಳಿ
ಗ್ರಾಮದ ಸರ್ವೆ ನಂಬರ್ 6 ರಲ್ಲಿ ಶ್ರೀಗಂಧದ ಮರವನ್ನು ಕಡಿತಲೆ ಮಾಡಿ ಅದರ ತುಂಡುಗಳನ್ನು ಇಬ್ಬರು
ಆರೋಪಿಗಳು ಸಂಗ್ರಹಿಸಿಟ್ಟಿದ್ದರು. ತುಂಡುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಆರೋಪಿಗಳಾದ ಕಣಗಲುಕೊಪ್ಪದ
ಸತೀಶ್ (32), ಪ್ರಕಾಶ್ (32) ಪ್ರಯತ್ನಿಸುತ್ತಿದ್ದರು.
ಖಚಿತ ಮಾಹಿತಿ ತಿಳಿದ
ಮಂಡಗದ್ದೆ ವಲಯಾರಣ್ಯಾಧಿಕಾರಿ ನೇತೃತ್ವದ ತಂಡ ಸೋಮವಾರ ಕಾರ್ಯಾಚರಣೆ ನಡೆಸಿದೆ. ಕಾರ್ಯಚಾರಣೆಯಲ್ಲಿ
ತುಂಡುಗಳ ಸಹಿತ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ
ವಶಪಡಿಸಿಕೊಂಡಿದ್ದಾರೆ.
ಡಿಎಫ್‌ಓ ಅಜ್ಜಯ್ಯ,
ಎಸಿಎಫ್ ಮಧುಸೂದನ್ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಚರಣೆಯಲ್ಲಿ ಡಿಆರ್‌ಎಫ್‌ಓ
ಅಮಿತ್, ಅರಣ್ಯ ರಕ್ಷಕ ಸಿಬ್ಬಂದಿಗಳಾದ ಕಿರಣಕುಮಾರ್, ಮಹಾದೇವ್, ಚಾಲಕ ಅರುಣ್ ಮತ್ತಿತರರು ಇದ್ದಾರೆ.
