ಜಿಲ್ಲಾ ಯುವಮೋರ್ಚಾ
ಅಧ್ಯಕ್ಷರಾಗಿ ಪ್ರಶಾಂತ್ ಕುಕ್ಕೆ ಮರು ಆಯ್ಕೆ
ಜಿಲ್ಲೆಯಲ್ಲಿ ಯುವಶಕ್ತಿ
ಸಂಘಟಿಸಿದ ಪ್ರಬಲವಾದ ಯುವ ನಾಯಕ
ಶಿವಮೊಗ್ಗ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾಗಿ ಎರಡನೇ ಅವಧಿಗೆ ಯುವ ನಾಯಕ ಪ್ರಶಾಂತ್ ಕುಕ್ಕೆ ಮರು ಆಯ್ಕೆಯಾಗಿದ್ದಾರೆ. ಪ್ರಥಮವೆಂಬತೆ ಜಿಲ್ಲಾ ಯುವಮೋರ್ಚಾ ಇತಿಹಾಸದಲ್ಲಿಯೇ ಹಾಲಿ ಅಧ್ಯಕ್ಷರೊಬ್ಬರು ಪುನಾಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ತನ್ನ ಚುರುಕು ವ್ಯಕ್ತಿತ್ವದ ಮೂಲಕ ಬಿಜೆಪಿ ಸಂಘಟನೆಯನ್ನು ಬಲಪಡಿಸುವಲ್ಲಿ ಶ್ರಮಿಸುತ್ತಿರುವ ಅವರು ರಾಜ್ಯ ಯುವಮೋರ್ಚಾದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಜಿಲ್ಲಾ ಸಂಘಟಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಎಲ್ಲಾ ತಾಲ್ಲೂಕು ವ್ಯಾಪ್ತಿಯಲ್ಲಿ ಯುವಕರನ್ನು ಸೆಳೆಯುವ ಜೊತೆಗೆ ಬಿಜೆಪಿ ವಿಚಾರಧಾರೆಯನ್ನು ತಲುಪಿಸಿ ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ.
ಕುಡುಮಲ್ಲಿಗೆ ಕೃಷಿ
ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯ ಸಹಕಾರ ವ್ಯವಸ್ಥೆಯಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ
ಅವರು ತೀರ್ಥಹಳ್ಳಿಯ ಹೊದಲ-ಅರಳಾಪುರ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಒಂದು ಅವಧಿಯ ತಾಲ್ಲೂಕು ಪಂಚಾಯಿತಿಯ
ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ABVP ಸಂಪರ್ಕದಲ್ಲಿ ಬೆಳೆದು ಬಂದಿರುವ
ಅವರು ಪಿಯು ವ್ಯಾಸಂಗದ ಅವಧಿಯಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪದವಿ ವ್ಯಾಸಂಗದ ಅವಧಿಯಲ್ಲೂ ಸತತ 3 ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಯಶಸ್ವಿಯಾಗಿ
ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿ ಉತ್ತಮ ಶೈಕ್ಷಣಿಕ ಸಾಧನೆ ಜೊತೆಗೆ ನಾಯಕತ್ವದ
ಗುಣವನ್ನು ತೋರ್ಪಡಿಸಿದ್ದರು.
ಮೈಸೂರಿನ ಕರ್ನಾಟಕ
ಮುಕ್ತ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ರಾಷ್ಟ್ರವಾದಿ
ಚಿಂತನೆಯನ್ನು ಮೈಗೂಡಿಸಿಕೊಂಡಿದ್ದರು. RSS ನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಂಘದ ಪ್ರಾಥಮಿಕ
ಶಿಕ್ಷಾವರ್ಗ ಪೂರೈಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಭಾರತ ಮತ್ತು ನೇಪಾಳ
ಗಡಿಯಲ್ಲಿ ನಡೆದ ಸರಹದ್ದು ಪ್ರಣಾಮ್ ಕಾರ್ಯಕ್ರಮದ
ಶಿಬಿರದಲ್ಲಿ 7 ದಿನಗಳ ಕಾಲ ಭಾಗಿಯಾಗಿದ್ದರು.
ಮೂರುವರೆ ವರ್ಷ ತೀರ್ಥಹಳ್ಳಿ
ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ, 3 ವರ್ಷಗಳ ಕಾಲ ತೀರ್ಥಹಳ್ಳಿ ಬಿಜೆಪಿ
ಯುವಮೋರ್ಚಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಬಿಜೆಪಿ ವಿಚಾರಧಾರೆಯನ್ನು ತಲುಪಿಸಿ ಹೊಸ ಉತ್ಸಾಹಿ ಯುವ
ಪಡೆಯನ್ನು ಕಟ್ಟಿ ಯಶಸ್ವಿಯಾಗಿ ಮುನ್ನಡೆಸಿ ಇಡೀ ತೀರ್ಥಹಳ್ಳಿಯಲ್ಲಿ ಮನೆ ಮಾತಾದರು. ನಾಲ್ಕು ವರ್ಷಗಳ
ಕಾಲ ಶಿವಮೊಗ್ಗ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಒಂದು ಅವಧಿಯ ಜಿಲ್ಲಾ ಯುವಮೋರ್ಚಾ
ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಜಿಲ್ಲೆಯಲ್ಲದೆ ರಾಜ್ಯದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.
ಮಾಜಿ ಗೃಹಸಚಿವ,
ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರ ನಾಯಕತ್ವ, ಸಂಘಟನಾತ್ಮಕ ಶಕ್ತಿಯಲ್ಲಿ ಪಳಗಿರುವ ಪ್ರಶಾಂತ್ ಕುಕ್ಕೆ
ಬಿಜೆಪಿ ಪಕ್ಷದಲ್ಲಿ ನೀಲಿಗಣ್ಣಿನ ಸದಾ ಚಲನಶೀಲ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ. ಮಾಜಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ
ಸೇರಿದಂತೆ ರಾಜ್ಯ ಬಿಜೆಪಿಯ ಎಲ್ಲಾ ನಾಯಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ಅವರು ಸಂಘಟನೆಯನ್ನು
ಬಲಪಡಿಸುವ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದಾರೆ.
