ನೂತನ
ಧ್ವನಿ, ಬೆಳಕಿನ ವ್ಯವಸ್ಥೆ ಆಗಸ್ಟ್ 8ಕ್ಕೆ ಲೋಕಾರ್ಪಣೆ
ಗಾಯಕಿ
ಎಸ್.ಜಾನಕಿ ನೆನಪಿನ ಸಂಗೀತ ಕಾರ್ಯಕ್ರಮ
ತೀರ್ಥಹಳ್ಳಿ
ಪಟ್ಟಣ ಪಂಚಾಯತಿ ವತಿಯಿಂದ ಶಾಂತವೇರಿ
ಗೋಪಾಲ ಗೌಡ ರಂಗಮಂದಿರದಲ್ಲಿ
ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ
(ಎಂಎಡಿಬಿ) ಶಿವಮೊಗ್ಗ ವತಿಯಿಂದ ಅಳವಡಿಸಿದ ನೂತನ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯ ಲೋಕಾರ್ಪಣೆ ಮತ್ತು ಖ್ಯಾತ ಹಿನ್ನಲೆ ಗಾಯಕಿ ಎಸ್.ಜಾನಕಿ ನೆನಪಿನಲ್ಲಿ ಸಂಗೀತ ಕಾರ್ಯಕ್ರಮ
ಆಗಸ್ಟ್ 8ರ ಶನಿವಾರ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ ತಿಳಿಸಿದ್ದಾರೆ.
ಇದೇ
ವೇಳೆ 2025-26ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ
ಮತ್ತು ದ್ವಿತೀಯ ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದು ಶೈಕ್ಷಣಿಕ ಸಾಧನೆಗೈದ ತೀರ್ಥಹಳ್ಳಿ ಪಟ್ಟಣದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಹಮ್ಮಿಕೊಳ್ಳಲಾಗಿದೆ. ಪ್ರತಿಭಾ ಪುರಸ್ಕಾರವನ್ನು ಶಾಸಕ ಆರಗ ಜ್ಞಾನೇಂದ್ರ
ನೇರವೇರಿಸಲಿದ್ದಾರೆ. ಗೋಪಾಲಗೌಡ ರಂಗಮಂದಿರದಲ್ಲಿ ಅಳವಡಿಸಲಾದ ನೂತನ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗೆ ಮಲೆನಾಡು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ ಚಾಲನೆ ನೀಡಲಿದ್ದಾರೆ. ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ
ನಾಬಳ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ ಉಪಸ್ಥಿತಿ ಇರಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಶಶಿಕುಮಾರ್ ಕಾರಂತ್, ಧನ್ ಪಾಲ್ ಸಿಂಗ್ ರಜಪೂತ್, ಉಷಾ ಹೆಚ್.ಎಸ್., ಅನ್ನಪೂರ್ಣ ಕಾರಂತ್, ಸಿಂಚನ ಗೋಪಾಲ್ ಮತ್ತು ಇತರರಿಂದ ಎಸ್.ಜಾನಕಿ
ಅವರ ಗೀತೆಗಳ ಸಂಗೀತ ಕಾರ್ಯಕ್ರಮ ಅಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ
ರತ್ನಾಕರ್ ಶೆಟ್ಟಿ ಕೋರಿದ್ದಾರೆ.
