ಬ್ರಾಹ್ಮಣ ಸಂಘ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತುಳುನಾಡು ಸಿರಿ ಸೌಹಾರ್ದ ಸಹಕಾರಿ, ಪೊಲೀಸ್ ಠಾಣೆ ತೀರ್ಥಹಳ್ಳಿ ಸಂಯುಕ್ತ ಆಶ್ರಯದಲ್ಲಿ ಟೀಂ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಡಿಸೆಂಬರ್ 6 ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಗಾಯತ್ರಿ ಮಂದಿರದಲ್ಲಿ ಉಚಿತ ಕಿವಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶ್ರವಣದೋಷ ಸಮಸ್ಯೆಯಿಂದ ಬಳಲುತ್ತಿರುವವರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಶ್ರವಣ ಯಂತ್ರಕ್ಕೆ ಶೇಕಡಾ 40 ರಷ್ಟು ಸಹಾಯಧನ ಸೌಲಭ್ಯ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ 8951804399 ಸಂಪರ್ಕಿಸಬಹುದು.

