ರಾತ್ರಿ ತೋಟದಲ್ಲಿ ಇಟ್ಟಿದ್ದ ಡ್ರಮ್ ಒಡೆದ ಆನೆ
ಮಾಹಿತಿ ನೀಡಿದರು ಅರಣ್ಯ ಅಧಿಕಾರಿಗಳು ಬರಲ್ಲ

ತೀರ್ಥಹಳ್ಳಿ ತಾಲ್ಲೂಕಿನ ಕನ್ನಂಗಿ ಸಮೀಪದ ಜೋಗಿಕೊಪ್ಪ, ಸಾಲೇಕೊಪ್ಪ, ಅವಲಗೆರೆ ವ್ಯಾಪ್ತಿಯಲ್ಲಿ ರಾತ್ರಿ ಒಂಟಿ ಕಾಡಾನೆ ಸಂಚಾರ ನಡೆಸಿದೆ. ಮನೆ ಹಾಗೂ ತೋಟಗಳಲ್ಲಿ ಸಂಚರಿಸಿರುವ ಆನೆ ಡ್ರಮ್ ಸೇರಿದಂತೆ ಬೆಳೆಗಳಿಗೆ ಹಾನಿ ಮಾಡಿದೆ.
ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಿದರು ಆಯ್ತು ಹತ್ರ ಹೋಗಬೇಡಿ ಎನ್ನುತ್ತಾರೆ. ಆದ್ರೆ ಹೇಳಿದ ಸ್ಥಳಕ್ಕೆ ಬರಲ್ಲ. ಅರಣ್ಯ ಇಲಾಖೆ ಕೆಲವು ಸಿಬ್ಬಂದಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಪ್ರಾಣ ಹಾನಿಯಾದ ಮೇಲೆ ಸ್ಥಳಕ್ಕೆ ಬರುತ್ತಾರಾ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದು. ಆನೆಯನ್ನು ಸ್ಥಳದಿಂದ ಓಡೆಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.