ನಟಮಿತ್ರರು ತಂಡದ 'ಸನ್ಮಾನ ಸುಖ' ಹಾಸ್ಯ ನಾಟಕ ಪ್ರದರ್ಶನ
ಕ್ರಿಸ್ತ ಜಯಂತಿಯ 2025 ವರ್ಷಗಳ ಮಹಾ ಜ್ಯೂಬಿಲಿ ಕಾರ್ಯಕ್ರಮದ ಅಂಗವಾಗಿ ತೀರ್ಥಹಳ್ಳಿ ಧರ್ಮಕೇಂದ್ರದ "ಸೌಹಾರ್ದ ಜ್ಯೂಬಿಲಿ" ಕಾರ್ಯಕ್ರಮ ಸಂಜೆ 5.30 ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿಶೇಷವಾಗಿ ನಟಮಿತ್ರರು ಹವ್ಯಾಸಿ ಕಲಾ ಬಳಗದ ತಂಡದಿಂದ ಒಂದು ಗಂಟೆಗಳ ಕಾಲ ನಕ್ಕು ನಗಿಸುವ ಹಾಸ್ಯ ನಾಟಕ "ಸನ್ಮಾನ ಸುಖ" ಪ್ರದರ್ಶನಗೊಳ್ಳಲಿದೆ.
'ಕ್ರಿಸ್ಮಸ್ ಸೌಹಾರ್ದ ಜ್ಯೂಬಿಲಿ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ. ಮಂಜುನಾಥ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚರ್ಚ್ ಧರ್ಮಗುರುಗಳಾದ ಫಾದರ್ ವೀರೇಶ್ ವಿಕ್ಟರ್ ಮೋರಸ್ ಉಪಸ್ಥಿತಿ ಇರಲಿದ್ದಾರೆ.
ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸಬೇಕೆಂದು ಕಥೋಲಿಕ ಅಶೋಸಿಯೇಶನ್ ಅಧ್ಯಕ್ಷ ಅನಿಲ್ ಡಿಸೋಜ, ಕಾರ್ಯದರ್ಶಿ ಓವಿನ್ ಡಿಸೋಜ ಎರಡೂ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕೋರಿಕೊಂಡಿದ್ದಾರೆ.