ಡಿಸೆಂಬರ್ 26ಕ್ಕೆ “ಕೊಡಲ್ಲ ಅಂದ್ರ ಕೊಡಲ್ಲ”

ನಟ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಂಗತ ತಂಡದ ನಾಟಕ
ಇಟಾಲಿಯ 'ಕಾಂಟ್ ಪೇ ವೋಂಟ್ ಪೇ' ರೂಪಾಂತರ


ನೋಬೆಲ್ ಪ್ರಶಸ್ತಿ ಪುಸ್ಕೃತ ಬರಹಗಾರ ದಾರಿಯೋ ಪೋ ಅವರ “ಕಾಂಟ್ ಪೇ ವೋಟ್ ಪೇ” ಕನ್ನಡ ರೂಪಾಂತರ “ಕೊಡಲ್ಲ ಅಂದ್ರ ಕೊಡಲ್ಲ” ನಾಟಕ ಪ್ರದರ್ಶನ ಡಿಸೆಂಬರ್ 26ರ ಶುಕ್ರವಾರ ಸಂಜೆ 7 ಗಂಟೆಗೆ ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ. ಮೈಸೂರಿನ ನಿರ್ದಿಗಂತ ರಂಗ ತಂಡ ಅಭಿನಯಿಸುವ ನಾಟಕದ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನವನ್ನು ಶಕೀಲ್ ಅಹ್ಮದ್ ಮಾಡಿದ್ದಾರೆ. ಸಂಗೀತದಲ್ಲಿ ಅನುಷ್ ಶೆಟ್ಟಿ, ನೇಪಥ್ಯ ಶ್ವೇತಾರಾಣಿ ಎಚ್.ಕೆ., ಬೆಳಕಿನ ವಿನ್ಯಾಸ ಮಂಜುನಾಥ ಹಿರೇಮಠ, ಪರಿಕರ ವಿನೀತ್ ಕುಮಾರ್, ಬೆಳಕಿನ ನಿರ್ವಹಣೆಯನ್ನು ಆಸಪ್ ಹೂವಿನ ಹಡಗಲಿ ನಿರ್ವಹಿಸಲಿದ್ದಾರೆ ಎಂದು ಎಂದು ರಂಗ ಗೆಳೆಯರು ಬಳಗದ ಕಡಿದಾಳು ದಯಾನಂದ ತಿಳಿಸಿದರು.
ಇದು ಬೆಲೆ ಏರಿಕೆ, ಆರ್ಥಿಕ ಸಂಕಷ್ಟ ಮತ್ತು ಹೆಚ್ಚುತ್ತಿರುವ ತೆರಿಗೆಯನ್ನು ವಿರೋಧಿಸಿ ನಿಲ್ಲುವ ಒಂದು ರಾಜಕೀಯ ಪ್ರಹಸನ, ಆಹಾರದ ಬೆಲೆ ಏರಿಕೆಯಿಂದ ಕೋಪಗೊಂಡ ಮಹಿಳೆಯರ ಗುಂಪೊಂದು ಸೂಪರ್ ಮಾರ್ಕೆಟ್‌ಗೆ ದಾಳಿ ಮಾಡಿ ಹಣ ನೀಡದೆ ದಿನಸಿಗಳನ್ನು ತೆಗೆದುಕೊಂಡು ಹೋಗುವುದರೊಂದಿಗೆ 'ಶುರುವಾಗುವ ಕಥೆ, ಮಹಿಳೆಯರೆಲ್ಲ ತಮ್ಮ ಗಂಡಂದಿರಿಗೆ ಹೆದರಿ ತಂದ ಸಾಮಾನುಗಳನ್ನು ಮುಚ್ಚಿ ಇಡುವುದರಲ್ಲಿ ಪಡುವ ಹರಸಾಹಸದೊಂದಿಗೆ ಬೆಳೆಯುತ್ತಾ ಹೋಗುತ್ತದೆ. ಹೆಂಗಸರು ಸಾಮಾನುಗಳನ್ನೆಲ್ಲ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಾ ಗರ್ಭಿಣಿಯರಂತೆ ನಟಿಸುವುದು ಇಡೀ ವ್ಯವಸ್ಥೆನ್ನೇ ಹಂಗಿಸುತ್ತದೆ.

ಗಂಡಂದಿರು ಮೊದಮೊದಲು ಇದನ್ನೆಲ್ಲಾ ವಿರೋಧಿಸಿದರೂ ಕೊನೆಗೆ ಶ್ರೀಮಂತರನ್ನು ರಕ್ಷಿಸುತ್ತಾ ಬಡವರನ್ನು ಶಿಕ್ಷಿಸುವ ವ್ಯವಸ್ಥೆಯ ಅನ್ಯಾಯವನ್ನು ಮನಗಾಣುತ್ತಾರೆ. ಅಧಿಕಾರದ ಮದದಿಂದ ಮನೆ ಮನೆಗೆ ನುಗ್ಗಿ ಧಾಂದಲೇ ಎಬ್ಬಿಸುವ ಪೋಲೀಸ್ ವ್ಯವಸ್ಥೆಯು ಒಗ್ಗಟ್ಟಾದ ಜನರ ಮುಂದೆ ಹಾಸ್ಯಾಸ್ಪದವಾಗಿ ಕಾಣುತ್ತದೆ. ದೈನಂದಿನ ಹೋರಾಟಗಳನ್ನೇ ತೀಕ್ಷಣ್ವಾದ

ರಾಜಕೀಯ ವಿಡಂಬನೆಯಾಗಿ ಪರಿವರ್ತಿಸುವ ನಾಟಕ, ಇಬ್ಬರೂ ಗಂಡಂದಿರು ಜಗಳ ಬಿಟ್ಟು ತಮ್ಮ ಹೆಂಡತಿಯರೊಂದಿಗೆ ನಿಲ್ಲುವುದರ ಮೂಲಕ ಕೇವಲ ನಗುವಿನಲ್ಲಿ ಮಾತ್ರವಲ್ಲದೇ, ದಬ್ಬಾಳಿಕೆಯ ವ್ಯವಸ್ಥೆಯ ವಿರುದ್ಧ ಸಾಮಾನ್ಯ ಜನರು ಒಂದಾಗುವುದರೊಂದಿಗೆ ಒಗ್ಗಟ್ಟಿನ ಕರೆಯಲ್ಲಿ ಕೊನೆಗೊಳ್ಳುತ್ತದೆ.

ರಂಗದ ಮೇಲೆ ಸಲ್ಮಾ ದಂಡಿನ್, ದಿನೇಶ್ ನಾಯ್, ಚರಿತ್ ಸುವರ್ಣ, ಚರಿತಾ ಶಾರದಾ ಮಂಜುನಾಥ ಮಂಡಲಗೇರಿ ನಟಿಸಿದ್ದಾರೆ.

ರಂಗಕರ್ಮಿ ಮ್ಯಾಥ್ಯೂ ಸುರಾನಿ, ಕಲಾವಿದ ಮಂಜುನಾಥ ಶಿರುಪತಿ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post