ಬಹುರಾಷ್ಟ್ರೀಯ ಕಂಪನಿ ಮಾದರಿಯಲ್ಲಿ ಕಟ್ಟಡ
ತೂದೂರು ಗ್ರಾಮ ಪಂಚಾಯತ್ ನೂತನ ಕಟ್ಟಡದ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು. ಕಟ್ಟಡದ ವಿನ್ಯಾಸದ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಅವರು "ಈ ಕಟ್ಟಡದ ವಿನ್ಯಾಸ ಅಪರೂಪದ್ದಾಗಿದೆ. ಒಂದು ಬಹುರಾಷ್ಟ್ರೀಯ ಕಂಪನಿ ಆಫೀಸ್ ಗೆ ಕಾಲಿಟ್ಟ ಅನುಭವ ನೀಡುತ್ತದೆ ಎಂದ ಅವರು ಗ್ರಾಮದ ಶೋಭೆಯನ್ನು ಹೆಚ್ಚಿಸುವ ಇಂತಹ ಕಟ್ಟಡಗಳು ಎಲ್ಲ ಕಡೆ ನಿರ್ಮಾಣ ಆಗಬೇಕು ಎಂದರು. ಇದೇ ಸಂಧರ್ಭದಲ್ಲಿ ಅವರು ಶರಾವತಿ ಸಂತ್ರಸ್ತರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಆಗುತ್ತಿದೆ. ಜೊತೆಗೆ 2015ರ ಮೊದಲು ಬಗರ್ ಹುಕುಂ ಸಾಗುವಳಿ ಮಾಡಿರುವ ರೈತರ ಒತ್ತುವರಿ ತೆರವು ಕೂಡದು ಎಂದು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ತೂದೂರು ಗ್ರಾಮ ಪಂಚಾಯತಿಗೆ 56 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕೆಲಸ ನೀಡಲಾಗಿದೆ. ಇದೊಂದು ಮಾದರಿ ಗ್ರಾಮ ಪಂಚಾಯತ್ ಎಂದರಲ್ಲದೆ ನಾನು ರಾಗ ದ್ವೇಷಗಳಿಂದ ಮುಕ್ತ ನಾಗಿರುವ ರಾಜಕಾರಣಿ. ಐದು ಸಲ ಗೆದ್ದು ಸೋತಿರುವೆ. ಸಿದ್ಧಾಂತ ಆಧಾರಿತ ಟೀಕೆ ಬಿಟ್ಟರೆ ವಯುಕ್ತಿಕ ಟೀಕೆ ನನ್ನ ಸಂಸ್ಕೃತಿ ಅಲ್ಲ ಎಂದರು.
ಎಂ ಎ ಡಿ ಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ದೇವರಾಜ್ ಇನ್ನಿತರರು ಮಾತನಾಡಿದರು. ಸದಸ್ಯ ಮಧುರಾಜ್ ಹೆಗ್ಡೆ ಸ್ವಾಗತ ಹಾಗೂ ಭುಜಂಗ ಪೂಜಾರಿ ಪ್ರಸ್ತಾಪ ಮತ್ತು ಉಪಾಧ್ಯಕ್ಷ ಶರತ್ ಕಾವೇರಿ ವಂದನಾರ್ಪಣೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ವಿವಿಧ ಮುಖಂಡರು ಗ್ರಾಮಸ್ಥರು ಹಾಜರಿದ್ದರು.

ಎಂ ಎ ಡಿ ಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ದೇವರಾಜ್ ಇನ್ನಿತರರು ಮಾತನಾಡಿದರು. ಸದಸ್ಯ ಮಧುರಾಜ್ ಹೆಗ್ಡೆ ಸ್ವಾಗತ ಹಾಗೂ ಭುಜಂಗ ಪೂಜಾರಿ ಪ್ರಸ್ತಾಪ ಮತ್ತು ಉಪಾಧ್ಯಕ್ಷ ಶರತ್ ಕಾವೇರಿ ವಂದನಾರ್ಪಣೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ವಿವಿಧ ಮುಖಂಡರು ಗ್ರಾಮಸ್ಥರು ಹಾಜರಿದ್ದರು..
ತೂದುರು ಗ್ರಾಮ ಪಂಚಾಯತ್ ನೂತನ ಕಟ್ಟಡದ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು. ಕಟ್ಟಡದ ವಿನ್ಯಾಸದ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಅವರು "ಈ ಕಟ್ಟಡದ ವಿನ್ಯಾಸ ಅಪರೂಪದ್ದಾಗಿದೆ. ಒಂದು ಬಹುರಾಷ್ಟ್ರೀಯ ಕಂಪನಿ ಆಫೀಸ್ ಗೆ ಕಾಲಿಟ್ಟ ಅನುಭವ ನೀಡುತ್ತದೆ ಎಂದ ಅವರು ಗ್ರಾಮದ ಶೋಭೆಯನ್ನು ಹೆಚ್ಚಿಸುವ ಇಂತಹ ಕಟ್ಟಡಗಳು ಎಲ್ಲ ಕಡೆ ನಿರ್ಮಾಣ ಆಗಬೇಕು ಎಂದರು. ಇದೇ ಸಂಧರ್ಭದಲ್ಲಿ ಅವರು ಶರಾವತಿ ಸಂತ್ರಸ್ತರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಆಗುತ್ತಿದೆ. ಜೊತೆಗೆ 2015ರ ಮೊದಲು ಬಗರ್ ಹುಕುಂ ಸಾಗುವಳಿ ಮಾಡಿರುವ ರೈತರ ಒತ್ತುವರಿ ತೆರವು ಕೂಡದು ಎಂದು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ತೂದೂರು ಗ್ರಾಮ ಪಂಚಾಯತಿಗೆ 56 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕೆಲಸ ನೀಡಲಾಗಿದೆ. ಇದೊಂದು ಮಾದರಿ ಗ್ರಾಮ ಪಂಚಾಯತ್ ಎಂದರಲ್ಲದೆ ನಾನು ರಾಗ ದ್ವೇಷಗಳಿಂದ ಮುಕ್ತ ನಾಗಿರುವ ರಾಜಕಾರಣಿ. ಐದು ಸಲ ಗೆದ್ದು ಸೋತಿರುವೆ. ಸಿದ್ಧಾಂತ ಆಧಾರಿತ ಟೀಕೆ ಬಿಟ್ಟರೆ ವಯುಕ್ತಿಕ ಟೀಕೆ ನನ್ನ ಸಂಸ್ಕೃತಿ ಅಲ್ಲ ಎಂದರು.