ಹೆದ್ದೂರು ಮಂಜುನಾಥ್ ಶೆಟ್ಟಿ ನಿರ್ದೇಶನದ ಪಾಠಶಾಲಾ ಚಲನಚಿತ್ರ ಇಂದು ಬಿಡುಗಡೆಯಾಗಿದೆ.
ಸರ್ಕಾರಿ ಪಾಠಶಾಲೆಯ ಮಕ್ಕಳು ಅವರಿಗೆ ಗೊತ್ತಿಲ್ಲದ ಹಾಗೆ ತಮ್ಮೂರಿನ ಕಾಡುಗಳ್ಳರನ್ನು ಹಿಡಿದು ಕೊಡುವುದು ಇದರ ಕಥೆ.
ಅತ್ಯಂತ ಸುಂದರ ಛಾಯಾಗ್ರಹಣದೊಂದಿಗೆ ತೀರ್ಥಹಳ್ಳಿಯ ಮಲೆನಾಡ ಗದ್ದೆ, ತೋಟ, ಮಳೆ, ಜಲಪಾತ,ಅಂಟಿಗೆ ಪಂಟಿಗೆ, ಸಸಿನಟ್ಟಿ, ಗೋಪೂಜೆ, ಮುಂತಾದುವುಗಳನ್ನು ಕಲಾತ್ಮಕವಾಗಿ ಕಟ್ಟಿ ಕೊಡುವುದು ಈ ಚಿತ್ರದ ಹೆಗ್ಗಳಿಕೆ.
ತಮ್ಮ ಪಾಡಿಗೆ ತಾವು ಕೃಷಿ ಕೆಲಸದಲ್ಲಿ ಮುಳುಗಿ ಅದರಲ್ಲಿಯೇ ಖುಷಿ ಕಾಣುವ ಸಂಜೀವ ಕಾಡಿಗೆ ಶಿಕಾರಿ ಮಾಡಲು ರೇಂಜರ್ ಕೈ ಸಿಕ್ಕಿ ಹಾಕಿ ಕೊಳ್ಳುವುದರೊಂದಿದೆ ಕಥೆ ತಿರುವು ಪಡೆಯುತ್ತ ಹೋಗುತ್ತದೆ.ಸಿಕ್ಕಿದ ಸಂಜೀವನ ಅಪರಾಧ ಸಾಬೀತು ಮಾಡಲು ಸಾಧ್ಯವಾಗದ ರೇಂಜರ್ ಮುಂದೆ ಆತನನ್ನು ಜಿಂಕೆ ಬೇಟೆ ಹಗರಣಕ್ಕೆ ಸಿಲುಕಿಸಿ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಆಗ ಸಂಜೀವನ ಸಮೇತ ಆತನ ಸ್ನೇಹಿತರು ಕೂಡ ಊರು ಬಿಟ್ಟು ಕಾಡು ಸೇರಬೇಕಾಗುತ್ತದೆ.ಅವರು ಆರೋಪದಿಂದ ಹೊರಬಂದು ಮನೆ ಸೇರುತ್ತಾರೆಯೇ ಎನ್ನುವುದು ಅಂತಿಮ ದೃಶ್ಯದಲ್ಲಿ ಗೊತ್ತಾ ಗುತ್ತದೆ.
ಶಾಲಾ ದೃಶ್ಯಗಳನ್ನು ಸಾಕಷ್ಟು ಸಹಜವಾಗಿ ತೋರಿಸಲು ನಿರ್ದೇಶಕರು ಪ್ರಯತ್ನ ಪಟ್ಟಿದ್ದಾರೆ ಆದರೆ ಅವು ತೀರಾ ಧೀರ್ಘವಾಗಿವೆ.ಕಡೆಯ ಒಂದು ದೃಶ್ಯ ಅನಿರೀಕ್ಷಿತ ತಿರುವು ಪಡೆದು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.
ಸಂಗೀತ(ವಿಕಾಸ್ ವಸಿಷ್ಟ) ಪರವಾಗಿಲ್ಲಮಲೆನಾಡ ಮತ್ತು ಮಕ್ಕಳ ಹಾಡು ಚೆನ್ನಾಗಿದೆ, ನಟನೆ ವಿಚಾರದಲ್ಲಿ ಸಂಜೀವ ಪಾತ್ರಧಾರಿಯಾಗಿ ಕಿರಣ್ ನಾಯಕ್,... ಹೆಂಡತಿಯಾಗಿ ಸೌಮ್ಯ ಪೂರ್ಣೇಶ್.... ರೇಂಜರ್ ಆಗಿ ನಟನ ಪ್ರಶಾಂತ್.... ಮತ್ತು ಇನ್ನೊರ್ವ ರೇಂಜರ್ ಆಗಿ ಬಾಲಾಜಿ ಮನೋಹರ್.... ಗೂಡಂಗಡಿ ಮೋಣು ಸಾಬನಾಗಿ ಗಜ...ಹೆಡ್ ಮಾಸ್ಟರ್ ಆಗಿ ಸುಧಾಕರ್ ಬನ್ನಂಜೆ. ಗಮನ ಸೆಳೆಯುತ್ತಾರೆ...ನಾಯಕ ನಾಗಿ ಅಕ್ಷಯ್ ಮತ್ತು ನಾಯಕಿ ಯಾಗಿ ಸಮೃದ್ಧಿ ಚಿಕ್ಕ ಅವಕಾಶದಲ್ಲಿ ಗಮನ ಸೆಳೆಯುತ್ತಾರೆ.
ಪರಿಸರ ಜಾಗೃತಿ ಮತ್ತು ಸರ್ಕಾರಿ ಶಾಲೆಯ ಜೀವಂತಿಕೆಯನ್ನು ಎತ್ತಿ ಹಿಡಿಯುವ ಕಳಕಳಿ ಕಾರಣಕ್ಕಾಗಿ ಈ ಚಿತ್ರವನ್ನು ಒಮ್ಮೆ ನೋಡಬಹುದಾಗಿದೆ..ವಿಶೇಷ ಎಂದರೆ ಸ್ಥಳೀಯ ಕಲಾವಿದರ ದಂಡೆ ಇಲ್ಲಿದೆ... ಕೇಶವ ಗುತ್ತಳಿಕೆ, ಹೊನ್ನೇಕೆರಿ ಸುಧಾಕರ್ ಶೆಟ್ಟಿ, ಕುರುವಳ್ಳಿ ನಾಗರಾಜ್, ಪ್ರವೀಣ್ ಮಂಡಗದ್ದೆ, ಪ್ರದೀಪ್ ಹೆಗ್ಗೋಡು, ನಾಯಕಿ ಸಮೃದ್ಧಿ.... ರವಿ ಶೆಟ್ಟಿ ಕಟ್ಟೆ ಹಕ್ಕಲು, ನಿರ್ದೇಶಕ ಮಂಜುನಾಥ್ ಶೆಟ್ಟಿ,ನೇಹಾ ಗೌಡ ಆರಗ, ಸುನೈನ, ಪ್ರಣವ್ ಶೆಟ್ಟಿ,ಜೊತೆಗೆ ಬಹುತೇಕ ಪುಟಾಣಿ ಮಕ್ಕಳು ತೀರ್ಥಹಳ್ಳಿಯವರು..