ಹಿರಿಯ ಬಸ್ ಏಜೆಂಟ್, ವರ್ತಕರು
ತೀರ್ಥಹಳ್ಳಿ ಪಟ್ಟಣದ ಹಿರಿಯ ವರ್ತಕ, ಚತುರ ಜೆರಾಕ್ಸ್ ಅಂಗಡಿ ಮಾಲೀಕ, ಬಸ್ ಬುಕ್ಕಿಂಗ್ ಸೇರಿದಂತೆ ಹಲವು ವ್ಯವಹಾರ ಮಾಡುತ್ತಿದ್ದ ಚತುರ ಪ್ರಕಾಶ್ (61) ಶುಕ್ರವಾರ ನಿಧನರಾಗಿದ್ದಾರೆ.
ನಾಲ್ಕೈದು ದಿನಗಳ ಹಿಂದೆ ಬ್ರೈನ್ ಸ್ಟೋಕ್ ಗೆ ಒಳಗಾಗಿದ್ದ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಓರ್ವ ಪುತ್ರ ಇದ್ದಾರೆ.