ಬಿಜೆಪಿ ನಿಷ್ಟರಿಗೆ
ಸಿಗದ ಮನ್ನಣೆ
ಮಂಗಳಗೋಪಿ ನಾಮಪತ್ರ
ಸಲ್ಲಿಕೆ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯ
ತೀರ್ಥಹಳ್ಳಿ ತಾಲ್ಲೂಕು
ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಕಣ ರಂಗೇರಿದೆ. ಬಿಜೆಪಿ ಪಕ್ಷದ ವತಿಯಿಂದ ಶುಕ್ರವಾರ
ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ಈ ನಡುವೆ ಬಿಜೆಪಿ ಪಕ್ಷದ ಆಂತರಿಕ
ಮಟ್ಟದಲ್ಲಿ ಟಿಕೆಟ್ ಹಂಚಿಕೆ ಕುರಿತು ಭಿನ್ನಾಭಿಪ್ರಾಯ ಸ್ಪೋಟಗೊಂಡಿದೆ.
ಇತ್ತೀಚೆಗಷ್ಟೆ ಕಾಂಗ್ರೆಸ್
ತೊರೆದು ಬಿಜೆಪಿಗೆ ಆಗಮಿಸಿದ್ದ ಮಂಗಳಗೋಪಿಗೆ ಟಿಕೆಟ್ ನೀಡಿದ್ದು ಹಲವು ಬಿಜೆಪಿ ನಿಷ್ಟರ ಕೆಂಗಣ್ಣಿಗೆ
ಗುರಿಯಾಗಿದೆ. ನಾವು ಅನೇಕ ವರ್ಷಗಳಿಂದ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇವೆ. ಇದೀಗ
ನಿನ್ನೆಮೊನ್ನೆ ಬಂದವರಿಗೆ ಪಕ್ಷ ಮಣೆ ಹಾಕುತ್ತಿರುವುದು ಎಷ್ಟು ಸರಿ. ಇದು ಪಕ್ಷ ನಿಷ್ಟರಿಗೆ ಬೇಸರ
ತರಿಸುವ ಸಂಗತಿಯಾಗಿದ್ದು ಪಕ್ಷ ನಿಷ್ಟೆಗೆ ಬೆಲೆ ಇಲ್ಲವೇ ಎಂಬ ಅಭಿಪ್ರಾಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ
ವಲಯದಲ್ಲಿ ವ್ಯಾಪಕವಾಗಿ ಅಸಮಧಾನದ ಅಲೆ ಎಬ್ಬಿಸಿದೆ.
ಕೋಣಂದೂರು ಗ್ರಾಮ
ಪಂಚಾಯಿತಿ ಸದಸ್ಯರಾಗಿದ್ದ ಮಂಗಳಗೋಪಿ ಕಾಂಗ್ರೆಸ್ ಪಕ್ಷದಿಂದ ಹಾಲಿ ಟಿಎಪಿಸಿಎಂಎಸ್ ಸದಸ್ಯರಾಗಿ
ಕಾರ್ಯ ನಿರ್ವಹಿಸುತ್ತಿದ್ದು ಕೆಲವು ದಿನಗಳ ಹಿಂದಷ್ಟೇ ಶಾಸಕ ಆರಗ ಜ್ಞಾನೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ
ವಾಪಾಸ್ಸು ಬಂದಿದ್ದರು. ಅವರಿಗೆ ತಕ್ಷಣವೆ ಬಿಜೆಪಿ ಪಕ್ಷ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸ್ಪರ್ಧಿಸಲು
ಅವಕಾಶ ನೀಡುತ್ತಿರುವುದು ಎಷ್ಟು ಸರಿ. ನಾವೆಲ್ಲಾ ಇರುವುದು ಕೇವಲ ಬಿಜೆಪಿ ಪಕ್ಷದ ಸಂಘಟನೆಗಾಗಿ ಮಾತ್ರವೇ
ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಕಟ್ಟಾ ಬಿಜೆಪಿ ಮುಖಂಡರುಗಳು ನಮಗೆಲ್ಲಾ ಟಿಕೆಟ್ ನೀಡಬೇಕೆಂಬ
ಕಿಂಚಿತ್ತೂ ಯೋಚನೆಗಳು ಬಿಜೆಪಿ ಪಕ್ಷಕ್ಕೆ ಇಲ್ಲವೇ ಎಂದು ಪ್ರಶ್ನೆಸುತ್ತಿದ್ದಾರೆ.
