ಮಂಗಳ ಗೋಪಿ, ಕಲ್ಗದ್ದೆ ರತ್ನಾಕರ್ ಬಿಜೆಪಿ ಸೇರ್ಪಡೆ
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಇಂದು ಕಾಂಗ್ರೆಸ್ನ ಪ್ರಮುಖ ಮುಖಂಡರಾದ ಮಾಜಿ ಕೋಣಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಕಲಗದ್ದೆ ರತ್ನಾಕರ್ ಹಾಗೂ ಮಂಗಳ ಗೋಪಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರೂ ಕೂಡ ಅಗ್ರಹಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಯುವ ರಾಜಕಾರಣಿಗಳಾಗಿದ್ದಾರೆ. ಕಲ್ಗದ್ದೆ ರತ್ನಾಕರ್ ಮೂಲತಃ ಕಾಂಗ್ರೆಸ್ ಕಟ್ಟಾಳುವಾಗಿ ಗುರುತಿಸಿಕೊಂಡು ಕೋಣಂದೂರು ಗ್ರಾಮ ಪಂಚಾಯತ್‌ನಲ್ಲಿ ಸದಸ್ಯ ಬಳಿಕ ಅಧ್ಯಕ್ಷನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದ್ದರು. ಬಳಿಕ ಕಾಂಗ್ರೆಸ್ ಅವರಿಗೆ ತಾಲ್ಲೂಕು ಪಂಚಾಯತ್ ಹಾಗೂ ಅವರ ಪತ್ನಿ ವೀಣಾರವರಿಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿತ್ತು.
ಆದರೆ ನಿರ್ಣಾಯಕ
ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಅವರಿಗೆ ಸರಿಯಾಗಿ ಸ್ಪಂದಿಸದ ಕಾರಣ ತೊಳಲಾಟಾದಲ್ಲಿದ್ದ ಅವರು
ಇದೀಗ ಎರಡನೇ ಬಾರಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಮಂಗಳ ಗೋಪಿ ಒಂದು
ಕಾಲದಲ್ಲಿ ಕಟ್ಟಾ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡವರು. ಬಳಿಕ ಬಿಜೆಪಿಯಿಂದ ದೂರ ಸರಿದು ಕಿಮ್ಮನೆ
ರತ್ನಾಕರ್ ಮಂತ್ರಿಯಾಗಿದ್ದ ಕಾಲದಲ್ಲಿ ಕಾಂಗ್ರೆಸ್ ಸೇರಿದ್ದರು. ಬಳಿಕ ಅವರೂ ಕೂಡ ಕೋಣಂದೂರು ಗ್ರಾಮ
ಪಂಚಾಯತ್ ಅಧ್ಯಕ್ಷರಾಗಿದ್ದರು. ಇತ್ತೀಚಿಗೆ ಕೋಣಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆ ಹಾಗೂ
ಸಹಕಾರ ಸಂಘದ ಚುನಾವಣೆಯಲ್ಲಿ ಇವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ನಡುವೆ ಹೊಂದಾಣಿಕೆ ಕೊರತೆಯಿಂದ ಬಿರುಕು ಮೂಡಿತ್ತು. ಅದು ಈಗ ದೊಡ್ಡದಾಗಿ ಇಬ್ಬರೂ ಪಕ್ಷ
ಬಿಡುವ ಹಂತ ತಲುಪಿದೆ. ಇನ್ನೇನು ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ಹತ್ತಿರದಲ್ಲಿ
ಇರುವ ಸಮಯದಲ್ಲಿ ಈ ಬೆಳವಣಿಗೆ ಕುತೂಹಲ ಹುಟ್ಟಿಸಿದೆ
