ತೀರ್ಥಹಳ್ಳಿಯ ಇಮ್ತಿಯಾಜ್
ಸುಲ್ತಾನ್ ಅತ್ಯುತ್ತಮ ಸಂಗೀತ ನಿರ್ದೇಶಕ
ಹೃದಯಶಿವ ನಿರ್ದೇಶನದ
ಬಿಸಿಲು ಕುದುರೆ ಚಿತ್ರದ ಸಂಗೀತಕ್ಕೆ ದೊರೆತ ಮನ್ನಣೆ
2021ನೇ ಸಾಲಿನ ರಾಜ್ಯ
ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು ತೀರ್ಥಹಳ್ಳಿಯ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ, ನಿರ್ದೇಶಕ
ಇಮ್ತಿಯಾಜ್ ಸುಲ್ತಾನ್ ಅತ್ಯುತ್ತಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹೃದಯಶಿವ ನಿರ್ದೇಶನ ಮತ್ತು
ನಿರ್ಮಾಣದ ಬಿಸಿಲು ಕುದುರೆ ಎಂಬ ಚಿತ್ರದ ಸೃಜನಶೀಲ ಸಂಗೀತ ನಿರ್ದೇಶನಕ್ಕಾಗಿ ಇಮ್ತಿಯಾಜ್ ಈ ಗೌರವಕ್ಕೆ
ಪಾತ್ರರಾಗಿದ್ದಾರೆ. ಸುಮಾರು 50 ಚಲನಚಿತ್ರಗಳಿಂದ ಅಷ್ಟೇ ಸಂಖ್ಯೆಯ ಚಲನಚಿತ್ರ ಸಂಗೀತ ನಿರ್ದೇಶಕರು
ಪ್ರಶಸ್ತಿಯ ರೇಸ್‌ನಲ್ಲಿದ್ದರು. ಇದರಲ್ಲಿ ಅತ್ಯಂತ ಅನುಭವಿ ಹಾಗೂ ಖ್ಯಾತ ನಾಮರು ಇದ್ದರು. ಎಲ್ಲರನ್ನು
ಹಿಂದೆ ಸರಿಸಿ ಇಮ್ತಿಯಾಜ್ ಪ್ರಶಸ್ತಿ ಗೆದ್ದಿರುವುದು ಕನ್ನಡ ಸಿನಿಮಾ ಚಿತ್ರರಂಗ ಇವರನ್ನು ಗಮನಿಸುವಂತೆ
ಮಾಡಿದೆ.
ತೀರ್ಥಹಳ್ಳಿ ತಾಲ್ಲೂಕು
ಕೋಣಂದೂರಿನ ಇಮ್ತಿಯಾಜ್ 25 ವರ್ಷಗಳ ಹಿಂದೆ ಗಾಯಕನಾಗಿ ಸಂಗೀತ ಕ್ಷೇತ್ರವನ್ನು ಪ್ರವೇಶಿಸಿದ್ದರು.
ಬಳಿಕ ಖ್ಯಾತ ಹಿಂದೂಸ್ಥಾನಿ ಸಂಗೀತಗಾರ ಹುಮಾಯುನ್ ಹರ್ಲಾಪುರ ಅವರ ಬಳಿ ಹಿಂದೂಸ್ಥಾನಿ ಶಾಸ್ತ್ರೀಯ
ಸಂಗೀತವನ್ನು ಅಭ್ಯಾಸ ಮಾಡಿ ಗಾಯನ ಮತ್ತು ಸಂಗೀತ ನಿರ್ದೇಶನದಲ್ಲಿ ಹೆಸರು ಮಾಡಿದ್ದರು. ಸಿನಿಮಾದಲ್ಲಿ
ಇವರಿಗೆ ಮೊದಲ ಅವಕಾಶ ನೀಡಿದ್ದು ಡಾ.ಹೊಸಕೊಪ್ಪ ಅರುಣ್. ಅವರ ಮತ್ತೆ ಮತ್ತೆ ಎಂಬ ಚಲನಚಿತ್ರದಲ್ಲಿ
ಇಮ್ತಿಯಾಜ್ ಮೊದಲ ಬಾರಿ ಸಂಗೀತ ನಿರ್ದೇಶನ ಮಾಡಿದ್ದರು.
2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ
ಮೊದಲನೇ ಅತ್ಯುತ್ತಮ
ಚಿತ್ರ: ದೊಡ್ಡಹಟ್ಟಿ ಬೋರೇಗೌಡ
ನಿರ್ಮಾಪಕ: ಲೋಕೇಶ
ಕೆ.ಎಂ; ನಿರ್ದೇಶಕ: ರಘು ಕೆ.ಎಂ
ಎರಡನೇ ಅತ್ಯುತ್ತಮ
ಚಿತ್ರ : ಚಾರ್ಲಿ 777
ನಿರ್ಮಾಪಕ: ರಕ್ಷಿತ್
ಶೆಟ್ಟಿ; ನಿರ್ದೇಶಕ: ಕಿರಣ್ ರಾಜ್ ಕೆ.
ಮೂರನೇ ಅತ್ಯುತ್ತಮ
ಚಿತ್ರ: ಬಿಸಿಲು ಕುದುರೆ
ನಿರ್ಮಾಪಕ ಹಾಗೂ
ನಿರ್ದೇಶಕ: ಹೃದಯ ಶಿವ
ವಿಶೇಷ ಸಾಮಾಜಿಕ
ಕಾಳಜಿಯ ಚಿತ್ರ: ಭಾರತೀಯ ಪ್ರಜೆಗಳಾದ ನಾವು
ನಿರ್ಮಾಪಕ ಹಾಗೂ
ನಿರ್ದೇಶಕ: ಕೃಷ್ಣಮೂರ್ತಿ ಚಮರಂ
ಅತ್ಯುತ್ತಮ ಜನಪ್ರಿಯ
ಮನರಂಜನಾ ಚಿತ್ರ: ಯುವರತ್ನ
ನಿರ್ಮಾಪಕ: ವಿಜಯ್
ಕಿರಗಂದೂರು; ನಿರ್ದೇಶಕ: ಸಂತೋಷ್ ಆನಂದ್ ರಾಮ್
ಅತ್ಯುತ್ತಮ ಮಕ್ಕಳ
ಚಿತ್ರ: ಕೇಕ್
ನಿರ್ಮಾಪಕ: ಪರೀಕ್ಷಿತ್
ಕೆ.ಐ; ನಿರ್ದೇಶಕ–ಕಿಶೋರ್
ಮೂಡಬಿದ್ರಿ
ನಿರ್ದೇಶಕರ ಪ್ರಥಮ
ನಿರ್ದೇಶನದ ಅತ್ಯುತ್ತಮ ಚಿತ್ರ: ಬಡವ ರಾಸ್ಕಲ್
ನಿರ್ಮಾಪಕ: ‘ಡಾಲಿ’ ಧನಂಜಯ ಕೆ.ಎ; ನಿರ್ದೇಶಕ:
ಶಂಕರ್ ಎಚ್. (ಶಂಕರ್ ಗುರು)
ಅತ್ಯುತ್ತಮ ಕರ್ನಾಟಕ
ಪ್ರಾದೇಶಿಕ ಭಾಷಾ ಚಿತ್ರ: ನಾಡ ಪೆದ ಆಶಾ (ಕೊಡವ)
ನಿರ್ಮಾಪಕಿ: ಹರಿಣಿ
ಜೆ.ಸಿ; ನಿರ್ದೇಶಕ: ಪ್ರಕಾಶ್ ಕಾರ್ಯಪ್ಪ
ಅತ್ಯುತ್ತಮ ನಟ:
ರಕ್ಷಿತ್ ಶೆಟ್ಟಿ; ಚಿತ್ರ: ಚಾರ್ಲಿ 777
ಅತ್ಯುತ್ತಮ ನಟಿ:
ಅರ್ಚನಾ ಜೋಯಿಸ್; ಚಿತ್ರ: ಮ್ಯೂಟ್
ಅತ್ಯುತ್ತಮ ಪೋಷಕ
ನಟ: ಪ್ರಮೋದ್; ಚಿತ್ರ: ರತ್ನನ್ ಪ್ರಪಂಚ
ಅತ್ಯುತ್ತಮ ಪೋಷಕ
ನಟಿ: ಉಮಾಶ್ರೀ; ಚಿತ್ರ: ರತ್ನನ್ ಪ್ರಪಂಚ
ಅತ್ಯುತ್ತಮ ಕತೆ:
ಮಂಜುನಾಥ್ ಮುನಿಯಪ್ಪ; ಚಿತ್ರ : 9 ಸುಳ್ಳು ಕಥೆಗಳು
ಅತ್ಯುತ್ತಮ ಚಿತ್ರಕತೆ:
ರಘು ಕೆ. ಎಂ; ಚಿತ್ರ : ದೊಡ್ಡಹಟ್ಟಿ ಬೋರೇಗೌಡ
ಅತ್ಯುತ್ತಮ ಸಂಭಾಷಣೆ:
ಬರಗೂರು ರಾಮಚಂದ್ರಪ್ಪ ಚಿತ್ರ : ತಾಯಿ ಕಸ್ತೂರ್ ಗಾಂಧಿ
ಅತ್ಯುತ್ತಮ ಛಾಯಾಗ್ರಹಣ:
ಭುವನೇಶ್ ಪ್ರಭು; ಚಿತ್ರ: ಆಮ್ಮೆ ಸಂಸಾರ (ಕೊಂಕಣಿ)
ಅತ್ಯುತ್ತಮ ಸಂಗೀತ
ನಿರ್ದೇಶನ: ಇಮ್ತಿಯಾಜ್ ಸುಲ್ತಾನ್; ಚಿತ್ರ: ಬಿಸಿಲು ಕುದುರೆ
ಅತ್ಯುತ್ತಮ ಸಂಕಲನ:
ಪ್ರತೀಕ್ ಶೆಟ್ಟಿ; ಚಿತ್ರ : ಚಾರ್ಲಿ 777
ಅತ್ಯುತ್ತಮ ಬಾಲ
ನಟ: ಮಾಸ್ಟರ್ ಅತೀಶ್ ಶೆಟ್ಟಿ; ಚಿತ್ರ: ಕೇಕ್
ಅತ್ಯುತ್ತಮ ಬಾಲ
ನಟಿ: ಬೇಬಿ ಭೈರವಿ
ಅತ್ಯುತ್ತಮ ಕಲಾನಿರ್ದೇಶನ:
ರವಿ ಸಂತೇಹಕ್ಲು
ಅತ್ಯುತ್ತಮ ಹಿನ್ನೆಲೆ
ಗಾಯಕ: ಅನೀಶ್ ಕೇಶವ್ ರಾವ್
ಅತ್ಯುತ್ತಮ ಹಿನ್ನೆಲೆ
ಗಾಯಕಿ: ಸಹನಾ ಎಂ. ಭಾರದ್ವಾಜ್
ಅತ್ಯುತ್ತಮ ಗೀತ
ರಚನೆ: ನಾಗಾರ್ಜುನ ಶರ್ಮಾ
ತೀರ್ಪುಗಾರರ ವಿಶೇಷ
ಪ್ರಶಸ್ತಿ: ಚಿತ್ರ:
ಭೈರವಿ
ವಸ್ತ್ರವಿನ್ಯಾಸ:
ಯೋಗಿ ಜಿ ರಾಜು
ಪ್ರಸಾಧನ: ಶಿವಕುಮಾರ್
