ಮಾಡಿಫೈಡ್ ಓಮಿನಿ
ಕಾರಿನಲ್ಲಿ ದನ ಸಾಗಾಟ..!
ರಾತ್ರಿ ಪೊಲೀಸ್
ಗಸ್ತು ಕಾರ್ಯಾಚರಣೆ
ತೀರ್ಥಹಳ್ಳಿ ತಾಲ್ಲೂಕಿನಲ್ಲಿ
ದನ ಅಕ್ರಮ ಕಳ್ಳ ಸಾಗಾಣೆ ಪ್ರಕರಣ ಹೆಚ್ಚುತ್ತಿದ್ದು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ರಾತ್ರಿ
ಕಳ್ಳ ಸಾಗಾಣೆಗೆ ಬಳಸಿಕೊಳ್ಳುವ ವಾಹನಗಳನ್ನು ಮತ್ತು ಜಾನುವಾರು ಕಳ್ಳರ ಗ್ಯಾಂಗ್ ಹಿಡಿಯುವಲ್ಲಿ ಬಿಗುವಿನ
ಕಾರ್ಯಾಚರಣೆ ನಡೆಸುತ್ತಿದೆ.
ತೀರ್ಥಹಳ್ಳಿ ಬೆಟ್ಟಮಕ್ಕಿ
ಭೂತರಾಯನ ಕಟ್ಟೆಯ ಹತ್ತಿರ ರಸ್ತೆಯಲ್ಲಿ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ತೀರ್ಥಹಳ್ಳಿ-ಹೊದಲ
ರಸ್ತೆಯ ಕಡೆಯಿಂದ ಸಾಗರ ರಸ್ತೆಯ ಕಡೆಗೆ ಹೋಗುತ್ತಿದ್ದ ಬಿಳಿಯ ಬಣ್ಣದ ಓಮಿನಿ ಕಾರು ತಡೆದು ಪರಿಶೀಲಿಸಿದಾಗ
ವಾಹನದ ಎರಡೂ ಬದಿಯ ಸ್ಲೈಡಿಂಗ್ ಡೋರ್ ವೆಲ್ಡ್ ಮಾಡಿ ಹಿಂಭಾಗದ ಡೋರ್ ಮಾತ್ರ ತೆಗೆಯುವಂತೆ ಮಾಡಿಕೊಂಡಿರುವುದು
ಕಂಡು ಬಂದಿರುತ್ತದೆ. ವಾಹನದಲ್ಲಿ ದನಗಳ ಸಗಣಿ ಅಂಶ ಮತ್ತು ಹಗ್ಗದ ಪೀಸುಗಳು ಇದ್ದು ವಾಹನವನ್ನು ಜಾನುವಾರು
ಸಾಗಣೆ ಮಾಡಲು ಅನುಕೂಲವಾಗುವಂತೆ ಮಾಡಿಫೈಡ್ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.
ಕೂಡಲೇ ಜಾಗೃತರಾದ
ಎ.ಎಸ್.ಐ. ರುದ್ರೇಶ್ವರ ಜಿ.ಎಲ್, ಎ.ಎಸ್.ಐ. ಲೋಕೇಶಪ್ಪ, ಸಿಬ್ಬಂದಿಗಳಾದ ದೀಪಕ್, ಪ್ರದೀಪ, ಕರ್ಣೇಶ,
ರಾಘವೇಂದ್ರ ಕಾರಿನ ಚಾಲಕ ಮೌಸಿನ್ ಖಾನ್ ಹಾಗೂ ಕಾರಿನಲ್ಲಿದ್ದ ಮಹಮದ್ ಮುಸ್ತಾಕ್, ಶಿರಾಜ್ ಉದ್ದೀನ್
ಎಂಬ ಆರೋಪಿಗಳನ್ನು ವಶಪಡಿಸಿಕೊಂಡು ಹೇಳಿಕೆ ದಾಖಲಿಸಿದ್ದಾರೆ.
ಆರೋಪಿಗಳು ತೀರ್ಥಹಳ್ಳಿ
ಸುತ್ತಮುತ್ತಲಿನ ಗ್ರಾಮಗಳಲ್ಲಿ ರಸ್ತೆಯ ಬದಿಯಲ್ಲಿ ಮಲಗುವ ಜಾನುವಾರುಗಳನ್ನು ಕಾರಿನಲ್ಲಿ ಹಾಕಿಕೊಂಡು
ಲಿಂಗಾಪುರದ ವಾಸಿ ಸೈಯ್ಯದ್ ಜಬೀವುಲ್ಲಾ, ಎಜಾಜ್, ಶಿವಮೊಗ್ಗದ ಸಲ್ಮಾನ್ ಅವರಿಗೆ ಜಾನುವಾರು ವಧೆ
ಮಾಡಿ ಮಾಂಸ ಮಾರಾಟ ಮಾಡಲು ಕೊಡಲು ಜಾನುವಾರು ಕಾಲುಗಳನ್ನು ಹಗ್ಗದಲ್ಲಿ ಕಟ್ಟಿಕೊಂಡು ಹೋಗುತ್ತಿರುವುದಾಗಿ
ತಿಳಿಸಿದ್ದಾರೆ. ಮೂವರ ಹೇಳಿಕೆ ಆಧರಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ತೀರ್ಥಹಳ್ಳಿ ಪೊಲೀಸರು
ಪ್ರಥಮ ವರದಿ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಡಿವೈಎಸ್ಪಿ ಅರವಿಂದ್
ಎನ್ ಕಲಗುಜ್ಜಿ, ಇನ್ಸೆಪೆಕ್ಟರ್ ಇಮ್ರಾನ್ ಬೇಗ್ ಪೊಲೀಸ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
