ಕಳ್ಳತನವಾಗಿ ಎರಡು ಗಂಟೆಯೊಳಗೆ ಆರೋಪಿ ವಶ
ರಾಮ ದೇವರ ವಿಗ್ರಹದ ಬಿಲ್ಲು, ಕಾಣಿಕೆ ಕದ್ದ ಕಳ್ಳ
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ರಾಮ ಮಂದಿರದಲ್ಲಿ ಸೋಮವಾರ ರಾತ್ರಿ ರಾಮ ದೇವರ ಕೈಯಲ್ಲಿ ಇದ್ದ ಬಿಲ್ಲು, ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನವಾಗಿತ್ತು. ಈ ಬಗ್ಗೆ ಆಗುಂಬೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕೇವಲ ಎರಡು ಗಂಟೆಯ ಅವಧಿಯಲ್ಲಿ ಆರೋಪಿಯನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ತೀರ್ಥಹಳ್ಳಿ ತಾಲ್ಲೂಕಿನ ಸಂಕದಹೊಳೆ ಗ್ರಾಮದ ಏಳುಮಲೈ ವಾಸಿ ಮನೋಜ್ ಅಲಿಯಾಸ್ ಗುಂಡ ಎಂದು ಗುರುತಿಸಲಾಗಿದೆ. ಆರೋಪಿತನಿಂದ ದೇವಸ್ಥಾನದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕಾರ್ಯಪ್ಪ, ಪೊಲೀಸ್ ಅಧೀಕ್ಷಕ ರಮೇಶ್, ಪೊಲೀಸ್ ಉಪ ಅಧೀಕ್ಷಕ ಅರವಿಂದ್ ಕಲಗುಜ್ಜಿ, ಮಾಳೂರು ವೃತ್ತ ನಿರೀಕ್ಷಕ ಇಮ್ರಾನ್ ಬೇಗ್, ಆಗುಂಬೆ ಠಾಣೆ ಪೊಲೀಸ್ ಉಪ ನಿರೀಕ್ಷಕ ಶಿವನ ಗೌಡ ರವರ ನೇತೃತ್ವದಲ್ಲಿ ಆಗುಂಬೆ ಠಾಣೆ ಸಿಬ್ಬಂದಿಗಳಾದ ಅನಿಲ್, ಸುರೇಶ್, ರಮೇಶ್, ನಾಗಾರ್ಜುನ, ಅವಿನಾಶ್, ಮತಿ ಚೇತನ, ಆದರ್ಶ ಪಾಲ್ಗೊಂಡಿದ್ದರು.