ಎರಡು ದಿನಗಳ ಅಂತರದಲ್ಲಿ ಗೆಳೆಯರಿಬ್ಬರ ನಿಧನ
ಸಹಪಾಠಿ ಗೆಳೆಯರಿಬ್ಬರು
ಕೇವಲ ಎರಡು ದಿನಗಳ ಅಂತರದಲ್ಲಿ ಅಗಲಿದ್ದಾರೆ. ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲಾ ಅಂಚೆ ಕಚೇರಿಯಲ್ಲಿ
ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಜಿ.ಪ್ರಕಾಶ್ (53) ಶ್ವಾಸಕೋಶದ ಸೋಂಕಿನಿಂದ
ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಇವರು ತುಂಗಾ
ಕಾಲೇಜಿನ ಹಳೆಯ ವಿದ್ಯಾರ್ಥಿ. ಬಿ.ಜಿ. ಪ್ರಕಾಶ್ ಹಾಗೂ ಮಗಳು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಶಿವಮೊಗ್ಗದಲ್ಲಿ
ಅರ್ಚಕರಾಗಿ ಜನಪ್ರಿಯರಾಗಿದ್ದ ಶ್ರೀಧರ್ ಅಡಿಗ (53) ಇಂದು ಮುಂಜಾನೆ ಹೃದಯಾಘಾತದಿಂದ ಬೆಂಗಳೂರಿನ
ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಶ್ರೀಧರ್ ಅಡಿಗ ಅವಿವಾಹಿತರಾಗಿದ್ದು ಇಲ್ಲಿನ ಮೇಳಿಗೆ
ಗ್ರಾಮದವರಾಗಿದ್ದಾರೆ. ಇವರು ಪ್ರೌಢಶಿಕ್ಷಣವನ್ನು ತೀರ್ಥಹಳ್ಳಿಯ ಯು.ಆರ್.ಅನಂತಮೂರ್ತಿ ಸರ್ಕಾರಿ ಶಾಲೆಯಲ್ಲಿ
ಮತ್ತು ಬಿಕಾಂ ಪದವಿಯನ್ನು ತುಂಗಾ ಮಹಾವಿದ್ಯಾಲಯದಲ್ಲಿ ಪೂರೈಸಿದ್ದರು. ಬಳಿಕ ಶೃಂಗೇರಿಯ ಶಾರದ ಪೀಠದಲ್ಲಿ
ಶಾಸ್ತ್ರೀಯವಾಗಿ ಪೌರೋಹಿತ್ಯ ಅಭ್ಯಾಸ ಮಾಡಿ ಅರ್ಚಕರಾಗಿದ್ದರು.
