ಸಹಕಾರಿ ರೈತರ ವಿಶ್ವಾಸಾರ್ಹ ವ್ಯವಸ್ಥೆ

ಬಸವಾನಿ ಸೊಸೈಟಿ ನೂತನ ಕಟ್ಟಡ ಲೋಕಾರ್ಪಣೆ
ಪಠ್ಯದೊಳಗೆ ಸಹಕಾರಿ ವ್ಯವಸ್ಥೆ ಪರಿಚಯ - ಮಧು ಬಂಗಾರಪ್ಪ

ತೀರ್ಥಹಳ್ಳಿ : ಸಹಕಾರಿ ವ್ಯವಸ್ಥೆ ಗ್ರಾಮೀಣ ಜನರ ವಿಶ್ವಾಸಗಳಿಸಿದೆ. ಸರ್ಕಾರ ಮಾಡಲಾಗದ ಅನೇಕ ಕೆಲಸಗಳನ್ನು ಇಂತಹ ಸಂಸ್ಥೆಗಳು ಮಾಡುತ್ತಿವೆ. ಇವುಗಳ ಕುರಿತು ಮಕ್ಕಳಿಗೆ ಅಗತ್ಯ ಜ್ಞಾನ ನೀಡಲು ಪಠ್ಯದಲ್ಲಿ ಸೇರಿಸಲು ಚಿಂತನೆ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಭಾನುವಾರ ಬಸವಾನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟದ ಉದ್ಘಾಟಿಸಿ ಅವರು ಮಾತನಾಡಿ, ಕೃಷಿಕರ ಬದುಕು ಗಟ್ಟಿಗೊಳಿಸುವಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸಿದೆ. ರೈತರ ಉದ್ದಾರಕ್ಕಾಗಿ ಉಚಿತ ವಿದ್ಯುತ್‌ ಪೂರೈಕೆ ಮಾಡಿದ ನಂತರ ಸಾಗುವಳಿ ಹೆಚ್ಚಾಗಿದೆ ಎಂದು ಹೇಳಿದರು.

ಟೆಂಡರ್‌ ಮೊತ್ತಕ್ಕಿಂತ 41 ಲಕ್ಷ ರೂಪಾಯಿ ಹಣ ಉಳಿಸಿರುವುದು ಸಾಮಾನ್ಯ ಸಾಧನೆಯಲ್ಲ. ಯಾರು ಕೂಡ ಕೆಲಸ ಮಾಡುವಾಗ ನಷ್ಟ ಮಾಡಿಕೊಳ್ಳಬೇಕು ಎಂದು ಅಪೇಕ್ಷಿಸುವುದಿಲ್ಲ. ಕಟ್ಟಡದ ಕಾಮಗಾರಿ ಶಿಸ್ತು ಬದ್ಧವಾಗಿ ನಡೆದಿದೆ. ಕಟ್ಟಡ ನಿರ್ಮಾತೃ ಬಸವಾನಿ ವಿಜಯದೇವ್‌ ಶ್ರಮ ಮತ್ತು ಶ್ರದ್ಧೆ ಉಳಿದವರಿಗೆ ಪ್ರೇರಣೆಯಾಗಲಿ ಎಂದರು.

“ಕೃಷಿ, ತೋಟಗಾರಿಕೆ ಕ್ಷೇತ್ರ ಬೆಳವಣಿಗೆ ಗಾಂಧಿಯ ಕನಸು ಕಂಡಿದ್ದರು. ನೆಹರು ಅದಕ್ಕೆ ಸ್ವಾತಂತ್ರ್ಯ ನಂತರ ಚಾಲನೆ ನೀಡಿದರು. ಸಹಕಾರಿ ಕ್ಷೇತ್ರದ ಬೆಳವಣಿಗೆಯಿಂದ ವಿಶೇಶಕ್ಕೆ ಭಾರತದ ಉತ್ಪನ್ನಗಳು ರಪ್ತಾಗುತ್ತಿದೆ” ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

“ತೀರ್ಥಹಳ್ಳಿಗೆ 388 ಕೋಟಿ ಸಾಲ ವಿತರಿಸಿದ್ದೇವೆ” ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

“ವ್ಯಕ್ತಿಯ ಆಧಾರದ ಮೇಲೆ ಸಹಕಾರಿ ವ್ಯವಹಾರ ನಡೆಯುತ್ತಿದೆ. ಇದರ ಮೇಲೆ ಮೀಸಲಾತಿ ಹೇರಿ ಉಪದ್ರ ನೀಡಬಾರದು” ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸಂಘದ ಹಿರಿಯ ನಿರ್ದೇಶಕ ಬಸವಾನಿ ವಿಜಯದೇವ್‌ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್‌, ತಹಶೀಲ್ದಾರ್‌ ರಂಜಿತ್‌ ಎಸ್.‌, ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ್‌ ಇದ್ದರು.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post