ವಿಶೇಷ ಶಿಕ್ಷಕ ಪ್ರಶಸ್ತಿಗೆ ಅರವಿಂದ್ ಟಿ.ಎನ್. ಆಯ್ಕೆ
ತೀರ್ಥಹಳ್ಳಿ ತಾಲ್ಲೂಕಿನ ಕಮ್ಮರಡಿ ವಿಶ್ವತೀರ್ಥ ಅನುದಾನಿತ ಶಾಲೆಯ ಚಿತ್ರಕಲಾ ಶಿಕ್ಷಕ, ರಂಗ ಕಲಾವಿದ, ಗಾಯಕ, ರಂಗ ವಿನ್ಯಾಸಗಾರ ಅರವಿಂದ್ ಟಿ.ಎನ್. ಈ ಬಾರಿಯ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿವಮೊಗ್ಗ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಆದೇಶ ಗುರುವಾರ ಪ್ರಕಟಗೊಂಡಿದ್ದು ತಾಲ್ಲೂಕಿನ ಆರು ಶಿಕ್ಷಕರಿಗೆ 2025-26ನೇ ಸಾಲಿನ ಶಿಕ್ಷಕ ದಿನಾಚರಣೆಯ ಆಂಗವಾಗಿ ಅತ್ಯುತ್ತಮ ಶಿಕ್ಷಕ, ಶಿಕ್ಷಕಿ ಪ್ರಶಸ್ತಿ ಲಭಿಸಿದೆ.
ಬಾಳೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಜ್ಯೋತಿ ಹೆಚ್.ಎಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕಿ ಸುಮ ಹೆಚ್.ಎಂ., ಹುಂಚದಕಟ್ಟೆ ಸರ್ಕಾರಿ ಪ್ರೌಢಶಾಲೆಯ ಕೃಷ್ಣಪ್ಪ ಡಿ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ, ಶಿಕ್ಷಕಿ ಪ್ರಶಸ್ತಿ ಲಭಿಸಿದೆ.
ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕಿ ಅಶಾಬಿ ಕೆ, ಸರ್ಕಾರಿ ಪ್ರೌಢಶಾಲೆ ತೂದೂರು ಸಹ ಶಿಕ್ಷಕ ಗೋಪಿ ವಿ ಅವರಿಗೆ ವಿಶೇಷ ಶಿಕ್ಷಕ ಪ್ರಶಸ್ತಿಗೆ ಲಭಿಸಿದೆ.