ಶಾಸಕ ಆರಗ ಜ್ಞಾನೇಂದ್ರರಿಂದ
ಉದ್ಘಾಟನೆ
ಅಂತರಾಷ್ಟ್ರೀಯ ಚೆಸ್
ಆಟಗಾರ, ಗ್ರಾಂಡ್ ಮಾಸ್ಟರ್ ಸ್ಟ್ಯಾನ್ಲಿ ಆಗಮನ
ಬಹುಮಾನ ವಿತರಣಾ
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ಮತ್ತು ಆರ್‌ಎಂಎಂ
ತೀರ್ಥಹಳ್ಳಿಯಲ್ಲಿ
ಇದೆ ಮೊದಲ ಬಾರಿಗೆ ರಾಜ್ಯ ಮಟ್ಟದ ಮುಕ್ತ ರಾಪಿಡ್ ಚೆಸ್ ಟೂರ್ನಿಮೆಂಟ್ -2025 ಇಲ್ಲಿನ ಗಾಯತ್ರಿ
ಮಂದಿರದಲ್ಲಿ ಸೆಪ್ಟೆಂಬರ್ 27, 28ರಂದು ಆಯೋಜಿಸಲಾಗಿದೆ. ಶಾಸಕ ಆರಗ ಜ್ಞಾನೇಂದ್ರ ಪಂದ್ಯಾವಳಿಯನ್ನು
ಉದ್ಘಾಟಿಸಲಿದ್ದು ಅಂತರಾಷ್ಟ್ರೀಯ ಚೆಸ್ ಆಟಗಾರ ಗ್ರಾಂಡ್ ಮಾಸ್ಟರ್ ಸ್ಟ್ಯಾನ್ಲಿ, ಕೃಷ್ಟ ಉಡುಪ
ಟೂರ್ನಿಮೆಂಟ್ ನಿರ್ದೇಶಕ ಡಾ.ಋತ್ವಿಕ್ ಅಧಿಕೃತ ಪಾನ್‌ಗಳನ್ನು ನಡೆಸುವ ಮೂಲಕ ಚಾಲನೆ ನೀಡಲಿದ್ದಾರೆ
ಎಂದು ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಕೆ.ಎನ್. ತಿಳಿಸಿದರು.
ಒಂದು ಲಕ್ಷದ ಐವತ್ತು
ಸಾವಿರ ರೂಪಾಯಿಗಳ ಮೊತ್ತದ ಬಹುಮಾನ ಇರುವ ಈ ಪಂದ್ಯಾವಳಿಯಲ್ಲಿ 8 ರಿಂದ 16 ವರ್ಷದೊಳಗಿನ ವಿವಿಧ ವಯೋಮಾನದ
ಬಾಲಕ ಬಾಲಕಿಯರು ಹಾಗೂ 40 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ ಹಿರಿಯ ನಾಗರೀಕರಿಗಾಗಿ 60 ವರ್ಷ ಮೇಲ್ಪಟ್ಟ
ವಿಭಾಗದಲ್ಲೂ ಕೂಡ ಸ್ಪರ್ಧೆಗಳು ಏರ್ಪಾಡಾಗಿದ್ದು 400 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ
ಇದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿಸಿಎಫ್ ಶಿವಶಂಕರ್, ವಿಶ್ವ ರಾಮ ಕ್ಷತ್ರಿಯ ಸಂಘದ
ಅಧ್ಯಕ್ಷ ಶಶಿಧರ್ ನಾಯ್ಕ್ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್
28 ರಂದು ಬಹುಮಾನ ವಿತರಣೆ ಹಾಗೂ ಡೊಳ್ಳು ಕುಣಿತ ಮತ್ತು ಕೋಲಾಟ ಪ್ರದರ್ಶನವಿರುತ್ತದೆ. ಈ ಕಾರ್ಯಕ್ರಮದಲ್ಲಿ
ಎಂಎಡಿಬಿ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಪಟ್ಟಣ ಪಂಚಾಯಿತಿ
ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಶ್ರೀ ರಾಮಕೃಷ್ಣ ಬಿಜೂರು, ಮೂಡುಬಿದ್ರೆ ಎಸಿಎಫ್ ಶ್ರೀಧರ್, ಕಲ್ಪತರು
ಚಂದ್ರಶೇಖರ್, ಖಜಾಂಚಿ ರಾಜೇಶ್ವರಿ, ಶ್ರೀ ಗಿರೀಶ್ ಕುಮಾರ್, ಕಾರ್ಕಳ ಶ್ರೀರಾಮ ಸೆರೆಗಾರ್, ಹೊಸನಗರ
ಸತ್ಯನಾರಾಯಣ, ರಿಶಿಕಾ ಮುಂತಾದವರು ಉಪಸ್ಥಿತರಿರಲಿದ್ದಾರೆ. ಪಂದ್ಯಾವಳಿಯ ತೀರ್ಪುಗಾರರಾಗಿ ಪ್ರಾಣೇಶ್
ಯಾದವ್ ಹಾಗೂ ಉಮೇಶ್ ಭದ್ರಾವತಿ, ಸಚಿನ್ ತರಬೇತುದಾರ ವಿಲ್ಸನ್ ಮುಂತಾದವರು ಉಪಸ್ಥಿತಿ ಇರಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕಾರ್ಯದರ್ಶಿ ಬಿ.ರಾಮು, ಪ್ರಮುಖರಾದ ಚಂದ್ರಕಾಂತ್ ಸರ್ಜಾ, ನಾಗರಾಜ್, ರಾಜೇಶ್ವರಿ ಇದ್ದರು.
