ಮುಡುಬ ರಾಘವೇಂದ್ರಗೆ ಮಾತೃ ವಿಯೋಗ
ನಾಟಿ ವೈದ್ಯ ಈಶ್ವರ್ ನಾಯ್ಕ್ ಧರ್ಮಪತ್ನಿ
ಜಾನಪದ ಸಿರಿ ಪ್ರಶಸ್ತಿ ಪುರಸ್ಕೃತೆ, ಜಾನಪದ ಕಲಾವಿದೆ ಮುಡುಬದ ಲೀಲಾವತಿ ಈಶ್ವರ ನಾಯ್ಕ್ ಸೋಮವಾರ ಸಂಜೆ 6 ಗಂಟೆಗೆ ನಿಧನರಾದರು. ಅವರಿಗೆ ಪತಿ ಖ್ಯಾತ ನಾಟಿ ವೈದ್ಯ ಈಶ್ವರ ನಾಯ್ಕ್, ಪುತ್ರ ತೀರ್ಥಹಳ್ಳಿ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಮುಡುಬದಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.