ನೋಟೀಸ್ ಜಾರಿ ಮಾಡಿದ ಕೆಪಿಸಿಸಿ
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಖಾಸಗಿ ಹೋಟೆಲ್ ಒಂದರಲ್ಲಿ
ನಡೆಸಿದ ಪತ್ರಿಕಗೋಷ್ಟಿಯಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ
'ಸಂಘಟನ್
ಸೃಜನ್ ಅಭಿಯಾನ್' ಕಾರ್ಯಕ್ರಮದ
ಬಗ್ಗೆ ಟೀಕೆ ಮಾಡಿರುವುದಲ್ಲದೇ, ಕಾಂಗ್ರೆಸ್
ಪಕ್ಷದ ಮುಖಂಡರುಗಳ ಬಗ್ಗೆ ಮಾಡಿರುವ ಟೀಕೆ ಮಾಡಿದ್ದರು. ಈ ಬಗ್ಗೆ ಪಕ್ಷಕ್ಕೆ, ಮುಖಂಡರಿಗೆ ತೀವ್ರ ಮುಜುಗರವಾಗಿದೆ
ಎಂದು ಸ್ಥಳೀಯ ಮುಖಂಡರು ಕೆಪಿಸಿಸಿಗೆ ದೂರು ನೀಡಿದ್ದರು. ದೂರಿನಂತೆ ಶಿಸ್ತು ಉಲ್ಲಂಘನೆಯಾಗಿದೆ ಎಂದು
ಕೆಪಿಸಿಸಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ. ನೋಟೀಸಿಗೆ ಏಳು ದಿನಗಳ ಒಳಗಾಗಿ ಸಮಜಾಯಿಷಿ
ನೀಡಲು ಕಾಲಾವಕಾಶ ನೀಡಿದೆ. ತಪ್ಪಿದಲ್ಲಿ ಮುಂದಿನ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದೆ.
