ಗೌರವ ಕಾರ್ಯದರ್ಶಿಯಾಗಿ ಬಾಳಗಾರು ಶ್ರೀಧರ ಶೆಟ್ಟಿ

ಕರ್ನಾಟಕ ರಾಜ್ಯ ಔಷಧ ತಯಾರಕ ಸಂಘಕ್ಕೆ ಆಯ್ಕೆ
ಪ್ರತಿಭಾವಂತ ಉದ್ಯಮಿಗೆ ಒಲಿದ ಪ್ರತಿಷ್ಟಿತ ಗೌರವ

ಕರ್ನಾಟಕ ರಾಜ್ಯ ಔಷಧ ತಯಾರಕರ ಸಂಘದ ಗೌರವ ಕಾರ್ಯದರ್ಶಿಯಾಗಿ ಬಾಳಗಾರು ಶ್ರೀಧರ್‌ ಶೆಟ್ಟಿ ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತದ ಪ್ರಮುಖ ಔಷಧ ತಯಾರಿಕ ಕಂಪನಿಯಲ್ಲಿ ಒಂದೆನಿಸಿರುವ ನೇಮಸ್‌ ಫಾರ್ಮಸ್ಯೂಟಿಕಲ್‌ ವ್ಯವಸ್ಥಾಪಕ ನಿರ್ದೇಶಕನಾಗಿರುವ ಶ್ರೀಧರ್‌ ಶೆಟ್ಟಿ ಈ ಹಿಂದೆ ಎನ್.ಕೆ.ಡಿ.ಪಿ.ಎಂ.ಎ. ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮೂಲತಃ ಬಾಳಗಾರಿನವರಾದ ಶ್ರೀಧರ್‌ ಶೆಟ್ಟಿ ಪದವಿ ಶಿಕ್ಷಣ ಪೂರೈಸಿದ ನಂತರ ಔಷಧ ತಯಾರಿಕ ಕಂಪನಿಗಳಲ್ಲಿ ಚಿಕ್ಕ ಹುದ್ದೆಯಿಂದ ಸೇವೆ ಆರಂಭಿಸಿ ಹಂತ ಹಂತವಾಗಿ ಮೇಲೇರಿ ಈಗ ತಮ್ಮದೇ ಸ್ವಂತ ಕಂಪನಿಯನ್ನು ಆರಂಭಿಸಿದ ದಕ್ಷ ಹಾಗೂ ಛಲವಂತ ಉದ್ಯಮಿಯಾಗಿದ್ದಾರೆ. ಇದರ ಜೊತೆಗೆ ಊರಿನ ಯುವ ಜನತೆಯ ಕುರಿತು ವಿಶೇಷ ಕಾಳಜಿಯುಳ್ಳ ಶ್ರೀಧರ್‌ ಶೆಟ್ಟಿ ಈ ಭಾಗದ ಪದವೀಧರ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕಂಪನಿಯಲ್ಲಿ ಉದ್ಯೋಗದ ಅವಕಾಶ ಕಲ್ಪಿಸುವ ಮೂಲಕ ನೆರವಾಗಿದ್ದಾರೆ.

ಶ್ರೀಧರ್‌ ಶೆಟ್ಟಿ ಅವರಿಗೆ ತುಳುನಾಡು ಸಿರಿ ಸೌಹಾರ್ಧ ಸಹಕಾರಿ ಅಧ್ಯಕ್ಷ ಬಿ.ಆರ್.ರಾಘವೇಂದ್ರ ಶೆಟ್ಟಿ, ಕಾಂಗ್ರೆಸ್‌ ಮುಖಂಡ, ಗ್ರಾಮಾಂತರ ಕಾಂಗ್ರೆಸ್‌ ಉಪಾಧ್ಯಕ್ಷ ಕುಡುಮಲ್ಲಿಗೆ ರಮೇಶ್‌ ಶೆಟ್ಟಿ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post