ಕುತೂಹಲ ಮೂಡಿಸಿದ
ಹುಲಿಗಪ್ಪ ಕಟ್ಟೀಮನಿ ನಿರ್ದೇಶನದ ನಾಟಕ
ಕ್ಲಿಷ್ಟಕರ ರಂಗ
ಪ್ರಯೋಗಕ್ಕೆ ದಿಟ್ಟ ಹೆಜ್ಜೆ ಇಟ್ಟ ನಟಮಿತ್ರರು
ಕನ್ನಡ ರಂಗಭೂಮಿಯ ಅತ್ಯಂತ ಸೃಜನಶೀಲ ಹಾಗೂ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಹುಲುಗಪ್ಪ ಕಟ್ಟೀಮನಿಯವರ ನಿರ್ದೇಶನದ ʼಆ ಊರು ಈ ಊರುʼ ನಾಟಕ ಆಗಸ್ಟ್ 24ರ ಭಾನುವಾರ ಮತ್ತು 25ರ ಸೋಮವಾರ ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ನಟಮಿತ್ರರು ಹವ್ಯಾಸಿ ಕಲಾ ತಂಡ ಈ ನಾಟಕವನ್ನು ರಂಗದ ಮೇಲೆ ತರಲಿದೆ. ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ನಾಟಕಕಾರ ಜಡಭರತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಜಿ.ಬಿ.ಜೋಷಿ ಅವರ ರಚನೆಯ ಈ ನಾಟಕ 1930ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ರಚಿಸಿರುವ ಕೃತಿ. ವಿಶೇಷವೆಂದರೆ ಸುಮಾರು 40 ವರ್ಷಗಳ ನಿರಂತರ ತಿದ್ದುಪಡಿಗಳ ಬಳಿಕ ಈ ಕೃತಿ ಹೊರಬಂದು ಸಾಹಿತ್ಯ ಹಾಗೂ ನಾಟಕ ಆಸಕ್ತರ ಗಮನ ಸೆಳೆಯಿತು.
ಆದರೆ ರಂಗದ ಅಳವಡಿಕೆಗೆ
ತೀರಾ ಕ್ಲಿಷ್ಟಕರ ಹಾಗೂ ಶ್ರೇಷ್ಟಮಟ್ಟದ ನಿರ್ದೇಶನ ಸಾಮರ್ಥ್ಯ ಬಯಸುವ ಈ ಕೃತಿ ಇಲ್ಲಿಯವರೆಗೆ ಬೆರಳೆಣಿಕೆಯ
ಬಾರಿ ಮಾತ್ರ ನಾಟಕ ರೂಪದಲ್ಲಿ ಪ್ರದರ್ಶನಗೊಂಡಿದೆ ಮತ್ತು ಆಧುನಿಕ ರಂಗಭೂಮಿಯ ಅತ್ಯುತ್ತಮ ನಾಟಕಗಳಲ್ಲಿ
ಒಂದೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಕಳೆದ ಎರಡು ತಿಂಗಳಿನಿಂದ
ನಿರಂತರವಾಗಿ ಹುಲಿಗಪ್ಪ ಕಟ್ಟೀಮನಿ ಇಲ್ಲಿನ ಪ್ರತಿಭಾವಂತ ಕಲಾವಿದರನ್ನು ಆಯ್ದು ಕಟ್ಟುನಿಟ್ಟಾದ ತರಬೇತಿ
ನೀಡುತ್ತಿದ್ದಾರೆ. 3 ವರ್ಷದ ಮಗುವಿನಿಂದ ಹಿಡಿದು 74ರ ಹರೆಯದವರ ತನಕ ಪಾತ್ರದಾರಿಗಳು ರಂಗದಮೇಲೆ ಕಾಣಿಸಿಕೊಳ್ಳಲಿದ್ದಾರೆ.
ವಿಶೇಷವೆಂದರೆ ಬಾಗಲಕೋಟೆಯ ನದಿ ದಂಡೆಯೊಂದರ ಇಕ್ಕೆಲಗಳಲ್ಲಿ ವಾಸಿಸುವ ಎರಡು ಊರುಗಳ ನಡುವಿನ ಕಥೆ ಇದಾಗಿರುವುದರಿಂದ
ಪಕ್ಕ ಧಾರವಾಡ ಶೈಲಿ ಕನ್ನಡ ನಾಟಕದಲ್ಲಿ ಅಳವಡಿಕೆಯಾಗಿದೆ. ಇಲ್ಲಿಯವರೆಗೆ ಮಲೆನಾಡಿನ ಜನತೆ ಕಂಡು ಕೇಳರಿಯದ
ಅನೇಕ ಪದಪುಂಜಗಳು ಈ ನಾಟಕದಲ್ಲಿ ಹೊರಹೊಮ್ಮಲಿದೆ.
ಎಂದಿನಂತೆ ಮಾಜಿ
ಶಿವಮೊಗ್ಗ ರಂಗಾಯಣ ನಿರ್ದೇಶಕ ಹಾಗೂ ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ ಜವಳಿ ಮುಖ್ಯ ಪಾತ್ರದೊಂದಿಗೆ
ಮತ್ತೆ ರಂಗದ ಮೇಲೆ ಕಾಣಿಸಿಕೊಳ್ಳುತ್ತಿದ್ದರೆ ಉಳಿದಂತೆ ಆಶಾ ಡೇನಿಯಲ್, ನಿತಿನ್ ಹೆಗ್ಡೆ, ಕೃಷ್ಣ ಎಂ ಜಾಧವ್, ಸುಬ್ರಮಣ್ಯ ಜಿ.ಆರ್., ಚೇತನ್ ಜಿ, ರಾಹುಲ್, ನಿರಂಜನ ವಿ, ಆದಿತ್ಯ ರಾವ್,
ವಿಶ್ರಾಂತಿ ವಿ.ಪೈ., ನಿರೀಕ್ಷಾ ಶೆಟ್ಟಿ, ಶೈಲಾ ಪುರುಷೋತ್ತಮ, ಕ್ಷಿತಿಜ್, ವಿಜಯಕುಮಾರ್
(ಶಿವಾಜಿ),
ಕಾರ್ತಿಕ್ ಕುಮಾರ್ ಟಿ.ಆರ್., ಮನೋಜ್
ಬಿ.ಬಿ, ಪೃಥ್ವಿ ಹೊಸಗದ್ದೆ, ಲಕ್ಷ್ಮೀ ರವಿಶಂಕರ್, ಧನ್ಯಶ್ರೀ, ಸೃಷ್ಠಿ ರೆಡ್ಡಿ, ಮನು ಟಿ.ಜಿ. ರಂಗದ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಸಹ ನಿರ್ದೇಶನ ಮತ್ತು ಬೆಳಕು: ಶಿವಕುಮಾರ್ ತೀರ್ಥಹಳ್ಳಿ,
ಪ್ರಸಾಧನ
ಗುರುರಾಜ ಪಿ ವಿ,
ರಂಗ ಸಜ್ಜಿಕೆ ಅರವಿಂದ ಟಿ.ಎನ್.
ಸಂಗೀತ ನಿರ್ವಹಣೆಯನ್ನು
ಹರಿವಿನಾಯಕ ಮಾಡಲಿದ್ದಾರೆ.

