ಹಳ್ಳಕ್ಕೆ ಬಿದ್ದು ಚಂದ್ರಶೇಖರ್ ಸಾವು
ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಗ್ರಾಮದ ಹಳ್ಳವೊಂದಕ್ಕೆ ಬಿದ್ದು ಕೃಷಿ ಕಾರ್ಮಿಕ ಚಂದ್ರಶೇಖರ್ (50) ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಚಂದ್ರಶೇಖರ್ ಬಾವಿಕೆರೆ ಗ್ರಾಮದವರಾಗಿದ್ದು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಮಳೆಯ ನಡುವೆ ಕೃಷಿ ಕೆಲಸಕ್ಕೆಂದು ತೆರಳಿದ್ದು ನೀರಿನಿಂದ ಸೃಷ್ಟಿಯಾಗಿದ್ದ ಗದ್ದೆಬೈಲು ಹಳ್ಳಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
