ಮಳೆ ಕಣ್ಣಿಗೆ ಕಂಡರು ರಜೆ ಘೋಷಣೆಗೆ ಎಡವಟ್ಟು
ಅಂಗನವಾಡಿಗಳ ಕಥೆ ಅಯೋಮಯ...
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಶುಕ್ರವಾರ ಮಳೆ ಹಿನ್ನಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆಯಲ್ಲಿ ತಾಲ್ಲೂಕು ಆಡಳಿತ ಯಡವಟ್ಟು ಮುಂದುವರೆಸಿದೆ. ಕಣ್ಣಿಗೆ ಮಳೆಯ ಅಬ್ಬರ ಕಾಣಿಸುತ್ತಿದ್ದರು ಶಾಲಾ ಕಾಲೇಜಿಗೆ ರಜೆ ಘೋಷಣೆಯಾಗುತ್ತಿಲ್ಲ. ಬೆಳಿಗ್ಗೆ 8 ಗಂಟೆಯಾದರು ಮಳೆ ಘೋಷಣೆಯಾಗದ ಹಿನ್ನಲೆಯಲ್ಲಿ ಮಕ್ಕಳು ಗೊಂದಲಕ್ಕೆ ಸಿಲುಕುವಂತಾಗಿದೆ.
ಗ್ರಾಮೀಣ ಭಾಗದಿಂದ ಆಗಮಿಸುವ ಮಕ್ಕಳಿಗೆ ಸರಿಯಾದ ಸಮಯಕ್ಕೆ ರಜೆಯ ಮಾಹಿತಿ ಲಭ್ಯವಾಗುತ್ತಿಲ್ಲ. ಅನೇಕರು ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸುತ್ತಿರುವ ಘಟನೆಗಳು ನಡೆಯುತ್ತಿದೆ. ಹೀಗೆ ಆಗಮಿಸಿದ ಮಕ್ಕಳು ಹೊಳೆ, ಹಳ್ಳ, ತುಂಗಾ ನದಿಯ ಅಬ್ಬರ ವೀಕ್ಷಣೆಗೆ ತೆರಳುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ತಾಲ್ಲೂಕು ಆಡಳಿತದ ಬೇಜವಾಬ್ದಾರಿಗೆ ಹೊಣೆ ಯಾರು ಎಂಬ ಪ್ರಶ್ನೆ ಇದೀಗ ಸೃಷ್ಟಿಯಾಗುತ್ತಿದೆ.
ಅಂಗನವಾಡಿ ಗೋಳು ಕೇಳೋರಿಲ್ಲ....
ಶುಕ್ರವಾರ ಶಾಲಾ ಕಾಲೇಜಿಗೆ ರಜೆ ಘೋಷಣೆ ನೀಡುವ ಕುರಿತು ತಾಲ್ಲೂಕು ಆಡಳಿತ ಎಸ್ ಡಿಎಂಸಿಗೆ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಿದೆ. ತಹಸೀಲ್ದಾರ್ ಸೂಚನೆ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನೆ ಹೊರಡಿಸಿದ್ದಾರೆ. ಹೀಗಿರುವಗ ಅಂಗನಾಡಿಯ ನನ್ನಮುನ್ನ ಮುಕ್ಕಳ ಕಥೆ ಹೇಳತೀರದು. ಪೋಷಕರೇ ಮಕ್ಕಳನ್ನು ಮನೆಯಿಂದ ಅಂಗನವಾಡಿಗೆ ಕರೆತರುವಂತಾಗಿದೆ. ಇಂತಹ ವಾತಾವರಣ ತಾಲ್ಲೂಕು ಆಡಳಿತದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.
ಮಳೆ ಮುನ್ಸೂಚನೆ ವರದಿ ಎಲ್ಲಿ...?
ತೀರ್ಥಹಳ್ಳಿ ಪಶ್ಚಿಮಘಟ್ಟ ಸಾಲುಗಳ ಸಾಲಿನಲ್ಲಿ ಹೆಚ್ಚು ಮಳೆಯಾಗುವ ಪ್ರದೇಶ. ಇಂತಹ ಪ್ರದೇಶದಲ್ಲಿ ಎಷ್ಟು ಮಳೆಯಾಗುತ್ತದೆ ಎಂಬ ಮುನ್ನೆಚ್ಚರಿಕೆಯ ವರದಿಗಳು ತಾಲ್ಲೂಕು ಆಡಳಿತಕ್ಕೆ ಲಭ್ಯವಾದಂತಿಲ್ಲ. ಬೆಳಗ್ಗಿನ ಮಳೆ ಆಧರಿಸಿ ರಜೆ ಘೋಷಿಸುತ್ತಿರುವುದು ಹಸ್ಯಾಸ್ಪದ ಸಂಗತಿಯಂತಿದೆ. ಅಂದಿನ ಮಳೆ ಮುನ್ಸೂಚನೆ ವರದಿಗಳನ್ನು ಪಡೆದುಕೊಳ್ಳದೆ ಶಾಲೆಗೆ ರಜೆ ಘೋಷಿಸುತ್ತಿದ್ದು ಪೂರ್ಣ ದಿನ ಹದ ಮಳೆಯಾಗುತ್ತಿರುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಜೊತೆಗೆ ಶೃಂಗೇರಿ ಭಾಗದ ಮಳೆ ತೀರ್ಥಹಳ್ಳಿಗೆ ನೆರೆ ತರುತ್ತಿದ್ದು ಅವುಗಳ ಬಗ್ಗೆಯೂ ಪೂರ್ಣ ಮಾಹಿತಿ ಕಲೆಹಾಕದೆ ಅಜಾಗರೂಕತೆ ಪ್ರದರ್ಶಿಸುತ್ತಿದ್ದಾರೆ.
