ಶಾಸಕರೇ ಬಡವರ ಭೂಮಿ
ಕಸಿಯಬೇಡಿ – ದೇಣಿಗೆ ಎತ್ತಿ ನಾವೇ ಭೂಮಿ ಕೊಡಿಸುತ್ತೇವೆ
ಅಸ್ಪೃಷ್ಯತೆ ಗುಂಗಿನಲ್ಲಿ
ಯುವಮೋರ್ಚಾ ಅಧ್ಯಕ್ಷ - ಪೂರ್ಣೇಶ್ ಕೆಳಕೆರೆ
ವಿಧಾನಸಭೆಯ ಕಲಾಪಕ್ಕೆ
ಅರ್ಥ ಕಲ್ಪಿಸಿ ತನ್ನೂರಿನ ಜನರು, ಬಡವರ ಬಗ್ಗೆ ಅತೀವ ಕಾಳಜಿಯಿಂದ ಸಾವಿರಾರು ಜನರಿಗೆ ಉಳುವವನೆ ಹೊಲದೊಡೆಯ
ಚಳವಳಿ ಮೂಲಕ ಭೂಮಿಯ ಹಕ್ಕು ಕಲ್ಪಿಸಿದ ಶಾಂತವೇರಿ ಗೋಪಾಲಗೌಡರ ಸಮಾಜವಾದದ ನಾಡಿಗೆ ಗುಮ್ಮಿಬಾವಿ ನೀರು
ಕುಡಿಯುತ್ತಿದ್ದೆ ಎಂದು ಹೇಳಿಕೊಳ್ಳುತ್ತಿದ್ದ ಶಾಸಕರು
ಕಳಂಕ ತರುತ್ತಿದ್ದಾರೆ.
ಬಡವ, ಸುಟ್ಟ ಕಡುಬು,
ಹಲಸಿನ ಬಿತ್ತ, ದಾಣಿ, ಹುಲಿಭತ್ತ, ಕೊಳಗ, ಹುಲ್ಲಿನ ಮನೆ, ಗುಮ್ಮಿಬಾವಿ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದವರು
ಇದೀಗ ತೀರ್ಥಹಳ್ಳಿಯಲ್ಲಿ ಅತಿದೊಡ್ಡ ಭೂಮಿಯ ಒಡೆಯನಾಗಿ ಭೂಮಿ ಬಾಕನಾಗಿ ಬದಲಾಗುತ್ತಿದ್ದಾರೆ ಎಂದು
ಯುವ ಕಾಂಗ್ರೆಸ್ ಅಧ್ಯಕ್ಷ ಪೂರ್ಣೇಶ್ ಕೆಳಕೆರೆ ಆರೋಪಿಸಿದ್ದಾರೆ.
ಬಡವರಾದ ಶಾಸಕರಿಗೆ
ತಾರೆಗೊಳ್ಳಿ ನಾಗರಾಜರಾಯರು ಬದುಕಲಿ ಎಂದು ಎರಡು ಎಕರೆ ಜಮೀನು ಕೊಟ್ಟಿದ್ದರು. ಅದನ್ನು ಬಳಸಿಕೊಳ್ಳುವ
ಜೊತೆಗೆ ಅಲ್ಲಿಯೇ ಬಗರ್ ಹುಕುಂ ಮಾಡಿಕೊಂಡು ಹತ್ತಾರು ಎಕರೆ ಜಮೀನು ಪಡೆದಿದ್ದಾರೆ. ಇಷ್ಟಾದರು ಸುಮ್ಮನಿರದ
ಅವರು ಗೃಹಸಚಿವರಾದ ನಂತರ ಹಣ, ಭೂಮಿಯ ದಾಹದಲ್ಲಿ ಸಿಕ್ಕಲ್ಲೆಲ್ಲಾ ಬೇನಾಮಿ ಆಸ್ತಿಯನ್ನು ಖರೀದಿಸಲು
ಆರಂಭಿಸಿದ್ದಾರೆ.
ಶಾಸಕರು ಭೂಮಿಯ ಅಗತ್ಯ
ಎಷ್ಟಿದೆ ಎಂದು ಬಾಯಿಬಿಟ್ಟು ಹೇಳಿದರೆ ಬಿಜೆಪಿಯ ಸುಸಂಸ್ಕೃತ ಸ್ನೇಹತರ ಜೊತೆಗೂಡಿ ಚಂದಾ ಎತ್ತಿ ಅವರ
ಭೂಮಿಯ ದಾಹ ತೀರಿಸುವ ಪ್ರಯತ್ನ ಮಾಡುತ್ತೇವೆ. ಬಡವರ ಮೇಲೆ ಶಾಸಕರ ಕೆಂಗಣ್ಣು ಬೀಳದಿರಲಿ. ಬಡವರನ್ನು
ಬದುಕಲು ಬಿಡಲಿ ಎಂದು ಆಗ್ರಹಿಸಿದ್ದಾರೆ.
ಬಾಳೇಬೈಲಿನಲ್ಲಿ
ಶಾಸಕರ ಆಪ್ತರು ಬಾರಿ ಪ್ರಮಾಣದ ದೊಡ್ಡ ಲೇಔಟ್ ಒಂದನ್ನು ನಿರ್ಮಿಸುತ್ತಿದ್ದು ಇದರಲ್ಲಿ ಶಾಸಕರ ಸುಪುತ್ರ
ಕೂಡ ಇದ್ದಾರೆ ಎಂದು ಜನ ಮಾತಾಡ್ತಿದ್ದಾರೆ. ಅವರ ಭೂಮಿಯ ದಾಹಕ್ಕೆ ಬಡವರ ಮನೆ ಬಿರುಕು ಬಿಟ್ಟಿದೆ.
ಕಲಾವತಿ (ಲಕ್ಷ್ಮೀ) ಅವರ 5 ಜನರ ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗಿದೆ. ಭೂದಾಹಿಗಳು ಆ ಮನೆಯನ್ನು
ಒಳಗೆ ಹಾಕಿಕೊಳ್ಳುವ ಸಂಚು ನಡೆಸುತ್ತಿದ್ದಾರೆ. ಹಿಂಸೆಗೆ ಒಳಪಡಿಸಿ ಮನೆ ಬಿಟ್ಟು ಹೋಗುವಂತೆ ಮಾಡುವ
ಅಧಿಕಾರಶಾಹಿಗೆ ನಮ್ಮ ದಿಕ್ಕಾರವಿದೆ.
ಭೂಮಿ ಬಾಕ ಶಾಸಕರು
ಮತ್ತು ಅವರ ಆಪ್ತರ ವಿರುದ್ಧ ಸೋಮವಾರ ಬಾಳೇಬೈಲಿನ ಲೈಔಟ್ ನಿಂದ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ
ಮಾಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಅನ್ಯಾಯಕ್ಕೆ ಒಳಗಾಗುತ್ತಿರುವ ಮನೆಗೆ ತಡೆಗೋಡೆ ನಿರ್ಮಿಸುವಂತೆ
ಆಗ್ರಹಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಯುವ ಕಾಂಗ್ರೆಸ್
ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿರುವ ಕ್ರೌರ್ಯವನ್ನು ಪ್ರಶ್ನಿಸುವ ಉದ್ದೇಶದಿಂದ ಪ್ರಧಾನಿ
ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಜಾಗದಲ್ಲಿ ಸ್ಟಿಕ್ಕರ್ ಅಂಟಿಸಿದ್ದೇವೆ. ಆದರೆ ಅದನ್ನು ಕೇಳುವ
ನೆಪದಲ್ಲಿ ಆರ್‌ಎಸ್‌ಎಸ್‌ನಿಂದ ಕಲಿತ ಸಂಸ್ಕಾರ ಏನಂಬುದನ್ನು ಬಹಿರಂಗವಾಗಿ ಮಾಡಿದ ಭಾಷಣದಲ್ಲಿ ಹೆದ್ದೂರಿನ
ಅಧ್ಯಕ್ಷರು ತೋರಿಸಿಕೊಟ್ಟು ಅವರ ವಿವೇಕ ಎಷ್ಟಿದೆ ಎಂಬುದು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
ಅವರು ಮತ್ತು ಅವರ ಬಿಜೆಪಿ ಪಟಾಲಂ ಭಾರತ ದೇಶದ ಅಷ್ಟು ಗೋವುಗಳ ಮೂತ್ರವನ್ನು ತಂದು ಎಲ್ಲೇ ಸುರಿದರು
ಅವರ ಪ್ರಧಾನಿ ಮತ್ತು ಇತರರು ಮಾಸ್ಟರ್ ಸ್ಟ್ರೋಕ್ ಹೆಸರಿನಲ್ಲಿ ಜನಸಾಮಾನ್ಯರನ್ನು ತಿಂದು ತೇಗಿ
ಇಲ್ಲಿಯ ತನಕ ಈ ದೇಶಕ್ಕೆ ಮಾಡಿರುವ ಅನಾಚಾರ ತೊಳೆಯಲು ಸಾಧ್ಯವೇ ಇಲ್ಲ. ಅಂತಹದ್ದರಲ್ಲಿ ಹಾಲಿನ ಅಭಿಷೇಕ
ಮಾಡುವ ಮೂಲಕ ಗೋವಿನ ಪಾವಿತ್ರ್ಯವನ್ನು ಹಾಳು ಮಾಡಿ ಗೋಮಾತೆಗೆ ಅವಮಾನ ಮಾಡಿದ್ದಾರೆ.
ತಾಯಿ ಹಾಲು ಕುಡಿಯುವುದನ್ನು
ಬಿಡುವ ಮಕ್ಕಳು ಜಾನುವಾರು ಹಾಲನ್ನು ಕುಡಿಯುತ್ತಾರೆ. ಹಾಲು ಅಷ್ಟೊಂದು ಪವಿತ್ರವಾಗಿದೆ. ನಾವು ಹಾಲನ್ನು
ಚೆಲ್ಲುವುದಿಲ್ಲ ನಾವು ಹಾಲನ್ನು ಶುಭಕಾರ್ಯಗಳಲ್ಲಿ, ಬಡವರು, ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಬಿಜೆಪಿಗರ
ಅವಿವೇಕತನವನ್ನು ಪ್ರಶ್ನಿಸುತ್ತೇವೆ. ಸೋಮವಾರ ಹಾಲು ಕುಡಿಸುವ ಚಳವಳಿಯನ್ನು ನಡೆಸುವುದರ ಮೂಲಕ ಮೂತ್ರಕ್ಕಿಂತ
ಹಾಲು ಶ್ರೇಷ್ಠ ಎಂಬುದನ್ನು ನಾವು ತೋರಿಸಿಕೊಡುತ್ತೇವೆ. ಮೂತ್ರವೇ ಅವರಿಗೆ ಪವಿತ್ರವಾದರೆ ಅದನ್ನು
ಕುಡಿದಾದರು ಮಾನವೀಯತೆ ಮನುಷ್ಯತ್ವ ಬೆಳೆಸಿಕೊಳ್ಳಲಿ ಎಂದು ಹಾರೈಸಿ ಮೂತ್ರಾಧ್ಯಕ್ಷರಿಗೆ ಜ್ಞಾನಾರ್ಜನೆ
ಮಾಡಿಸುತ್ತೇವೆ.
ರಾಮನ ಹೆಸರಿನಲ್ಲಿ,
ಹಿಂದೂ ದೇವರ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡು ರಾಮನ ಹುಂಡಿಯನ್ನೆ ಕದ್ದವರಿಂದ ದೇಶದ ಜನತೆ
ಕಲಿಯುವುದು ಏನಿಲ್ಲ. ಮೈಲಿಗೆ ಎಂಬ ಪದ ಬಳಕೆ ಮಾಡಿರುವ ಯುವ ಮೋರ್ಚಾ ಅಧ್ಯಕ್ಷ ಇನ್ನೂ ಸಹ ಅಸ್ಪೃಶ್ಯತೆಯ
ಗುಂಗಿನಿಂದ ಹೊರ ಬಂದಿಲ್ಲ ಅನ್ನಿಸುತ್ತಿದೆ. ಅಸ್ಪೃಷ್ಯತೆ ಮನುಷ್ಯರನ್ನು ಪಶುಗಳಂತೆ ಕಾಣುವುದೇ ಅವರ
ಸಂಸ್ಕಾರ. ಇದು ನಾಚಿಕೆಗೇಡಿನ ಸಂಗತಿ ಎಂದು ಪೂರ್ಣೇಶ್ ಕೆಳಕೆರೆ ಆರೋಪಿಸಿದ್ದಾರೆ.
