ನೆನಪುಗಳ ಬುತ್ತಿಯಲ್ಲಿ ರಾಘಣ್ಣ ಅನಂತ...
ಪ್ರಗತಿಪರ ಚಿಂತಕ, ಸೌಮ್ಯ ಸ್ವಭಾವದ, ಸಾಹಿತ್ಯಾಭಿಮಾನಿ, ತೀರ್ಥಹಳ್ಳಿ ಸುತ್ತಮುತ್ತ ಪುಸ್ತಕದ ಸಂಪಾದಕ ಹಾದಿಗಲ್ಲು ರಾಘಣ್ಣ ಮಂಗಳವಾರ ಬೆಳಿಗ್ಗೆ 10.30ಕ್ಕೆ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಯು.ಆರ್. ಅನಂತಮೂರ್ತಿ ಜೊತೆಗೆ ನಿಕಟ ಸಂಬಂಧ ಹೊಂದಿದ್ದ ಅವರು ವಿವಿಧ ಪ್ರಗತಿಪರ ಚಳುವಳಿಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಹಿಂದಿ ಚಲನಚಿತ್ರದ ಹಾಡು, ಗಜ್ಹಲ್ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಜನಪದದ ತಜ್ಞರಾಗಿ ಹಲವು ವೇದಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತೀರ್ಥಹಳ್ಳಿಯ ರುದ್ರಭೂಮಿಯಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ನಡೆಯಲಿದೆ ಎಂದು ತಿಳಿದು ಬಂದಿದೆ.