ಅವರನ್ನು ಅವಮಾನಿಸಿದಾಗ
ವರ್ಗ, ಜಾತಿ ಪ್ರಜ್ಞೆ ಎಲ್ಲಿ ಅಡಗಿತ್ತು.
ಬಿಇಓ ಜಾತಿ ಪ್ರಸ್ತಾಪ
ಬಿಜೆಪಿಯ ಕಿರಾತಕ ಬುದ್ದಿಗೆ ಸಾಕ್ಷಿ – ಪೂರ್ಣೇಶ್ ಕೆಳಕೆರೆ
ಜಾತಿ, ಕೋಮುವಾದಿಗಳಾದ
ಬಿಜೆಪಿಯಿಂದ ಜಾತ್ಯಾತೀತ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ
ಕಾಂಗ್ರೆಸ್ ಪ್ರತಿಭಟನೆ
ನಡೆಸಿರುವುದು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಕಡೆಗಣಿಸಿ ಕಾರ್ಯಕ್ರಮ ನಡೆಸುವುದರ ವಿರುದ್ಧವೇ
ಹೊರುತು ಯಾವುದೆ ವೈಯಕ್ತಿಕ ಕಾರಣಕ್ಕಲ್ಲ. ಬಿಜೆಪಿಯ ಕೆಲವು ಜಾತಿವಾದಿಗಳು, ಶಾಸಕ ಆರಗ ಜ್ಞಾನೇಂದ್ರ
ಪದೇ ಪದೇ ಬಿಇಓ ಜಾತಿಯನ್ನು ಪ್ರಸ್ತಾಪ ಮಾಡುತ್ತಿರುವುದು ಬಿಜೆಪಿಯ ಕಿರಾತಕತನಕ್ಕೆ ಸಾಕ್ಷಿಯಾಗಿದೆ.
ನಿಮಗೆ ಮರೆತಿರಬಹುದು, ಜಿಲ್ಲಾ ಉಸ್ತುವಾರಿ ಸಚಿವರು, ಶಿಕ್ಷಣ ಮಂತ್ರಿಗಳೂ ಕೂಡ ಸ್ವತಃ ಹಿಂದುಳಿದ
ವರ್ಗದಿಂದಲೇ ಬಂದಿದ್ದಾರೆ. ಅವರನ್ನು ಅವಮಾನಿಸಿದಾಗ ಜಾತಿವಾದಿ, ಕೋಮುವಾದಿ ಬಿಜೆಪಿಗರಿಗೆ ವರ್ಗ,
ಜಾತಿ ಪ್ರಜ್ಞೆ ಎಲ್ಲಿ ಅಡಗಿತ್ತು ಎಂಬುದರ ಬಗ್ಗೆ ಚರ್ಚಿಸಬೇಕಲ್ಲವೆ. ನಿಮ್ಮಿಂದ ಜಾತ್ಯಾತೀತ ಕಾಂಗ್ರೆಸ್
ಪಾಠ ಕಲಿಯಬೇಕಾಗಿಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ, ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಪೂರ್ಣೇಶ್
ಕೆಳಕೆರೆ ಹೇಳಿದ್ದಾರೆ.
ಶಾಸಕರು ಅರೋಪಿಸಿದಂತೆ
ಬಿಇಒ ಅವರಿಗೆ ಕಛೇರಿ ವಾಹನವಿಲ್ಲಾ ಎನ್ನುವುದು ಎಷ್ಟು ಸತ್ಯವೋ ಟೆಂಡರ್ ವಾಹನ ಇರುವುದು ಕೂಡ ಅಷ್ಟೇ
ಸತ್ಯ. ತಾವು ಕಳೆದ ಗೃಹಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ವ್ಯವಸ್ಥೆ ಹೀಗೆ ಇತ್ತು ಎನ್ನುವುದು ಅಷ್ಟೇ
ಸತ್ಯ. ತೀರ್ಥಹಳ್ಳಿ ಫಲಿತಾಂಶದಲ್ಲಿ ಯಾವಾಗಲೂ ಮುಂದೆ ಇದೆ. ನೀವಿದ್ದಾಗಲೂ ಜಿಲ್ಲೆಗೆ ಪ್ರಥಮ ಸ್ಥಾನವನ್ನೇ
ಪಡೆದುಕೊಳ್ಳುತ್ತಿತ್ತು. ಶೇಕಡಾ 90% ಫಲಿತಾಂಶ ಸದಾ
ನೀಡುತ್ತಲೆ ಇದ್ದೇವೆ ಎನ್ನುವುದು ಗಮನಾರ್ಹ ಸಾಧನೆ. ಅದು ಒಬ್ಬ ವ್ಯಕ್ತಿ ಸಾಧನೆ ಅಲ್ಲಾ, ಎಲ್ಲಾ ಪ್ರೌಢಶಾಲಾ
ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಹಿರಿಯ ವಿದ್ಯಾರ್ಥಿಗಳ, ಸ್ಥಳೀಯ ಜನಪ್ರತಿನಿಧಿಗಳ ಪ್ರೋತ್ಸಾಹ ಸಹಕಾರ
ಎನ್ನುವುದು ನೀವು ನೆನಪಿಡಿ.
ಬಿಇಒ ಅವರು ಪ್ರಾಥಮಿಕ
ಶಾಲೆಗಳಿಗೆ ಮುಖ್ಯಸ್ಥರು, ಪ್ರಾಥಮಿಕ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಬಿಇಒ ಕೈಗೊಂಡ ಹೊಸ ಕ್ರಮಗಳು
ಯಾವುವು ? ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ಬಡವರ ಹಿಂದುಳಿದ ಎಲ್ಲಾ ವರ್ಗದ ಮಕ್ಕಳ
ಇಂಗ್ಲಿಷ್ ಕಲಿಕೆಗೆ ಬಿಇಒ ಅವರ ವಿಶೇಷ ಯೋಜನೆಗಳು ಇದ್ದರೆ ತಾಲ್ಲೂಕಿನ ಜನತೆಯ ಮುಂದೆ ನೀವೆ ತಿಳಿಸಿ
ಬಿಡಿ ಶಾಸಕರೇ.
ಬಿಇಒ ಅವರ ಸಮಯದ
ಬಗ್ಗೆ, ಪ್ರಾಮಾಣಿಕತೆ ಬಗ್ಗೆ ನಮಗೆ ಗೌರವವಿದೆ. ಆದರೆ ಅವರದ್ದೇ ಕಛೇರಿಯಲ್ಲಿ ಎಷ್ಟೋ ಶಿಕ್ಷಕರ ಸಮಸ್ಯೆಗಳು
ಪರಿಹಾರ ಕಾಣದೇ ಕಡತಗಳು ದೂಳು ಹಿಡಿದಿವೆ ? ಆ ಶಿಕ್ಷಕರಿಗೆ ನ್ಯಾಯ ಕೊಡುವವರು ಯಾರು ? ತಾಲ್ಲೂಕಿನ
ಅನೇಕ ಶಿಕ್ಷಕರ ಪ್ರಕರಣದಲ್ಲಿ ಬಿಇಒ ಅವರು ಯಾವ ಪ್ರಕರಣಗಳಲ್ಲಿ ನ್ಯಾಯ ಕೊಡಿಸಿದ್ದಾರೆ. ಯಾರಿಗೆ ವಿಚಾರಣೆ
ಮಾಡಿ ಸಮಸ್ಯೆ ಬಗೆ ಹರಿಸಿದ್ದಾರೆ ? ಅನೇಕ ಅಧಿಕಾರಿಗಳು ಭೇಟಿಯ ನೆಪದಲ್ಲಿ, ಕರ್ತವ್ಯಕ್ಕೆ ಹಾಜರಾಗದೇ
ದಾಖಲೆಗಳಲ್ಲಿ ಮಾತ್ರ ಹಾಜರಾಗುತ್ತಿದ್ದಾರೆ. ಇದು ಬಿಇಒ ಅವರಿಗೆ ತಿಳಿದಿಲ್ಲವೇ ಎನ್ನುವುದು ಒಮ್ಮೆ
ಪರಿಶೀಲಿಸಿ ನೋಡಿ. ಬೇಕಾದರೆ ಶಿಕ್ಷಕರಲ್ಲಿ ವಿಚಾರಿಸಿ ನೋಡಿ ಸಮಸ್ಯೆಯ ಗಂಭೀರತೆ ತಮಗೂ ಅರ್ಥ ಆಗಬಹುದು
ಶಾಸಕರೇ…
ಒಬ್ಬ ಬಿಇಒ ಆಗಿ
ಅವರ ಅವಧಿಯಲ್ಲಿ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಅನೇಕ ಮಕ್ಕಳು ಶಾಲೆಯಿಂದ ಹೊರಗುಳಿದ್ದಿದ್ದಾರೆ.
ಯಾಕೆ ಹಿಂದುಳಿದ ಬಡವರ, ದಲಿತರ ಮಕ್ಕಳು ಪುನಃ ಶಾಲೆಗೆ ದಾಖಲಾಗಲು ಕ್ರಮ ಆಗಿಲ್ಲ. ಈ ವಿಚಾರದಲ್ಲಿ
ಬಿಇಓ ಮೌನ ವಹಿಸಿರುವುದು ಯಾಕೆ. ತೀರ್ಥಹಳ್ಳಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಆಂಗ್ಲ
ಮಾಧ್ಯಮ ತರಲು ನೀವು ಸೇರಿದಂತೆ, ನಮ್ಮ ನಾಯಕರರಾದ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ. ಮಂಜುನಾಥ್
ಗೌಡ್ರು ಅವರ ಸಹಕಾರ ಇಲ್ಲವೆ. ನಮ್ಮ ನಾಯಕರು ತಮ್ಮ ಲೆಟರ್ ಹೆಡ್‌ನಲ್ಲಿ ಆಂಗ್ಲ ಮಾಧ್ಯಮಕ್ಕೆ ಶಿಫಾರಸ್ಸು
ಮಾಡಿಲ್ಲವೆ. ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಮೂಲಕ ಶಿಫಾರಸ್ಸು ಮಾಡಿಲ್ಲವೇ ? ಆದರೆ ಬಿಇಒ ಅವರು
ಮಾತ್ರ ಆಂಗ್ಲ ಮಾಧ್ಯಮ ತರಲು ಶಾಸಕರ ಪ್ರಯತ್ನ ಮಾತ್ರ ಎಂದು ಪತ್ರಿಕೆಯಲ್ಲಿ ಹೇಳಿರುವುದನ್ನು ನೀವು
ಒಬ್ಬ ಶಾಸಕರಾಗಿ ಒಪ್ಪುತೀರಾ ? ಜಿಲ್ಲಾ ಉಸ್ತುವಾರಿ
ಸಚಿವರು, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನವರ ಸಹಕಾರವಿಲ್ಲವೆ. ಅವರ ಹೆಸರನ್ನು ಬಿಇಒ ಎಲ್ಲಿ ಪ್ರಸ್ತಾಪಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ,
ಆರ್ಥಿಕವಾಗಿ ಹಿಂದುಳಿದ, ಬಡವರ ದೀನ ದಲಿತರ ಮಕ್ಕಳಿಗೆ 25% to 30% ಕಡ್ಡಾಯ ಶಿಕ್ಷಣದಡಿಯಲ್ಲಿ ಸೀಟು
ಹಂಚಿಕೆ ಆಗುತ್ತಿದೆ. ಅಂತಹ ಮಕ್ಕಳ ಶುಲ್ಕ ಸಮಸ್ಯೆ, ಶೈಕ್ಷಣಿಕ ಸಮಸ್ಯೆ, ಶಾಲಾ ಹಂತದ ಸಮಸ್ಯೆಗಳನ್ನು
ಯಾವಾತ್ತಾದರೂ ಬಿಇಒ ಸಭೆ ಮೂಲಕ ಕುಂದು ಕೊರತೆ ವಿಚಾರಿಸಿದ್ದಾರೆಯೇ? ಯು.ಆರ್ ಅನಂತಮೂರ್ತಿ ಶಾಲೆಯಲ್ಲಿ
ಕಳೆದ ವರ್ಷ ಒಂಬತ್ತನೇ ತರಗತಿಯಲ್ಲಿ ಎಷ್ಟು ಮಕ್ಕಳನ್ನು ಫೇಲ್ ಮಾಡಲಾಗಿತ್ತು? ಮತ್ತು ಈ ವರ್ಷ ಇಪ್ಪತ್ತೆಂಟು
ವಿದ್ಯಾರ್ಥಿಗಳನ್ನು ಒಂಬತ್ತನೇ ತರಗತಿಯಲ್ಲಿ ಫೇಲ್
ಮಾಡಿ ರಿಸಲ್ಟ್ ಏರಿಸುವುದು ಯಾವ ಪುರುಷಾರ್ಥಕ್ಕೆ ಎಂದು ಪೂರ್ಣೇಶ ಕೆಳಕೆರೆ ಪ್ರಶ್ನಿಸಿದ್ದಾರೆ.
ಶಾಸಕರೇ, ಅನೇಕ ಸಂದರ್ಭಗಳಲ್ಲಿ
ಕೆಡಿಪಿ ಸಭೆಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ ಅನೇಕ ಸಂದರ್ಭಗಳಲ್ಲಿ ನೀವು ಜನರ ಪರವಾಗಿ ಅನೇಕ ಸರ್ಕಾರಿ
ಅಧಿಕಾರಿಗಳಿಗೆ ಹೀನಾಮಾನ ಬೈದಿದ್ದೀರಿ, ಏಕ ವಚನ ಪ್ರಯೋಗ ಮಾಡಿದ್ದೀರಿ. ಆಗ ನಿಮಗೆ ಆ ಸರ್ಕಾರಿ ನೌಕರರ
ಜಾತಿಗಳು ನೆನಪು ಆಗಲಿಲ್ಲವೇ? ಅಧಿಕಾರಿಯ ತಪ್ಪು ಗುರುತಿಸಿ ಪ್ರತಿಭಟನೆ ಮಾಡಿದರೆ ಬಿಇಒ ವಿಚಾರದಲ್ಲಿ
ನೀವು ಜಾತಿ ಬಳಕೆ ಮಾಡುತ್ತಿರುವ ಉದ್ದೇಶ ಎನು ಅಂತಾ ಎಲ್ಲರಿಗೂ ತಿಳಿದಿದೆ ಶಾಸಕರೇ…
ಶಾಸಕರೇ ಕ್ಷೇತ್ರ
ಶಿಕ್ಷಣಾಧಿಕಾರಿ ವಿರುದ್ದ ಪ್ರತಿಭಟನೆಗೆ ತಾವು ಜಾತಿ ಬಣ್ಣ ಬಳಿಯಲು ಯತ್ನಿಸುವುದು ನಿಮ್ಮ ಕೀಳುತನ
ತೋರಿಸುತ್ತಿದೆ. ತಾವು ಇತ್ತೀಚೆಗೆ ಹತ್ತಾರು ಬಾರಿ ಜಿಲ್ಲಾ ಮಂತ್ರಿಗಳನ್ನು, ರಾಜ್ಯದ ಮುಖ್ಯಮಂತ್ರಿಗಳ
ಬಗ್ಗೆ ಕೇವಲವಾಗಿ ಮಾತಾನಾಡಿದ್ದೀರಿ. ಅದು ಅವರಿಬ್ಬರು ಹಿಂದುಳಿದ ವರ್ಗದವರು ಎನ್ನುವ ಕಾರಣಕ್ಕಾ ಸಭೆ
ಸಮಾರಂಭಗಳಲ್ಲಿ ಪ್ರೊಟೊಕಾಲ್ ಕಡೆಗಣಿಸಿ ಅವಮಾನಿಸುತ್ತಿರುವುದು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ.
ಇದೆ ಧೋರಣೆ ತಾವು ಮುಂದುವರೆಸಿದಲ್ಲಿ ನಿಮ್ಮ ವಿರುದ್ದವೂ ಎಲ್ಲಾ ಪ್ರಕಣರಗಳನ್ನು ಇಟ್ಟುಕೊಂಡು ಹೋರಾಟಕ್ಕಿಳಿಯುವುದು
ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ
