ಭಾರತದಲ್ಲಿ ರಕ್ತದ ಜೊತೆಗೆ ಜಾತಿ ವ್ಯವಸ್ಥೆ ಹರಿಯುತ್ತಿದೆ

ಆರ್‌ಎಸ್‌ಎಸ್‌ ಪ್ರಕಾರ ಪರಿಶಿಷ್ಟರು ಹಿಂದೂಗಳಲ್ಲ
ಬಿಜೆಪಿಯ ಆಂತರಿಕ ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದ ಪದ ಕಿತ್ತು ಹಾಕಲಿ…!

ದತ್ತಾತ್ರೇಯ ಹೊಸಬಾಳೆ ಈಚೆಗೆ ಸಮಾಜವಾದ, ಜಾತ್ಯಾತೀತ ಪದವನ್ನು ಸಂವಿಧಾನದಿಂದ ತೆಗೆಯಬೇಕೆಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ಬಿಜೆಪಿಯ ಆಂತರಿಕ ಸಂವಿಧಾನದೊಳಗೆ ಇರುವ ಸಮಾಜವಾದ, ಜಾತ್ಯಾತೀತ ಪದ ಯಾಕೆ ಇನ್ನು ತೆಗೆಯುತ್ತಿಲ್ಲ. ಉತ್ತರ ಪ್ರದೇಶದ ಹರಿಜನರು ಹಿಂದುಗಳು ಅಲ್ಲಾ ಎಂದು ಹೇಳುವ ಬಂಚ್‌ ಆಫ್‌ ಥಾಟ್‌” ಪುಸ್ತಕವನ್ನು ಯಾಕೆ ಟೀಕಿಸುವುದಿಲ್ಲ. ಭಾರತದ ವರ್ಣಾಶ್ರಮ ಪದ್ಧತಿಯಲ್ಲಿ ವಿವಿರಿಸಿದ ಹಾಗೆ ನಾಲ್ಕು ವರ್ಣಗಳು ಮನುಷ್ಯನ ದೇಹದ ಭಾಗಗಳಾಗಿ ಗುರುತಿಸಲಾಗಿದೆ. ಮೇಲು ಕೀಳಿನ ಸಂಗತಿ ಒತ್ತಟ್ಟಿಗಿರಲಿ ಪರಿಶಿಷ್ಟರನ್ನು ದೇಹದ ಭಾಗವಾಗಿ ಗುರುತಿಸುವುದಕ್ಕೂ ಅವರಿಗೆ ಯಾಕೆ ಸಹನೆ ಇಲ್ಲ ಎಂದು ಗಾಂಧಿ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದರು.

ಭಾರತದಲ್ಲಿ ರಕ್ತದ ಜೊತೆಗೆ ಜಾತಿ ವ್ಯವಸ್ಥೆ ಮುಂದುವರೆಯುತ್ತಿದೆ. ಜಾತಿ ರಹಿತ ಹಿಂದೂ ಸಮಾಜ ಕಟ್ಟಲು ಆರ್‌ಎಸ್‌ಎಸ್‌ ಸಂಘಟನೆ ಪ್ರಯತ್ನ ನಡೆಸುವುದಿಲ್ಲವೆ. ನಾಲ್ಕು ವೇದ, ಉಪನಿಷತ್ತುಗಳನ್ನು ಸಂಪೂರ್ಣ ಓದಿದ್ದೇನೆ. ಅದರೊಳಗೆ ಇರುವ ಸಮಕಾಲೀನ ವಿಚಾರ ಆಯ್ಕೆ ಮಾಡಿಕೊಳ್ಳೋಣ. ರಾಮ ಸೀತೆಯಲ್ಲಿ ಯಾರು ಉತ್ಕೃಷ್ಟರು ಎಂದು ಬಿಜೆಪಿ ಬಹಿರಂಗಪಡಿಸಬೇಕು. ಯಾರು ಒಳ್ಳೆಯವರು ಎಂದು ಹೇಳುವಾಗ ಸತ್ಯವನ್ನು ಜನರಿಗೆ ತಿಳಿಸಬೇಕು. ಹಿನ್ನಲೆಯನ್ನು ತಿಳಿಸದರೆ ಅರ್ಧ ಸತ್ಯ ಹೇಳಿ ಮೂಡರನ್ನಾಗಿ ಮಾಡಲಾಗುತ್ತಿದೆ ಎಂದರು.

1975ರಲ್ಲಿ ಸೈನ್ಯ, ಗೃಹ ಇಲಾಖೆ ಪ್ರಧಾನ ಮಂತ್ರಿಯ ಆದೇಶ ಪರಿಪಾಲನೆ ಮಾಡಬಾರದು ಎಂದು ಜಯಪ್ರಕಾಶ್‌ ನಾರಾಯಣ ಒತ್ತಾಯಿಸಿದ್ದರು. ಸಿಪಾಯಿ ಧಂಗೆ ನಡೆಯುವ ಸಾಧ್ಯತೆ ಹಿನ್ನಲೆಯಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದಾರೆ. ಅಲಹಾಬಾದ್‌ ಹೈಕೋರ್ಟ್‌ ಪ್ರಮುಖ ಕಾರಣವೆಂದು ಬಿಜೆಪಿ ರಾಜಕೀಯ ಮಾಡಲು ಮುಂದಾಗುತ್ತಿದೆ. ವಾಸ್ತವ ಬೇರೆಯದ್ದೆ ಇದೆ. ಅವುಗಳ ಬಗ್ಗೆ ಮಾತನಾಡುವ ಧೈರ್ಯ ಅವರಿಗಿಲ್ಲ. ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆಗೆ ಯಾವುದೇ ಅರ್ಥವಿಲ್ಲ ಎಂದರು.

ನರೇಂದ್ರ ಮೋದಿ ಇತ್ತೀಚೆಗೆ ಕಾಳು ಹಾಕುವ ಫೋಟೋ ಹಂಚಿಕೊಂಡಿದ್ದರು. ವಾಸ್ತವವಾಗಿ ಆ ಫೋಟೋ ಹಿನ್ನಲೆಯನ್ನು ಬಂಚ್‌ ಆಫ್‌ ಥಾಟ್‌ ಪುಸ್ತಕದಲ್ಲಿ ಕ್ಲೀಯರ್‌ ಆಗಿ ವಿವರಿಸಿದ್ದಾರೆ. ಮೊದಲಿಗೆ ಒಬ್ಬ ಶ್ರೀಮಂತ ನವಿಲಿಗೆ ಕಾಳು ಹಾಕುತ್ತಾನೆ. ಅದರಿಂದ ಅವನ ಹಿಂದೆ ನವೀಲು ಕಾಳಿಗಾಗಿ ತಿರುಗುತ್ತದೆ. ನಂತರ ಕಾಳು ಹಾಕದಿದ್ದರೂ ನವಿಲು ಅವನ ಹಿಂದೆ ಸುತ್ತುತ್ತದೆ. ಇಲ್ಲಿ ನವಿಲು ಪರಿಶಿಷ್ಟರೆಂದು ಗ್ರಹಿಸಬೇಕು ಆಗ ಸಂಪೂರ್ಣ ಆರ್‌ಎಸ್‌ಎಸ್‌, ಬಿಜೆಪಿ ಕಥೆ ಬಟಾಬಯಲಾಗುತ್ತದೆ ಎಂದರು.

ಸರ್ಕಾರಿ ಅಧಿಕಾರಿಗಳನ್ನು ಶಾಸಕ ಆರಗ ಜ್ಞಾನೇಂದ್ರ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ಸ್ಥಿತಿಯಲ್ಲಿರುವ ಅವರು ದೂರವಾಣಿ ಹಾಗೂ ನೇರವಾಗಿ ಏಕವಚನದಲ್ಲಿ ದರ್ಪ ತೋರುತ್ತಿದ್ದಾರೆ. ನೀವೇನು ಹೊಟ್ಟೆಗೆ ಅನ್ನ ತಿನ್ನುತ್ತೀರಾ ಇಲ್ಲವಾ ಎಂದು ಪರಿಶಿಷ್ಟ ಜನಾಂಗದ ಅಧಿಕಾರಿಗಳಿಗೆ ದಬಾಯಿಸುತ್ತಿದ್ದಾರೆ. ಅವರ ಮೇಲೆ ದೂರು ಕೊಡಲು ಅಧಿಕಾರಿಗೆ ಹೇಳಿದ್ದೇನೆ. ಇಲ್ಲದಿದ್ದರೆ ನಾನೇ ದೂರು ನೀಡುತ್ತೇನೆ ಎಂದರು.

ಸರ್ಕಾರಿ ಜೆ.ಸಿ. ಆಸ್ಪತ್ರೆಯ ವೈದ್ಯರ ವರ್ಗಾವಣೆಯನ್ನು ದೊಡ್ಡ ಸಂಗತಿಯಾಗಿ ಶಾಸಕರು ಬಿಂಬಿಸುತ್ತಿದ್ದಾರೆ. 24 ಗಂಟೆಯೊಳಗೆ ವರ್ಗಾವಣೆ ಆದೇಶ ಪಾಲನೆ ಸಾಧ್ಯವೆ ಎಂದು ಗೃಹಸಚಿವರಾಗಿದ್ದ ಅವರೆ ಹೇಳಬೇಕು. ಕಳೆದ ಮೂರು ತಿಂಗಳಿನಿಂದ ವೈದ್ಯರ ಕೌನ್ಸಿಲಿಂಗ್‌ ನಡೆಯುತ್ತಿದೆ. ವೈದ್ಯರ ಅನುಮತಿ ಮೇರೆಗೆ ಬೇರೆಕಡೆ ವರ್ಗಾಯಿಸಿದ್ದಾರೆ. ಹೊಸ ವೈದ್ಯರನ್ನು ನೇಮಕ ಮಾಡಿದ್ದಾರೆ. ಇದರಲ್ಲಿ ಪ್ರತಿಭಟಿಸುವ ವಿಚಾರ ಏನಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಗ್ರಾಮಾಂತರ ಬ್ಲಾಕ್‌ ಅಧಕ್ಷ ಮುಡುಬ ರಾಘವೇಂದ್ರ, ಗ್ಯಾರಂಟಿ ಅನುಷ್ಟಾನ ಸಮಿತಿ ತಾಲ್ಲೂಕು ಅಧ್ಯಕ್ಷ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ರಹಮತ್‌ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ, ಮುಖಂಡರಾದ ವಾದಿರಾಜ್‌ ಭಟ್‌, ಟಿ.ಎಲ್.‌ಸುಂದರೇಶ್‌, ಬಿ.ಕೆ.ಉದಯ್‌ ಕುಮಾರ್‌, ಡಿ.ಎಸ್. ವಿಶ್ವನಾಥ ಶೆಟ್ಟಿ, ಶಬನಮ್‌, ಮಂಜುಳಾ, ಸುಶೀಲಾ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post