ತೀರ್ಥಹಳ್ಳಿಗೆ 5 ಹೊಸ ವೈದ್ಯರ ನೇಮಕ

ಮೂವರು ಕೌನ್ಸಿಲಿಂಗ್, ಇಬ್ಬರು ವರ್ಗಾವಣೆ

ತೀರ್ಥಹಳ್ಳಿ ತಾಲ್ಲೂಕು ಜೆ.ಸಿ. ಆಸ್ಪತ್ರೆಗೆ 5 ಹೊಸ ವೈದ್ಯರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. ಮೂವರು ವೈದ್ಯರು ಕೌನ್ಸಿಲಿಂಗ್‌ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿದ್ದು ಇಬ್ಬರನ್ನು ವರ್ಗಾವಣೆಯ ಮೂಲಕ ನೇಮಕಗೊಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇದರ ಆಯುಕ್ತ ಶಿವಕುಮಾರ ಕೆ.ಬಿ. ಜುಲೈ 7ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.

5 ಹೊಸ ವೈದ್ಯರು ಯಾರ್ಯಾರು...?

1) ದಂತ ತಜ್ಞ- ಡಾ. ಕೆ ನಾಗೇಶ್ ಕುಮಾರ್ ( ಮೈಸೂರು ಇಂದ ಕೌನ್ಸಿಲಿಂಗ್ ಮೂಲಕ)

2) ಮಕ್ಕಳ ತಜ್ಞರು- ಡಾ. ಸುಪ್ರೀತ್ ( ಅನವಟ್ಟಿಯಿಂದ ವರ್ಗಾವಣೆ )

3) ಅರವಳಿಕೆ ತಜ್ಞರು - ಡಾ.ವಿನಯ್ ( ಹೊಳಲೂರುನಿಂದ ವರ್ಗಾವಣೆ )

4) ಇ.ಏನ್.ಟಿ ತಜ್ಞರು - ಡಾ. ಕವಿತಾ ( ಭದ್ರಾವತಿ ಇಂದ ಕೌನ್ಸಿಲಿಂಗ್ ಮೂಲಕ)

5) ಮೂಳೆ ತಜ್ಞರು - ಡಾ.ಗಣೇಶ್ ನಾಯಕ್ ( ಉಡುಪಿ ಇಂದ ಕೌನ್ಸಿಲಿಂಗ್ ಮೂಲಕ)

ಈಗಿರುವ ವೈದ್ಯರು ಆಸ್ಪತ್ರೆಯ ಹುದ್ದೆಯಿಂದ ಬಿಡುಗಡೆಯಾಗುವುದು ಮತ್ತು ಹೊಸ ವೈದ್ಯರು ಅಧಿಕಾರ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದ್ದು ಇನ್ನೊಂದು ವಾರ ಜನ ಸಾಮಾನ್ಯರ ಚಿಕಿತ್ಸಾ ವೇಳಪಟ್ಟಿಯಲ್ಲಿ ಏರುಪೇರಾಗಲಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post