ನೆಂಪೆ ದೇವರಾಜ್‌ಗೆ ಮಾತೃ ವಿಯೋಗ
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ರೈತ ಸಂಘ ಮತ್ತು ಪ್ರಗತಿಪರ ಹೋರಾಟಗಳಿಗೆ ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸಿದ್ದ ಕೃಷಿಕರಾದ ಚಂದ್ರಮ್ಮ (86) ಸೋಮವಾರ ಹಾರೋಗೊಳಿಗೆಯ ಸ್ವಗೃಹದಲ್ಲಿ ನಿಧನರಾದರು. ಹಲವು ದಿನಗಳಿಂದ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದ ಅವರು ವಾರದ ಹಿಂದಿನಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.ಅತಿಥಿ ಆರೈಕೆಯಲ್ಲಿ
ಖುಷಿ ಪಡುತ್ತಿದ್ದ ಅವರು ಮನೆಗೆ ಆಗಮಿಸುತ್ತಿದ್ದ ಯಾವುದೇ ಅತಿಥಿಗಳನ್ನು ತಕ್ಷಣಕ್ಕೆ ಕಳುಹಿಸಿಕೊಡುವುದೆಂದರೆ
ಅವರಿಗೆ ಬಹಳ ಬೇಸರದ ಸಂಗತಿಯಾಗಿತ್ತು. ಹತ್ತಿರದವರು ಎಂದಾದರೆ ಅವರನ್ನು ಬಿಟ್ಟುಕೊಡುತ್ತಿರಲಿಲ್ಲ.
ಕಾಫಿ, ತಿಂಡಿ ಸೇವೆ ಕೊಡುವಂತೆ ಮಕ್ಕಳಿಗೆ ಹೇಳುತ್ತಿದ್ದರು. ಆಗಿನ ಕಾಲದ ಬಡತನದ ನಡುವೆಯೂ ಅತ್ಯಂತ
ಶಿಸ್ತು ಜೀವನ ಅವರ ಗುರಿಯಾಗಿತ್ತು.
ಚಂದ್ರಮ್ಮ ಅವರಿಗೆ
ಪ್ರಗತಿಪರ ಚಿಂತಕ, ಸಾಹಿತಿ ನೆಂಪೆ ದೇವರಾಜ್, ಪುತ್ರಿ ಇಂದ್ರಮ್ಮ ಇದ್ದಾರೆ. ಅಂತ್ಯಕ್ರಿಯೆ ಮಂಗಳವಾರ
ಬೆಳಿಗ್ಗೆ 11 ಗಂಟೆಗೆ ಹಾರೋಗೊಳಿಗೆಯಲ್ಲಿ ನಡೆಯಲಿದೆ.
.jpeg)