ಎಂಐಒ ಕ್ಯಾನ್ಸರ್ ಆಸ್ಪತ್ರೆ ; ಆಯುಷ್ ಮಾನ್ ಭಾರತ್ ಸೌಲಭ್ಯ ಆರಂಭ
ಸರ್ಕಾರಿ ಯೋಜನೆಗಳ ಮೂಲಕ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ
ನೆರಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರಗ ಸಮೀಪ ತುಡನಕಲ್ ನಲ್ಲಿ ಕಾರ್ಯ ಆರಂಭಿಸಿರುವ ಕರ್ನಾಟಕ ರಾಜ್ಯದಲ್ಲಿಯೇ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ಸ್ಥಾಪನೆಯಾಗಿರುವ ಮೊದಲ ಕ್ಯಾನ್ಸರ್ ಆಸ್ಪತ್ರೆ ಎಂಬ ಹೆಗ್ಗಳಿಕೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕೋಲಾಜಿ ದೇಶದ ಅತ್ಯಂತ ವಿಶ್ವಾಸರ್ಹ ಕ್ಯಾನ್ಸರ್ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿದೆ.
ತೀರ್ಥಹಳ್ಳಿಯಲ್ಲಿ ಕಳೆದ ಆರು ತಿಂಗಳಿಂದ ರೋಗಿಗಳಿಗೆ ಉಪಚಾರ ಆರಂಭಿಸಿರುವ ಈ ಸಂಸ್ಥೆ ಈಗ ಬಿಪಿಎಲ್ ಮತ್ತು ಅಯುಷ್ಮಾನ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಘೋಷಣೆ ಮಾಡಿದೆ.
ಆಸ್ಪತ್ರೆಯಲ್ಲಿ ಸುದ್ಧಿಗಾರರ ಜೊತೆಗೆ ಮಾತನಾಡಿದ ನಿರ್ದೇಶಕ ಡಾ. ಸುರೇಶ್ ರಾವ್ ತೀರ್ಥಹಳ್ಳಿಯಂತಹ ಪರಿಶುದ್ಧ ವಾತಾವರಣದ ಪ್ರದೇಶದಲ್ಲಿ ನಿರೀಕ್ಷೆ ಮೀರಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ ಸಾಧಾರಣವಾಗಿ ಕ್ಯಾನ್ಸರ್ ಅತಿಯಾಗಿ ತಂಬಾಕು, ಮದ್ಯ, ಸಂಸ್ಕರಣೆ ಮಾಡಿದ ಆಹಾರ ತಿನ್ನುವವರಲ್ಲಿ ಕಂಸಿಕೊಳ್ಳುತ್ತದೆ ಆದರೆ ತೀರ್ಥಹಳ್ಳಿಯಲ್ಲಿ ಯಾವ ದುಶ್ಚಟ ಇಲ್ಲದ ಮಹಿಳೆಯರಲ್ಲಿ ಕೂಡ ಕಂಡು ಬಂದಿದೆ ಇದು ಆತಂಕಕಾರಿ. ಸಾಧಾರಣವಾಗಿ ಕ್ಯಾನ್ಸರ್ ಮೊದಲ ಹಾಗೂ ಎರಡನೇ ಹಂತದಲ್ಲಿ ಸಂಪೂರ್ಣ ವಾಸಿ ಮಾಡಬಹುದಾದ ಕಾಯಿಲೆ ನಿರ್ಲಕ್ಷ ಮಾಡಿ ಮೂರು ಹಾಗೂ ನಾಲ್ಕನೇ ಹಂತ ತಲುಪಿದರೆ ಅಪಾಯ ತೀರ ಹೆಚ್ಚು.
ಮೂಲ ಸಂಸ್ಥೆ ಮಂಗಳೂರು ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 45 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ವಿಶ್ವ ಮಟ್ಟದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲಾಗಿದೆ.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸುತ್ತಲಿನ ರೋಗಿಗಳಿಗೆ ಅನುಕೂಲ ಆಗಲಿ ಎನ್ನುವ ಆಶಯದಿಂದ ತೀರ್ಥಹಳ್ಳಿಯಲ್ಲಿ ಆಸ್ಪತ್ರೆ ಸ್ಥಾಪನೆ ಮಾಡಲಾಗಿದೆ ಎಂದು ಡಾ. ಸುರೇಶ ರಾವ್ ವಿವರಿಸಿದರು.
ಇದೇ ಸಂಧರ್ಭದಲ್ಲಿ ಅವರು ಆಸ್ಪತ್ರೆಯ ಸಂಜೀವಿನಿ ಟ್ರಸ್ಟ್ ಮೂಲಕ ಆಸರೆ ಹಾಗೂ ಅಭಯ ಎಂಬ ಅರೋಗ್ಯ ಯೋಜನೆ ರೂಪಿಸಲಾಗಿದೆ.
ಷರತ್ತಿಗೆ ಒಳಪಟ್ಟು ಆಸರೆ ಯೋಜನೆಯಡಿ ಒಂದು ವ್ಯಕ್ತಿಗೆ ದಿನಕ್ಕೆ ಒಂದು ರೂ ದೇಣಿಗೆ ನೀಡಿ ಹೆಸರು ನೋಂದಣಿ ಮಾಡಿಕೊಂಡರೆ ಮೂರು ಲಕ್ಷ ರೂ ಗಳ ವರೆಗೆ ಉಚಿತ ಚಿಕಿತ್ಸೆ ದೊರಕುತ್ತದೆ. ಅದೇ ರೀತಿ ಅಭಯ ಯೋಜನೆಯಡಿ ದಿನಕ್ಕೆ 5 ರೂ ನೀಡಿ ಹೆಸರು ನೋಂದಣಿ ಮಾಡಿಕೊಂಡರೆ 10 ಲಕ್ಷದ ತನಕ ಉಚಿತ ಚಿಕಿತ್ಸೆ ದೊರಕುತ್ತದೆ.
ಹಾಗಾಗಿ ಕ್ಯಾನ್ಸರ್ ರೋಗಿಗಳು ಭಯ ಪಡುವ ಅಗತ್ಯವಿಲ್ಲ ಉತ್ತಮ ಜೀವನ ಶೈಲಿಯಿಂದ ಕ್ಯಾನ್ಸರ್ ಬರದಂತೆ ನೋಡಿಕೊಳ್ಳಬಹುದು ಬಂದರೂ ಕೂಡ ತೀರಾ ತಡ ಮಾಡದೇ ಆಸ್ಪತ್ರೆಗೆ ಬಂದರೆ ಗುಣಪಡಿಸ ಬಹುದಾದ ಸಾಧ್ಯತೆ ಹೆಚ್ಚು ಎಂದರು.
ಈ ಸಂಧರ್ಭದಲ್ಲಿ ಡಾ. ದಿವ್ಯ ಜ್ಯೋತಿ, ಡಾ. ಭವ್ಯ, ಡಾ. ಸುಹಾಸ್ ನಾವಡ ಉಪಸ್ಥಿತರಿದ್ದರು.
ಡಾ. ಸುರೇಶ್ ರಾವ್ ಈ ಕ್ಷೇತ್ರ ದಲ್ಲಿ 35 ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದು ವಿದೇಶಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ ಇವರು ಮೂಲತ ಬೀದರಗೋಡು ಗ್ರಾಮ ದವರು. ಡಾ. ಭವ್ಯ ಮೂಲತ ಆರಗದವರು, ಡಾ. ಸುಹಾಸ್ ನಾವಡ ಮೂಲತ ಕಮ್ಮರಡಿಯವರು.
