ಧಾರ್ಮಿಕ ಭಾವನೆ
ಕೆರಳಿಸುವ ಪ್ರಯತ್ನ
ಅಧಿಕಾರಿ, ಸಿಬ್ಬಂದಿಗಳ
ಮೇಲೆ ಕಾನೂನು ಕ್ರಮ ಕೈಗೊಳ್ಳಿ – ತಾಲ್ಲೂಕು ಬ್ರಾಹ್ಮಣ ಸಂಘ
ಶಿವಮೊಗ್ಗ ನಡೆದ
ಸಿಇಟಿ ಪರೀಕ್ಷೆಯ ವೇಳೆ ಪರೀಕ್ಷಾ ಕೇಂದ್ರದಲ್ಲಿ ವಸ್ತ್ರ ಸಂಹಿತೆ ನಿಯಮದ ನೆಪದಲ್ಲಿ ವಸ್ತ್ರ ಸಂಹಿತೆ
ನೆಪದಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಪ್ರಯತ್ನ ನಡೆದಿದೆ. ಜನಿವಾರ ಧರಿಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು
ನಿರ್ಬಂಧ ಇದುವರೆಗೂ ಎಲ್ಲಿಯೂ ಇರುವುದಿಲ್ಲ. ಆದರೂ ಧಾರ್ಮಿಕ ಭಾವನೆ ಕೆರಳಿಸುವ ಉದ್ದೇಶದಿಂದ ಪರೀಕ್ಷಾ
ಕೇಂದ್ರದ ಅಧಿಕಾರಿಗಳು ಜನಿವಾರ ಕತ್ತರಿಸಿ, ಕಸದ ಬುಟ್ಟಿಗೆ ಎಸೆದಿರುವುದು ಖಂಡನೀಯ ಎಂದು ತಾಲ್ಲೂಕು
ಬ್ರಾಹ್ಮಣ ಸಂಘದ ಅಧ್ಯಕ್ಷ ತುಂಬರಮನೆ ಚಂದ್ರಶೇಖರ್ ಆರೋಪಿಸಿದರು.
ತೀರ್ಥಹಳ್ಳಿಯ ತಾಲ್ಲೂಕು
ಕಚೇರಿ ಮುಂಭಾಗ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಿ ಸೋಮವಾರ ತಹಶೀಲ್ದಾರ್‌ಗೆ ಮನವಿ
ಸಲ್ಲಿಸಿ ಮಾತನಾಡಿ, ಸಿಇಟಿ ಪರಿಕ್ಷೆ ಬರೆಯುವ ವಿದ್ಯಾರ್ಥಿಗಳ ಇಚ್ಚೆಗೆ ವಿರುದ್ಧವಾಗಿ ಜನಿವಾರ ಕತ್ತರಿಸಿರುವುದಲ್ಲದೇ
ಬೆದರಿಕೆ ಒಡ್ಡಿ ವಿದ್ಯಾರ್ಥಿಗಳ ಧಾರ್ಮಿಕ ಹಾಗೂ ಮಾನಸಿಕ ಭಾವನೆಗಳಿಗೆ ಘಾಸಿಯುಂಟು ಮಾಡಿರುತ್ತಾರೆ
ಎಂದರು ದೂರಿದರು.
ಕಾನೂನು ನೆಪದಲ್ಲಿ
ಧಾರ್ಮಿಕ ಆಚರಣಾ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸಂವಿಧಾನ ವಿರೋಧಿ ಕೃತ್ಯ ಎನಿಸಿಕೊಂಡಿದೆ.
ಇದು ಜನಿವಾರ ಧರಿಸುವ ಕೋಟ್ಯಾಂತರ ಜನರ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿ ಉಂಟಾಗಿದೆ. ಸಮುದಾಯದ
ನಂಬಿಕೆ ಹತ್ತಿಕ್ಕುವ ಪ್ರಯತ್ನ ನಡೆಸಿರುವ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸಬೇಕೆಂದು ವಿನಂತಿಸಿದರು.
ಪ್ರಮುಖರಾದ ಜಿ.ಎಸ್.ನಾರಾಯಣ
ರಾವ್, ಕೆ.ಎಸ್.ನಾರಾಯಣ, ಸತೀಶ್, ಕೂಳೂರು ಸತ್ಯನಾರಾಯಣ ಇದ್ದರು.
