ಆಯ್ಕೆಗೆ ವಿಫುಲ
ಅವಕಾಶ
ಫ್ಯಾಷನ್, ನೈಲ್
ಆರ್ಟ್, ಕೃಷಿ, ಗೃಹಪಯೋಗಿ ವಸ್ತುಗಳು ಒಂದೇ ಸೂರಿನಡಿ
ತೀರ್ಥಹಳ್ಳಿ ಪಟ್ಟಣದ ಆಜಾದ್ ರಸ್ತೆಯ ಡಿಸಿಸಿ ಬ್ಯಾಂಕ್ ಮುಂಭಾಗದ ಕಟ್ಟಡದಲ್ಲಿ ಕಳೆದ ಹಲವಾರು ವರ್ಷಗಳಿಂದ ಬಹುತೇಕ ಗ್ರಾಹಕರು ಬಯಸುವ ಎಲ್ಲಾ ರೀತಿಯ ಕೃಷಿ ಹಾಗೂ ಗೃಹಪಯೋಗಿ ವಸ್ತು ಹಾಗೂ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದ ಎಸ್.ಎಂ. ಎಂಟರ್‌ಪ್ರೈಸಸ್ ಮತ್ತು ಫ್ಯಾನ್ಸಿ ಗಿಪ್ಟ್ ಸ್ಟೋರ್ ಈಗ ಸಂಪೂರ್ಣ ಹೊಸ ಸ್ವರೂಪದೊಂದಿಗೆ ಆಧುನೀಕರಣಗೊಂಡು ಗುರುವಾರ ಮಾಲೀಕರಾದ ಗೋಪಾಲಕೃಷ್ಣ ಶೆಣೈ, ಜ್ಯೋತಿ ಶೆಣೈ ಲೋಕಾರ್ಪಣೆಗೊಳಿಸಿದರು.
ವಿನೂತನ ಕಲ್ಪನೆಯೊಂದಿಗೆ
ಗ್ರಾಹಕರನ್ನು ಆಕರ್ಷಿಸುತ್ತಿರುವ ಎಸ್.ಎಂ. ಎಂಟರ್‌ಪ್ರೈಸಸ್ ಮತ್ತು ಫ್ಯಾನ್ಸಿ & ಗಿಪ್ಟ್
ಸ್ಟೋರ್ ಮಟ್ಟಿಗೆ ಅತ್ಯಂತ ಹೊಸದೆನ್ನಬಹುದಾದ ಕಲ್ಪನೆಯನ್ನು ಈ ಬೃಹತ್ ಮಳಿಗೆ ಹೊಂದಿದ್ದು ಫ್ಯಾನ್ಸಿ
ಮತ್ತು ಗಿಫ್ಟ್ ಐಟಂಗಳು, ಕಾಸ್ಮೆಟಿಕ್ಸ್ ಉತ್ಪನ್ನಗಳು, ಕೃಷಿಗೆ ಸಂಬಂಧಿಸಿದ ಎಲ್ಲಾ ಎಲಕರಣೆಗಳು,
ಗೃಹಪಯೋಗಿ ವಸ್ತುಗಳು, ಈ ಎಲ್ಲವನ್ನು ಸೂಪರ್ ಬಜಾರ್ ರೀತಿ ಪ್ರತ್ಯೇಕವಾದ ವ್ಯವಸ್ಥೆಯೊಂದಿಗೆ ಜೋಡಿಸಿಟ್ಟಿರುವುದು
ಗ್ರಾಹಕರಿಗೆ ನಿರೀಕ್ಷೆಗೂ ಮೀರಿದ ಆಯ್ಕೆಯ ಅವಕಾಶವನ್ನು ಒದಗಿಸಿದೆ.
ಕೆಳ ಮಳಿಗೆಯಲ್ಲಿ
ಅತ್ಯುತ್ತಮ ಗುಣಮಟ್ಟದ ಒನ್ ಗ್ರಾಂ ಗೋಲ್ಡ್, ನೈಲ್ ಆರ್ಟ್, ಮದುಮಗಳ ಅಲಂಕಾರಕ್ಕಾಗಿ ಎಲ್ಲಾ ರೀತಿಯ
ಅಲಂಕಾರಿಕ ವಸ್ತುಗಳು, ದುಬಾರಿ ಬೆಲೆಯ ಅತ್ಯಾಧುನಿಕ ವಿನ್ಯಾಸದ ಗೌನ್‌ಗಳು, ಪುರುಷರಿಗಾಗಿ ಕೋಟುಗಳನ್ನು
ಫೋಟೋ ಶೂಟ್ ಹಾಗೂ ಬಾಡಿಗೆಗೆ ನೀಡುವ ವಿನೂತನ ಕಲ್ಪನೆಯನ್ನು ಈ ಮಳಿಗೆ ಒಳಗೊಂಡಿದೆ.
ಅತ್ಯಂತ ವಿಶೇಷ ಹಾಗೂ
ಜನಪರ ಆಲೋಚನೆಯೆಂದರೆ ಈ ಕಟ್ಟಡದ ಕೆಳಭಾಗದಲ್ಲಿ ನಿಧನ ಹೊಂದಿದವರಿಗಾಗಿ ಅಂತ್ಯಕ್ರಿಯೆಗೆ ಅಗತ್ಯವಾದ
ಎಲ್ಲಾ ವಸ್ತುಗಳನ್ನು ಒಂದೆಡೆ ಜೋಡಿಸಲಾಗಿದ್ದು ಇದು ವಾರದ ಎಲ್ಲಾ ದಿನ ಮತ್ತು ಎಲ್ಲಾ ಸಮಯದಲ್ಲೂ ಮುಕ್ತವಾಗಿ
ತೆರೆದಿದ್ದು ಒಂದು ವೇಳೆ ಮಾಲೀಕರು ಸಂಪರ್ಕಕ್ಕೆ ಸಿಗದಿದ್ದ ಸಂದರ್ಭದಲ್ಲೂ ತೆಗೆದುಕೊಂಡು ಹೋಗಿ ಬಳಿಕ
ಹಣ ಪಾವತಿ ಮಾಡಬಹುದಾದ ಅವಕಾಶ ಒದಗಿಸಲಾಗಿದೆ.
ಎಸ್.ಎಂ. ಫ್ಯಾನ್ಸಿ ಅಂಡ್ ಗಿಫ್ಟ್ ಸೆಂಟರ್ ಸೇವೆಗಳಿಗಾಗಿ ಪಾಲುದಾರರಾದ ವಿದ್ಯಾನಂದ ಶೆಣೈ (8660463218), ಪ್ರಜ್ವಲ ಶೆಣೈ (8431798137) ಹಾಗೂ ಎಸ್.ಎಂ.ಎಂಟರ್‌ಪ್ರೈಸಸ್ ಸೆಂಟರ್ ಸೇವೆಗಳಿಗಾಗಿ ಪಾಲುದಾರರಾದ ದಯಾನಂದ ಶೆಣೈ (8217612616), ದೇವಿಕಾ ಶೆಣೈ ಅವರನ್ನು ಸಂಪರ್ಕಿಸಬಹುದಾಗಿದೆ.







