ಫೆಭ್ರವರಿ 8 ರಂದು 11 ಪಲ್ಲಕ್ಕಿ ಸಮಾಗಮ
ಮಂಡಗದ್ದೆ ಸಮೀಪದ ಶ್ರೀ ಕ್ಷೇತ್ರ ಹೆಗಲತ್ತಿ ಶ್ರೀ ನಾಗಯಕ್ಷಿ ದೇವಿ ಮತ್ತು ನಾಗದೇವರ 11ನೇ ವಾರ್ಷಿಕೋತ್ಸವ ಫೆಬ್ರವರಿ 5 ರಿಂದ ಆರಂಭಗೊಂಡಿದ್ದು 11ರ ವರೆಗೆ ಅದ್ದೂರಿಯಾಗಿ ಪೂಜಾ ಹಾಗೂ ಜಾತ್ರಾ ಮಹೋತ್ಸವ ನೆರವೇರಲಿದೆ. ಈ ಮಹೋತ್ಸವದಲ್ಲಿ ಅನೇಕ ಪೂಜಾ ಕಾರ್ಯಕ್ರಮಗಳು, ಗಣಹೋಮ, ಸತ್ಯನಾರಾಯಣ ಪೂಜೆ, ಪುಣ್ಯವಾಚನ, ನಾಗಮೂಲಮಂತ್ರ ಹೋಮ, ನವಗ್ರಹ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ, ಬ್ರಹ್ಮ ಕಲಶ ಸ್ಥಾಪನೆ, ನವಾರಣ ಮಂತ್ರ ಜಪ, ನಾಗಯಕ್ಷೆ ಮೂಲ ಮಂತ್ರ ಜಪ, ಅಷ್ಟಾವಧಾನ ಸೇವೆ, ಚಂಡಿಕಾ ಪಾರಾಯಣ, ಸುದರ್ಶನ ಹೋಮ, ಶತಚಂಡಿಕಾ ವಾಹನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಕ್ಷೇತ್ರದಲ್ಲಿ ನಡೆಯಲಿದೆ.
ಫೆಬ್ರವರಿ 8 ರಂದು
ತೀರ್ಥಹಳ್ಳಿಯ ಸೀಮೆ ದೇವರುಗಳಾದ ಮಾಳೂರು ಶ್ರೀ ಗುತ್ಯಮ್ಮ ದೇವಸ್ಥಾನ, ಶ್ರೀ ಕ್ಷೇತ್ರ ಗುತ್ತಿಯಡೇಹಳ್ಳಿ,
ಶ್ರೀ ಕ್ಷೇತ್ರ ಸೋಮವಾರಸಂತೆ ಹೊಸಹಳ್ಳಿ, ಶ್ರೀ ಗಾಳಿಮಾರಮ್ಮ ದೇವಸ್ಥಾನ ಮಾಳೂರು, ಶ್ರೀ ಆಲಬಳ್ಳಿ
ಚಾಮುಂಡೇಶ್ವರಿ, ಸಮಕಾನಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು, ಶ್ರೀ ಗುತ್ಯಮ್ಮ ಶ್ರೀ ದುರ್ಗಮ್ಮ
ದೇವಸ್ಥಾನ ಮಂಡಗದ್ದೆ, ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರು ಮೇಗರವಳ್ಳಿ, ಶ್ರೀ ಚಾಮುಂಡೇಶ್ವರಿ ನೆಲ್ಲೀಸರ
ಕ್ಯಾಂಪ್, ಕುಟ್ಲಗಾರು ಗುತ್ಯಮ್ಮ ಅಮ್ಮನವರು, ಕುಮಾರರಾಮ ಗ್ರಾಮ ದೇವರು ಶ್ರೀ ಕ್ಷೇತ್ರ ಕೀಗಡಿ ಸೇರಿದಂತೆ
11 ದೇವರುಗಳ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಲಿದೆ. ಅದೇ ದಿನ ಸಂಜೆ 8 ಗಂಟೆಗೆ ಮಾಳೂರು ಸೀಮೆ
ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ನಾಗವಂದನಾ ಯಕ್ಷಗಾನ ನಡೆಯಲಿದೆ.
ಈ ದೇವಾಲಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ನಾಗಯಕ್ಷೆ ತಾಯಿಯ ದರ್ಶನ ಇರುತ್ತದೆ. ಸರ್ವರನ್ನು ದೇವಸ್ಥಾನ ಸಮಿತಿಯ ಪ್ರಮುಖರು ಸ್ವಾಗತಿಸಿದ್ದಾರೆ.

