ಬ್ಲಾಕ್ ಕಾಂಗ್ರೆಸ್‌ನಲ್ಲಿ ಉನ್ನತ ಜವಾಬ್ದಾರಿಗೆ‌ ಆಗ್ರಹ

ಅಮರನಾಥ ಶೆಟ್ಟಿ ಸೇವೆ ಪರಿಗಣಿಸಲು ಒತ್ತಡ
ಕಾಂಗ್ರೆಸ್ ಮುಖಂಡರಾದ ಕಲ್ಗುಂಡಿ ಸಂದೀಪ್, ಜೈಕರ ಶೆಟ್ಟಿ ಒತ್ತಾಯ
ತೀರ್ಥಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅವಿರತ ಶ್ರಮಿಸಿರುವ ಅಮರನಾಥ ಶೆಟ್ಟಿ ಸೇವೆಯನ್ನು ಕಾಂಗ್ರೆಸ್ ಪಕ್ಷ ಪರಿಗಣಿಸಬೇಕು. ಅವರ ಅಧ್ಯಕ್ಷತೆಯಲ್ಲಿ ಯುವಕರನ್ನು ಸೆಳೆಯುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಹಳ್ಳಿ ಹಳ್ಳಿಯ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯವನ್ನು ತರುವ ಪ್ರಯತ್ನ ನಡೆಸಿದ್ದರು. ಅವರ ಪ್ರಯತ್ನದ ಫಲವಾಗಿ ಪಕ್ಷದಲ್ಲಿ ಯಾವುದೇ ರೀತಿಯ ಗುಂಪುಗಾರಿಕೆಗೆ ಅವಕಾಶ ನೀಡಿರಲಿಲ್ಲ. ಎಲ್ಲರನ್ನು ಒಗ್ಗೂಡಿಸಿ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಉತ್ಸಾಹಿ ಯುವಕರನ್ನು ಕಾಂಗ್ರೆಸ್‌ ಪಕ್ಷ ಗುರುತಿಸಿ ಜವಾಬ್ದಾರಿ ನೀಡುವ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕು. ಅವರನ್ನು ಬ್ಲಾಕ್‌ ಕಾಂಗ್ರೆಸ್‌ ಉನ್ನತ ಜವಾಬ್ದಾರಿ ನೀಡಿ ಗೌರವಿಸಬೇಕು ಎಂದು ಕಾಂಗ್ರೆಸ್ ಮುಖಂಡರಾದ ಕಲ್ಗುಂಡಿ ಸಂದೀಪ್, ಜೈಕರ ಶೆಟ್ಟಿ ಒತ್ತಾಯಿಸಿದ್ದಾರೆ.
ಅಮರನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ರಾವೆ ಟೆಂಕಬೈಲು ಮಾರ್ಗವಾಗಿ ನಗರದ ವರೆಗೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ ಸಮಸ್ಯೆ ನಿವಾರಣೆಗಾಗಿ 17 ಕಿಲೋ ಮೀಟರ್‌ ಬೃಹತ್ ಪಾದಯಾತ್ರೆ ನಡೆಸಲಾಗಿತ್ತು. ನೂರಾರು ಯುವಕರ ಮನಸೆಳೆದು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ. ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಒಂದೂವರೆ ಸಾವಿರ ಬೈಕ್‌ ರ್ಯಾಲಿ ಮಾಡಿದ್ದಾರೆ. ಯುವ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ ಹಾಕಿಸಿದಾಗ ರಾತ್ರೋರಾತ್ರಿ ಪೊಲೀಸ್‌ ಠಾಣೆ, ಅರಣ್ಯ ಅಧಿಕಾರಿ ಇಲಾಖೆ ಮುಂಭಾಗ ಧರಣಿ ಹಮ್ಮಿಕೊಂಡಿದ್ದರು.
ಹತ್ತಾರು ಉಪವಾಸ ಸತ್ಯಾಗ್ರಹ, ಕಿಮ್ಮನೆ ರತ್ನಾಕರ್‌ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಯುವಕರನ್ನು ಭಾಗವಹಿಸಲು ಶ್ರಮಿಸಿರುವುದು, ಬಿಜೆಪಿ ಪಕ್ಷದ 40% ಕಮಿಷನ್‌ ವಿರುದ್ಧ ಪೇ ಸಿಎಂ ಅಭಿಯಾನ, ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ತರಲು ಯುವಕರನ್ನು ಸೆಳೆದಿರುವುದು, ಸೇರಿದಂತೆ ಗಾಂಧಿ ಭವನ ಕಟ್ಟಡ ದೇಣಿಗೆ ಸಂಗ್ರಹದಲ್ಲಿ ಸಕ್ರೀಯವಾಗಿ ಭಾಗಿವಹಿಸುವಿಕೆ,‌ ಇಂದಿರಾ ಕ್ಯಾಂಟೀನ್‌ನಲ್ಲಿ ಸೇವೆ, ಕೊರೋನಾ ಸಾಂಕ್ರಾಮಿಕ ವೇಳೆಯಲ್ಲಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಸಂತೈಸುವಿಕೆ, ಮಾಸ್ಕ್, ಡ್ರೈ ಫ್ರೂಟ್ಸ್‌, ಕಿಟ್‌ ಹಂಚುವ ಕಾರ್ಯಕ್ರಮ ಹಮ್ಮಿಕೊಂಡು ಜನಪರವಾಗಿ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ನೇರವಾಗಿ ಟೀಕಿಸುವ ಮೂಲಕ ಯುವ ಕಾಂಗ್ರೆಸ್‌ಗೆ ಗಟ್ಟಿತನವನ್ನು ತಂದುಕೊಂಡಿದ್ದಾರೆ. ಜೊತೆಗೆ ಅನೇಕ ಯುವ ಕಾರ್ಯಕರ್ತರ ವೈಯಕ್ತಿಕ ಸಮಸ್ಯೆಗಳಿಗೂ ಕೂಡ ಅವರು ಸ್ಪಂದಿಸಿ, ನೈತಿಕ ಬೆಂಬಲ ನೀಡಿದ್ದಾರೆ. ಅನೇಕ ಯುವಕರ ಬದುಕಿಗೆ ಉದ್ಯೋಗ ನೀಡುವುದರ ಮೂಲಕ ನೆರವಾಗಿದ್ದಾರೆ. ಅವರು ಬ್ಲಾಕ್‌ ಕಾಂಗ್ರೆಸ್‌ ಜವಾಬ್ದಾರಿ ನಿಭಾಯಿಸಲು ಅರ್ಹರಿದ್ದು ಅವರ ಸೇವೆಯನ್ನು ಪಕ್ಷ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post