ರಂಜದಕಟ್ಟೆ ಚಾಮುಂಡೇಶ್ವರಿ ದೇವಾಲಯದಲ್ಲಿ ವಾರ್ಷಿಕ ಹರಕೆ

ಫೆಬ್ರವರಿ 17, 18 ರಂದು ಹರಕೆ ಮತ್ತು ಕೆಂಡಕೊಂಡ ಸೇವೆ

ತೀರ್ಥಹಳ್ಳಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ರಂಜದಕಟ್ಟೆಯ ಶ್ರೀ ಚಾಮುಂಡೇಶ್ವರಿ ಶ್ರೀ ಹೊನ್ನತ್ತಮ್ಮ ಶ್ರೀ ಗುಳ್ಳೆ ಮಾರಿಯಮ್ಮ ದೇವಸ್ಥಾನದಲ್ಲಿ ಫ್ರೆಬ್ರವರಿ 17, 18 ರಂದು ವಾರ್ಷಿಕ ಹರಕೆ ಹಾಗೂ ಕೆಂಡಕೊಂಡ ಸೇವೆಯನ್ನು ಏರ್ಪಡಿಸಲಾಗಿದೆ. 17ರ ಸಂಜೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. 18ರ ಮಂಗಳವಾರ ಮಧ್ಯಾಹ್ನ ದೇವರುಗಳ ಪಲ್ಲಿಕ್ಕಿಯು ದೇವಸ್ಥಾನದಿಂದ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಸನ್ನಿಧಿಗೆ ಆಗಮಿಸಿ ರಥಬೀದಿ ಮಾರ್ಗವಾಗಿ ರಾಜಬೀದಿ ಉತ್ಸವದ ಮೂಲಕ ಪುನಃ ಸನ್ನಿಧಿಗೆ ತೆರಳುವುದು. ರಾತ್ರಿ 9.30ಕ್ಕೆ ಸಂಪ್ರದಾಯದಂತೆ ಹರಕೆ ಮತ್ತು ಕೆಂಡಕೊಂಡ ಸೇವೆಯ ಆಚರಣೆ ನಡೆಯಲಿದೆ. ಹಾಗೂ ಅದೇ ದಿನ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.

ಈ ಉತ್ಸವದಲ್ಲಿ ಚೋರಡಿ, ಕಾವಾಸಪುರ, ಹೊಸನಗರ, ಹಿರೇಕೌಂಶಿ, ಅಂಜನಾಪುರ, ಸಮಕಾನಿ, ವಸುವೆ ಮತ್ತು ಇನ್ನಿತರೆ ಕಡೆಗಳಿಂದ ಅಮ್ಮನವರ ಪಲ್ಲಕ್ಕಿಗಳು ಆಗಮಿಸಲಿದೆ. ಕೆಂಡ ಸೇವೆಯು 18 ಅಡಿ ವಿಸ್ತೀರ್ಣದ ಕೊಂಡದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಸರ್ವರನ್ನು ದೇವಸ್ಥಾನ ಸಮಿತಿ ಸ್ವಾಗತಿಸಿದೆ. ಹೆಚ್ಚಿನ ವಿವರಗಳಿಗೆ 9945993631, 9449686584, 9448179490, 9449500912, 9108594745 ಗೆ ಸಂಪರ್ಕಿಸಬಹುದಾಗಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post