ಅಮರನಾಥ ಶೆಟ್ಟಿ
ಸೇವೆ ಪರಿಗಣಿಸಲು ಒತ್ತಡ
ಕಾಂಗ್ರೆಸ್ ಮುಖಂಡರಾದ
ಕಲ್ಗುಂಡಿ ಸಂದೀಪ್, ಜೈಕರ ಶೆಟ್ಟಿ ಒತ್ತಾಯ
ತೀರ್ಥಹಳ್ಳಿ ಯುವ
ಕಾಂಗ್ರೆಸ್ ಅಧ್ಯಕ್ಷರಾಗಿ ಅವಿರತ ಶ್ರಮಿಸಿರುವ ಅಮರನಾಥ ಶೆಟ್ಟಿ ಸೇವೆಯನ್ನು ಕಾಂಗ್ರೆಸ್ ಪಕ್ಷ ಪರಿಗಣಿಸಬೇಕು.
ಅವರ ಅಧ್ಯಕ್ಷತೆಯಲ್ಲಿ ಯುವಕರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಹಳ್ಳಿ ಹಳ್ಳಿಯ ಕಾರ್ಯಕರ್ತರನ್ನು
ಸಂಘಟಿಸುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯವನ್ನು ತರುವ ಪ್ರಯತ್ನ ನಡೆಸಿದ್ದರು. ಅವರ ಪ್ರಯತ್ನದ ಫಲವಾಗಿ
ಪಕ್ಷದಲ್ಲಿ ಯಾವುದೇ ರೀತಿಯ ಗುಂಪುಗಾರಿಕೆಗೆ ಅವಕಾಶ ನೀಡಿರಲಿಲ್ಲ. ಎಲ್ಲರನ್ನು ಒಗ್ಗೂಡಿಸಿ ಕಾರ್ಯಕ್ರಮವನ್ನು
ರೂಪಿಸಿದ್ದಾರೆ. ಉತ್ಸಾಹಿ ಯುವಕರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಜವಾಬ್ದಾರಿ ನೀಡುವ ಮೂಲಕ ಪಕ್ಷವನ್ನು
ಸದೃಢಗೊಳಿಸಬೇಕು. ಅವರನ್ನು ಬ್ಲಾಕ್ ಕಾಂಗ್ರೆಸ್ ಉನ್ನತ ಜವಾಬ್ದಾರಿ ನೀಡಿ ಗೌರವಿಸಬೇಕು ಎಂದು ಕಾಂಗ್ರೆಸ್
ಮುಖಂಡರಾದ ಕಲ್ಗುಂಡಿ ಸಂದೀಪ್, ಜೈಕರ ಶೆಟ್ಟಿ ಒತ್ತಾಯಿಸಿದ್ದಾರೆ.
ಹತ್ತಾರು ಉಪವಾಸ
ಸತ್ಯಾಗ್ರಹ, ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಯುವಕರನ್ನು ಭಾಗವಹಿಸಲು ಶ್ರಮಿಸಿರುವುದು,
ಬಿಜೆಪಿ ಪಕ್ಷದ 40% ಕಮಿಷನ್ ವಿರುದ್ಧ ಪೇ ಸಿಎಂ ಅಭಿಯಾನ, ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್
ಆಡಳಿತಕ್ಕೆ ತರಲು ಯುವಕರನ್ನು ಸೆಳೆದಿರುವುದು, ಸೇರಿದಂತೆ ಗಾಂಧಿ ಭವನ ಕಟ್ಟಡ ದೇಣಿಗೆ ಸಂಗ್ರಹದಲ್ಲಿ
ಸಕ್ರೀಯವಾಗಿ ಭಾಗಿವಹಿಸುವಿಕೆ, ಇಂದಿರಾ ಕ್ಯಾಂಟೀನ್‌ನಲ್ಲಿ ಸೇವೆ, ಕೊರೋನಾ ಸಾಂಕ್ರಾಮಿಕ ವೇಳೆಯಲ್ಲಿ
ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಸಂತೈಸುವಿಕೆ, ಮಾಸ್ಕ್, ಡ್ರೈ ಫ್ರೂಟ್ಸ್, ಕಿಟ್ ಹಂಚುವ ಕಾರ್ಯಕ್ರಮ
ಹಮ್ಮಿಕೊಂಡು ಜನಪರವಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಮಾಜಿ
ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ನೇರವಾಗಿ ಟೀಕಿಸುವ ಮೂಲಕ ಯುವ ಕಾಂಗ್ರೆಸ್‌ಗೆ ಗಟ್ಟಿತನವನ್ನು
ತಂದುಕೊಂಡಿದ್ದಾರೆ. ಜೊತೆಗೆ ಅನೇಕ ಯುವ ಕಾರ್ಯಕರ್ತರ ವೈಯಕ್ತಿಕ ಸಮಸ್ಯೆಗಳಿಗೂ ಕೂಡ ಅವರು ಸ್ಪಂದಿಸಿ,
ನೈತಿಕ ಬೆಂಬಲ ನೀಡಿದ್ದಾರೆ. ಅನೇಕ ಯುವಕರ ಬದುಕಿಗೆ ಉದ್ಯೋಗ ನೀಡುವುದರ ಮೂಲಕ ನೆರವಾಗಿದ್ದಾರೆ. ಅವರು
ಬ್ಲಾಕ್ ಕಾಂಗ್ರೆಸ್ ಜವಾಬ್ದಾರಿ ನಿಭಾಯಿಸಲು ಅರ್ಹರಿದ್ದು ಅವರ ಸೇವೆಯನ್ನು ಪಕ್ಷ ಬಳಸಿಕೊಳ್ಳಬೇಕು
ಎಂದು ಆಗ್ರಹಿಸಿದ್ದಾರೆ.




