ಮುಖಂಡ ಆರ್.ಮದನ್ ಗೆ ಪಿತೃ ವಿಯೋಗ
ತೀರ್ಥಹಳ್ಳಿಯ ಹಿರಿಯ ಸಮಾಜವಾದಿ ನಿವೃತ್ತ ಶಿಕ್ಷಕ ಎ.ಪಿ. ರಾಮಪ್ಪ (88)ವಯೋಸಹಜ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
ಸಾತ್ವಿಕ ಮನೋಭಾವದ ಎ.ಪಿ.ರಾಮಪ್ಪ ಅವರು ಶಾಂತವೇರಿ ಗೋಪಾಲಗೌಡರ ಸೋದರಳಿಯ ಆಗಿದ್ದರು. ತೀರ್ಥಹಳ್ಳಿಯಲ್ಲಿ ಜನತಾದಳ ಪುನಃ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಇವರಿಗೆ ಪುತ್ರರಾದ ಮುಖಂಡ ಆರ್ ಮದನ್, ಮಂಜುನಾಥ ಮತ್ತು ಪುತ್ರಿ ಮಮತಾ ಸಾಯಿನಾಥ್ ಅವರನ್ನು ಅಗಲಿದ್ದಾರೆ.
