ಗೊಂಬೆ ರಂಗೋತ್ಸವ – ಕಿರುಚಿತ್ರೋತ್ಸವ

ಫೆಬ್ರವರಿ 14, 15, 16 ರಂದು ನಟಮಿತ್ರರು ತಂಡದ ರಂಗೋತ್ಸವ
ತೊಗಲುಗೊಂಬೆ, ಗೊಂಬೆ ನಾಟಕ ಪ್ರದರ್ಶನ - ಯು ಸೀತಾರಾಮಾಚಾರ್ ಪ್ರಶಸ್ತಿ ಪ್ರಧಾನ ಸಮಾರಂಭ

ನಟಮಿತ್ರರು ಹವ್ಯಾಸಿ ಕಲಾಬಳಗ ತೀರ್ಥಹಳ್ಳಿ ಇವರ ಆಯೋಜನೆಯಲ್ಲಿ ಫೆಬ್ರವರಿ 14, 15 ಮತ್ತು 16ರ 3 ದಿನಗಳ ಪರ್ಯಂತ “ಗೊಂಬೆ ರಂಗೋತ್ಸವ” ಮತ್ತು ಕಿರುಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ್ ಜವಳಿ ತಿಳಿಸಿದ್ದಾರೆ.

ಅತ್ಯಂತ ಪುರಾತನವಾದ ಜಾನಪದ ಕಲಾಪ್ರಕಾರ ಗೊಂಬೆಯಾಟ. ಈ ಗೊಂಬೆಯಾಟವನ್ನು ಇತ್ತೀಚಿನ ಅನೇಕ ನಾಟಕಗಳಲ್ಲಿ ಆಳವಡಿಸಿ ಅನೇಕರು ಯಶಸ್ವಿಯಾಗಿದ್ದಾರೆ. ಈ ರೀತಿ ಗೊಂಬೆಯಾಟವನ್ನು ಅಳವಡಿಸಿ ಕಟ್ಟಲಾದ ನಾಟಕಗಳ ಪ್ರದರ್ಶನವನ್ನು ಗೊಂಬೆ ರಂಗೋತ್ಸವದ ಹೆಸರಿನಲ್ಲಿ ಅಯೋಜಿಸಲಾಗಿದೆ. ರಂಗೋತ್ಸವವನ್ನು ತೀರ್ಥಹಳ್ಳಿ ರಂಗಭೂಮಿಗೆ ತನ್ನದೆ ಕೊಡುಗೆಯನ್ನು ನೀಡಿದ ಹಿರಿಯ ರಂಗ ತಂತ್ರಜ್ಞ ದಿ:ಹೆಚ್. ಎಸ್ ಯಜ್ಞನಾರಾಯಣ ಭಟ್ಟ ( ಹಿರಿಯಣ್ಣ) ಇವರಿಗೆ ಅರ್ಪಿಸಲಾಗಿದೆ ಎಂದು ತಿಳಿಸಿದರು.

ಫೆಬ್ರವರಿ 14ರ ಶುಕ್ರವಾರ ಮೈಸೂರು ರಂಗಾಯಣ ಅಭಿನಯದ ಕನ್ನಡ ನಾಟಕ “ಮೈ ಪ್ಯಾಮಿಲಿ” ಪ್ರದರ್ಶನಗೊಳ್ಳಲಿದೆ. ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ರಚಿಸಿದ ಈ ನಾಟಕವನ್ನು ಗಣೇಶ್ ಮಂದಾರ್ತಿ ನಿರ್ದೇಶಿಸಿದ್ದಾರೆ. ನಾಟಕದ ಪೊಪೈಟ್ ನಿರ್ದೇಶನವನ್ನು ಶ್ರವಣ್ ಹೆಗ್ಗೋಡು ನಿರ್ವಹಿಸಿದ್ದಾರೆ. ಬೊಂಬೆ ರಂಗೋತ್ಸವದ ಉದ್ಘಾಟನೆಯನ್ನು ಶಿವಮೊಗ್ಗದ ಕಮಲ ನೆಹರು ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು, ರಂಗಕರ್ಮಿ ಡಾ.ಹೆಚ್.ಎಸ್. ನಾಗಭೂಷಣ್ ಇವರು ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ. ನಾಗರಾಜ್‌ ಉಪಸ್ಥಿತರಿರುತ್ತಾರೆ.

ಫೆಬ್ರವರಿ 15ರ ಶನಿವಾರ ತೀರ್ಥಹಳ್ಳಿಯ ನಟಮಿತ್ರರು ಕಲಾವಿದರು “ಸುಪ್ರಭಾ ವಿಲಾಪ” ಎಂಬ ತೊಗಲುಗೊಂಬೆ ಪ್ರದರ್ಶನವನ್ನು ವಿಜಯಕುಮಾರ್ (ಶಿವಾಜಿ) ತೀರ್ಥಹಳ್ಳಿ ಇವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ನಂತರ ಸಂಜೆ 7.00 ಗಂಟೆಯಿಂದ ಪ್ರಪ್ರಥಮ ಬಾರಿಗೆ ಕರ್ನಾಟಕದ ಯುವ ಪ್ರತಿಭಾವಂತ ನಿರ್ದೇಶಕರ 4 ಕಿರುಚಿತ್ರಗಳ “ಕಿರುಚಿತ್ರೋತ್ಸವ  ಪ್ರದರ್ಶನಗೊಳ್ಳಲಿದೆ. ಸಿದ್ಧಾಪುರದ ವಿಷ್ನೇಶ್‌ ಗೌಡ ನಿರ್ದೇಶನದ ಹೊಳೆ ನೀರಿನ ಕಾವು, ರಂಗನಾಥ ಶಿವಮೊಗ್ಗ ಇವರ ಆರ್ಟಿಸ್ಟ್‌, ಬೆಂಗಳೂರಿನ ದರ್ಶನ್‌ ಶಿಂಧೆ ಅವರ ಧ್ವನಿ, ಮೈಸೂರು ನಾಗಾದ್ರಿ ಶರ್ಮ ಅವರ ಆಸ್ತಿ, ಸ್ಥಳೀಯ ಕಲಾವಿದರ ವಿಭಾಗದಿಂದ ರಾಹುಲ್‌ ಗುಡ್ಡೇಕೊಪ್ಪ ಅವರ ಜನ್ಯರಾಗ ಕಿರುಚಿತ್ರ ಪ್ರದರ್ಶನ ಸಂವಾದ ಏರ್ಪಡಿಸಲಾಗಿದೆ ಎಂದರು.

ಫೆಬ್ರವರಿ 16ರ ಭಾನುವಾರ ಸಂಜೆ 6.30 ರಿಂದ ಕಲಾಬಿ ಮಂಗಳೂರು ಅಭಿನಯದ “ಅ ಫ್ರೆಂಡ್ ಬಿಯೊಂಡ್ ದಿ ಫೆನ್ಸ್” ಎಂಬ ಕನ್ನಡ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಬೊಂಬೆಯಾಟದ ಹೊಸ ತಂತ್ರಜ್ಞಾನದ ವಿಶೇಷವಾದ ಈ ನಾಟಕ ಪ್ರದರ್ಶನವನ್ನು ಶ್ರವಣ್ ಹೆಗೋಡು ನಿರ್ದೇಶಿಸಿದ್ದಾರೆ.

ಫೆಬ್ರವರಿ 16ರ ಭಾನುವಾರ ಗೊಂಬೆ ರಂಗೋತ್ಸವದ ಸಮಾರೋಪ ಸಮಾರಂಭ ಹಾಗೂ ನಟಮಿತ್ರರು ಸಂಸ್ಥಾಪಕ ಯು ಸೀತಾರಾಮಾಚಾರ್ ನೆನಪಿನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ತುಂಗಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಿ.ಎಸ್. ಸೋಮಶೇಖರ್ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗದ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಉಪಸ್ಥಿತರಿರುತ್ತಾರೆ.

ಈ ಎಲ್ಲಾ ಕಾರ್ಯಕ್ರಮಗಳಿಗೂ ರಂಗಾಸಕ್ತರು ಕಲಾಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ರಂಗೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಸಂದೇಶ್‌ ಜವಳಿ ವಿನಂತಿಸಿದ್ದಾರೆ.

ರೇವತಿ ರಾಮ್ ಕುಂದನಾಡು ಇವರಿಗೆ ಈ ಬಾರಿಯ ಸೀತಾರಾಮಾಚಾರ್ ಪ್ರಶಸ್ತಿ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗುಡ್ಡೆ ಅಂಗಡಿಯ ರೇವತಿ ಕ್ರೀಯಾಶೀಲ ಯುವ ರಂಗಕರ್ಮಿಗಳಲ್ಲಿ ಒಬ್ಬರಾಗಿದ್ದಾರೆ. ಕುಂದಾಪುರ ರಂಗ ಅಧ್ಯಯನ ಕೇಂದ್ರದಲ್ಲಿ ನಾಟಕ ವಿಭಾಗದಲ್ಲಿ ಡಿಪ್ಲೋಮ ಪದವಿ ಪಡೆದು ಕರ್ನಾಟಕ ಹೆಸರಾಂತ ರಂಗ ತಂಡಗಳಾದ ಸಾಣೇಹಳ್ಳಿ ಶಿವಸಂಚಾರಿ, ಶಿವಮೊಗ್ಗ ರಂಗಾಯಣ, ಆಟಮಾಟ ಧಾರವಾಡ, ಸಮುದಾಯ ರಾಯಚೂರು, ಜ.ಮು.ರಾ ಚಿತ್ರದುರ್ಗ, ಸಂಕಲ್ಪ ಮೈಸೂರು, ರಂಗಕನಸು ಮಂಡಲಗೇರ, ಶಿವದೇಶ ಸಂಚಾರ ಮುಂತಾದ ರಂಗತAಡಗಳಲ್ಲಿ ನಟಿಯಾಗಿ ತಂತ್ರಜ್ಞಾರಾಗಿ ಕೆಲಸ ಮಾಡಿರುತ್ತಾರೆ. ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಇವರು ಅನೇಕ ಮಕ್ಕಳ ನಾಟಕ ಬರೆದು ನಿರ್ದೇಶಿಸಿದ್ದಾರೆ. ಇವರು ಬರೆದ ಕವಿತೆ ಮತ್ತು ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಚಕೋರಿ, ಮತ್ತವಿಲಾಸ ಪ್ರಹಸನ, ಕಂಬಾಲಪಲ್ಲಿ, ಹರಿಶ್ಚಂದ್ರ, ಸೂಳೆಸನ್ಯಾಸಿ, ಅಗ್ನಿಲೋಕ, ಇದಕ್ಕೆಕೊನೆಯೆಂದು, ಆಶಾಡದ ಒಂದು ದಿನ, ವಿ ದ ಪೀಪಲ್ ಅಫ್ ಇಂಡಿಯಾ, ಟ್ರಾನ್ಸ ನೇಷನ್, ಅಲ್ಲಮ್ಮ, ವಾರ್ಡ್ ನಂ 6, ಕಿಂಗ್‌ಲಿಯರ್, ಹಕ್ಕಿಕಥೆ, ದುಬಾಯಿ ದೂಳಪ್ಪನ ಭರ್ಜರಿಗಾಳ, ಚಾಣುಕ್ಯ ಪ್ರಪಂಚ ಸೇರಿದಂತೆ ೭೦ ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಕೊಪ್ಪಳದ ವಿಸ್ತಾರ್ ರಂಗಶಾಲೆಯಲ್ಲಿ ಸಂಯೋಜಕರಾಗಿ ಮತ್ತು ರಂಗ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರೇವತಿಯವರನ್ನು ರಂಗಭೂಮಿಯಲ್ಲಿನ ಅನುಪಮ ಕಲಾಸೇವೆಗಾಗಿ ಈ ಬಾರಿಯ ಸೀತಾರಾಮಾಚಾರ್ ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post