20 ವರ್ಷದಿಂದ ಸದಭಿರುಚಿ ಕಾರ್ಯಕ್ರಮ - ಶಶಿಕುಮಾರ್ ಕಾರಂತ
ಗಾನಂಜಲಿ ಕೋಣಂದೂರು,
ತೀರ್ಥಹಳ್ಳಿ ಪ್ರಸ್ತುತಿಯಲ್ಲಿ ಶ್ರೀ ಮಹಾಗಣಪತಿ ಶ್ರೀ ಬನಶಂಕರಿ ಸೇವಾ ಟ್ರಸ್ಟ್ ಕೋಣಂದೂರು, ಶ್ರೀ
ಸರ್ಜಾ ಚೆಸ್ ತರಬೇತಿ ಕೇಂದ್ರ, ಹಿರೇಸರ, ಶ್ರೀ ಲಕ್ಷ್ಮಿ ಕನ್ಸ್ಟ್ರಕ್ಷನ್ ಕೋಣಂದೂರು ಇವರ ಸಹಯೋಗದಲ್ಲಿ
ಫೆ. 8 ರಂದು ಶನಿವಾರ ಸಂಜೆ 6 ಗಂಟೆಯಿಂದ ತೀರ್ಥಹಳ್ಳಿಯ ಗೋಪಾಲ ಗೌಡ ರಂಗ ಮಂದಿರದಲ್ಲಿ ಮಲೆನಾಡು ಮತ್ತು
ಕರಾವಳಿ ಕೋಗಿಲೆಗಳ ಧ್ವನಿ ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಅಂತಿಮ ಹಂತದ ಸಂಗೀತ ಸ್ಪರ್ಧೆ ಸೀಸನ್
- 1 ಗ್ರಾಂಡ್ ಫಿನಾಲೆ ನಡೆಯುವುದಾಗಿ ಗಾಯಕ ಹಾಗೂ ಕೋಣಂದೂರು ಗಾನಾಂಜಲಿಯ ಶಶಿಕುಮಾರ್ ಕಾರಂತ ಅವರು
ತಿಳಿಸಿದರು.
ತೀರ್ಥಹಳ್ಳಿಯ ಕಾರ್ಯನಿರತ
ಪತ್ರಕರ್ತರ ಸಂಘದ ಕಚೇರಿಯಲ್ಲಿ ಫೆ. 4 ರಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾರಂತ ಅವರು, ಈ ಗ್ರಾಂಡ್
ಫಿನಾಲೆಯಲ್ಲಿ ಅನುಕ್ರಮವಾಗಿ ಪಥಮ ಬಹುಮಾನ ರೂ.
10000, ದ್ವಿತೀಯ ರೂ.6000 ಹಾಗೂ ತೃತೀಯ ರೂ.3000 ವಿರುತ್ತದೆ. ಹಾಗೆಯೇ ಉಳಿದ ಎಲ್ಲಾ ಸ್ಪರ್ಧಿಗಳಿಗೂ
1000 ರೂ.ಗಳ ನಗದು ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.
ಅಂತಿಮ ಹಂತದ ಸಂಗೀತ
ಸ್ಪರ್ಧೆ ಗ್ರಾಂಡ್ ಫಿನಾಲೆಗೆ ಭೂಮಿಕಾ ಹೆಗಡೆ, ಮಂಗಳೂರು, ಸುಕೇಶ್ ಕಾರ್ಕಳ, ಚೈತನ್ಯ ಶಿವಪುರ, ವರ್ಷಿಣಿ
ಹರಿಹರಪುರ, ನಿಧಿ ಸುರೇಶ್ ತೀರ್ಥಹಳ್ಳಿ , ಅಶ್ಮಿತ್ ಮಂಗಳೂರು, ಗಣೇಶ ಅಜೆಕಾರು, ರಾಜೇಶ್ ಪ್ರಭು ಹೆಬ್ರಿ,
ಸಂದೀಪ್ ಶಿವಪುರ, ಮೋಹನ್ ಜಿ. ಸಾಗರ, ಕೃಷ್ಣ ಕುಲಾಲ್ ಉಡುಪಿ ಅವರು ಆಯ್ಕೆಯಾಗಿದ್ದಾರೆ ಎಂದು ಶಶಿಕುಮಾರ
ಕಾರಂತ್ ವಿವರ ನೀಡಿದರು.
ಕೋಣಂದೂರಿನ ಗಾನಾಂಜಲಿ
ಸಂಸ್ಥೆಯು ಕಳೆದ 15- 20 ವರ್ಷಗಳಿಂದ ಸದಭಿರುಚಿಯ ಸಾಂಸ್ಕೃತಿಕ , ಸಾಹಿತ್ಯ, ಸಂಗೀತ, ಧಾರ್ಮಿಕ ಕಾರ್ಯಕ್ರಮಗಳನ್ನು
ನಡೆಸಿಕೊಂಡು ಬಂದಿದೆ. ಪಾವಗಡ ಪ್ರಕಾಶ್ ರಾವ್, ವೀಣಾ ಬನ್ನಂಜೆ ಅವರಂತಹ ವಿದ್ವಾಂಸರಿಂದ ಧಾರ್ಮಿಕ
ಪ್ರವಚನಗಳನ್ನು ಏರ್ಪಡಿಸಲಾಗಿತ್ತು. ಎಲೆ ಮರೆಯ ಕಾಯಿಯಂತಿದ್ದ ಹತ್ತಾರು ಉದಯೋನ್ಮುಖ ಗಾಯಕರ ಪ್ರತಿಭೆ ಅನಾವರಣಗೊಳ್ಳುವಲ್ಲಿ
ಶ್ರಮಿಸಲಾಗಿದೆ ಎಂದು ಕಾರಂತ ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ಕೋಣಂದೂರು ಶ್ರೀ ಬನಶಂಕರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಮತ್ತು ಹಿರಿಯರಾದ ನಿವೃತ್ತ ಉಪನ್ಯಾಸಕ ಎಚ್. ರಾಮಚಂದ್ರ ಶರ್ಮ, ಹಿರೇಸರ ಸರ್ಜಾ ಚೆಸ್ ತರಬೇತಿ ಕೇಂದ್ರದ ಸರ್ಜಾ ಚಂದ್ರಕಾಂತ್, ನೈಜಲಾ ಪಟಮಕ್ಕಿ ರತ್ನಾಕರ್, ರಂಗ ಕರ್ಮಿ ಮ್ಯಾಥ್ಯೂ ಸುರಾನಿ, ಗಾಯಕ ಬುಕ್ಲಾಪುರ ಶೇಷಾದ್ರಿ ಅವರು ಮಾತನಾಡಿ ಕಲೆ, ಸಾಹಿತ್ಯ, ಸಂಗೀತಕ್ಕೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಸರ್ವರೂ ಸಹಕರಿಸುವಂತೆ ವಿನಂತಿಸಿದರು.

