ರಾಮ ಮಂಟಪಕ್ಕೆ ಶಾಶ್ವತ
ರಸ್ತೆ
ರವೀಂದ್ರ ಶೆಟ್ಟಿ-ಡಾ.ನಾರಾಯಣ
ಸ್ವಾಮಿ ಕಾರ್ಯ ಎಂದಿಗೂ ಸ್ಮರಣಾರ್ಹ
ಪಟ್ಟಣದ ಕುರಿತು ತಮ್ಮ ಕನಸುಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಂಡ ರಹಮತ್ ಉಲ್ಲಾ ಅಸಾದಿ
- ತೀರ್ಥಹಳ್ಳಿ ಪಟ್ಟಣವನ್ನು ಮಾದರಿಯಾಗಿ ರೂಪಿಸಬೇಕು. ತೀರ್ಥಹಳ್ಳಿ ಎಂದಾಕ್ಷಣ ಹೊರಗಿನವರು ನಮ್ಮನ್ನು ಗುರುತಿಸುವುದು ಕುವೆಂಪು ಊರಿನವರು ಎಂದು. ಅವರ ಹೆಸರಿನಲ್ಲಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಿಸುತ್ತಿದ್ದೇವೆ. ವಿಶೇಷ ಎಂದರೆ ನನಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆತ್ಮೀಯರು. ಅವರನ್ನು ಇತ್ತೀಚೆಗೆ ಭೇಟಿಯಾಗಲು ಹೋದಾಗ ರಂಗಮಂದಿರದ ಕುರಿತು ಪ್ರಸ್ತಾಪಿಸಿದ ತಕ್ಷಣ ಯಾರ ಹೆಸರನ್ನು ಇಡಬೇಕೆಂದಿದ್ದೀರಿ ಎಂದರು. ನಾನು ತಕ್ಷಣವೇ ಕುವೆಂಪುರವರು ಹೆಸರು ಹೇಳಿದಾಗ ಅವರು ಮರುಕ್ಷಣವೇ ಕುವೆಂಪುರವರ ಹೆಸರಿನಲ್ಲಾದರೆ ನಾನು 35 ಲಕ್ಷ ರೂಪಾಯಿ ಅನುದಾನವನ್ನು ನೀಡುತ್ತೇನೆ ಎಂದು ಘೋಷಿಸಿದರು.
- ಆಡಳಿತದಲ್ಲಿ ದೂರದರ್ಶಿತ್ವ ಹಾಗೂ ಸಮಗ್ರ ಅಭಿವೃದ್ಧಿ ಪರಿಕಲ್ಪನೆ ಇದ್ದಾಗ ಪಟ್ಟಣದ ಅಭಿವೃದ್ಧಿ ಸಾಧ್ಯವಾಗುತ್ತದೆ. ಡಾ.ನಾರಾಯಣ ಸ್ವಾಮಿ ಅವರು ಅಧ್ಯಕ್ಷರಾಗಿದ್ದಾಗ ಬಸ್ ನಿಲ್ದಾಣ, ರಥಬೀದಿ, ಸೊಪ್ಪುಗುಡ್ಡೆಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಯಿತು. ಅವುಗಳಿಂದ ಈಗ ವರ್ಷಕ್ಕೆ 60 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಪಕ್ಷ ಯಾವುದೇ ಇರಲಿ ಇಂತಹ ಆಲೋಚನೆಗಳು ಇದ್ದಾಗ ನಾವು ಎಲ್ಲರನ್ನು ಗೌರವಿಸುತ್ತೇವೆ. ಅದೇ ರೀತಿ ರವಿಂದ್ರ ಶೆಟ್ಟರು ಅಧ್ಯಕ್ಷರಾಗಿದ್ದಾಗ ಹಿಂದೆಂದು ಕಾಣದ ರೀತಿಯಲ್ಲಿ ಬಡವರಿಗೆ ನಿವೇಶನವಗಳನ್ನು ಹಂಚಿದರು. ಇದೇ ಮಾದರಿಯಲ್ಲಿ ಈ ವರ್ಷವೂ ಬಡವರಿಗೆ ನಿವೇಶನ ಹಂಚಲು ನಾವು ಬದ್ಧರಿದ್ದು ಶಾಸಕರು, ಸಂಸದರು, ಪೌರಾಡಳಿತ ಸಚಿವರು ಮತ್ತು ನಮ್ಮ ನಾಯಕರುಗಳಾದ ಕಿಮ್ಮನೆ ರತ್ನಾಕರ ಮತ್ತು ಆರ್.ಎಂ. ಮಂಜುನಾಥ ಗೌಡರ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.
- ಪುರಾಣ ಪ್ರಸಿದ್ಧ ರಾಮ ಮಂಟಪಕ್ಕೆ ಶಾಶ್ವತ ರಸ್ತೆ ನಿರ್ಮಾಣ ಹಾಗೂ ರಥಬೀದಿಯನ್ನು ಆಕರ್ಷಕವಾಗಿ ವಿದ್ಯುತ್ ದೀಪಗಳಿಂದ ನಿರಂತರವಾಗಿ ಅಲಂಕರಿಸಲು ಕ್ರಮ.
- ಕೊಳಚೆ ನೀರಿನಿಂದ ತುಂಗಾನದಿ ಕಲುಷಿತವಾಗುತ್ತಿದೆ. ತಡೆಗಟ್ಟಲು ಪಟ್ಟಣದ ನಾಲ್ಕು ಕಡೆಗಳಲ್ಲಿ ಶುದ್ದೀಕರಣ ಘಟಕ ಸ್ಥಾಪನೆ. ಕಸ, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಯಂತ್ರಗಳ ಮೂಲಕ ಗೊಬ್ಬರ ತಯಾರಿಸಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಯಶಸ್ವಿಯಾಗಿರುವ ಘಟಕಗಳನ್ನು ಕಂಡು ಇಲ್ಲಿ ಅದನ್ನು ಅಳವಡಿಸಿಕೊಳ್ಳಲು ಆಲೋಚನೆ.
- ಬೀಡಾಡಿ ದನಗಳ ಸಮಸ್ಯೆ ನಿವಾರಿಸಲು ಪಟ್ಟಣದ ಸುತ್ತಮುತ್ತ ಇರುವ ಗೋಮಾಳ ಜಾಗ ಗುರುತಿಸಿ ಗೋಶಾಲೆ ನಿರ್ಮಾಣಕ್ಕೆ ಪ್ರಸ್ತಾಪನೆ.
- ಆಧುನಿಕ ಮೀನು ಮಾರುಕಟ್ಟೆಯಲ್ಲಿ ಹೊಸ ಕಟ್ಟಡ ನಿರ್ಮಿಸಿ ಸ್ವಚ್ಚ ಪರಿಸರದಲ್ಲಿ ಮೀನು, ಮಾಂಸ ಮಾರಾಟಕ್ಕೆ ಕಲ್ಪಿಸಲು ನಿರ್ಧಾರ.
- ಗಾಂಧಿಚೌಕದಲ್ಲಿ ನನ್ನ ಪ್ರೀತಿಯ ತೀರ್ಥಹಳ್ಳಿ ಎಂಬ ಸೆಲ್ಫಿ ಪಾಯಿಂಟ್ ನಾಮಫಲಕ ಅಳವಡಿಸಲಾಗುತ್ತದೆ.
ಇವೆಲ್ಲವು… ಪಟ್ಟಣ
ಪಂಚಾಯಿತಿ ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ ಪತ್ರಕರ್ತರೊಂದಿಗಿನ ಸಂವಾದಲ್ಲಿ ಹಂಚಿಕೊಂಡ ಆಲೋಚನೆಗಳು.
ಸುದೀರ್ಘಕಾಲ ಪಟ್ಟಣದ ಕುರಿತಾದ ತಮ್ಮ ಆಲೋಚನೆಗಳು ಮತ್ತು ಸವಾಲುಗಳನ್ನು ಎದುರಿಸುವ, ಸಮಸ್ಯೆಗಳನ್ನು
ಪರಿಹರಿಸುವ ತುಡಿತವನ್ನು ಅಸಾದಿ ಪ್ರಮಾಣಿಕವಾಗಿ ಹಂಚಿಕೊಂಡರು. ಈ ಮಾತುಕತೆಯಲ್ಲಿ ಸದಾಕಾಲ ಪಟ್ಟಣದ
ಮುಖ್ಯ ಸಮಸ್ಯೆಯಾಗಿ ಉಳಿದುಕೊಳ್ಳುವ ಕುಡಿಯುವ ನೀರು ಮತ್ತು ತ್ಯಾಜ್ಯ ವಿಲೇವಾರಿ ಕುರಿತು ಅವರು ಪರಿಣಾಮಕಾರಿಯಾಗಿ
ಅಭಿಪ್ರಾಯ ಹಂಚಿಕೊಂಡರು. ಇದಲ್ಲದೇ ಗುತ್ತಿಗೆ ಆಧಾರಿತ ಕಸ ವಿಲೇವಾರಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ
ಕುರಿತು ಕೆಲ ನಾಗರೀಕರು ಅಸಭ್ಯವಾಗಿ ವರ್ತಿಸಿರುವುದನ್ನು ಗಮನಕ್ಕೆ ತಂದು ಕಾರ್ಯವನ್ನು ಗೌರವಿಸುವುದು
ಮತ್ತು ವ್ಯಕ್ತಿಗತವಾಗಿ ಮೆಚ್ಚಿಗೆ ವ್ಯಕ್ತಪಡಿಸುವ ಆಲೋಚನೆ ಮೂಡುವುದು ನಮ್ಮಲ್ಲಿ ಯಾವಾಗ ಎಂದು ಪ್ರಶ್ನಿಸಿದರು.
ಪಟ್ಟಣದ ಆದಾಯವನ್ನು
ಹೆಚ್ಚಿಸಲು ಬೇಕಾದಷ್ಟು ಮಾರ್ಗಗಳಿದ್ದು ರಚನಾತ್ಮಕ ಸಲಹೆ ಮತ್ತು ಟೀಕೆಗಳಿಂದ ಜಾಗೃತ ಆಡಳಿತ ನಡೆಸುವುದು
ಸಾಧ್ಯ. ಇದಕ್ಕೆ ಪಕ್ಷಾತೀತವಾಗಿ ಎಲ್ಲರು ಕೈಜೋಡಿಸಬೇಕು ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ಜೊತೆಗೆ ತಮ್ಮ ಎಲ್ಲಾ ಸಹ ಸದಸ್ಯರ ಬೆಂಬಲದ ಕುರಿತು ಅವರಿಗೆ ಅಪಾರ ಗೌರವಿದೆ.
ಅಸಾದಿ ಅವರ ಕುರಿತು
ರೆಹಮತ್ ಉಲ್ಲಾ
ಅಸಾದಿ ತೀರ್ಥಹಳ್ಳಿಯ ಅಲ್ಪಸಂಖ್ಯಾತ ಸಮುದಾಯದಲ್ಲಿ ಅತ್ಯಂತ ಪ್ರಭಾವಿ ಯುವ ನಾಯಕನಾಗಿ ಮೂಡಿ ಬಂದಿರುವ
ವ್ಯಕ್ತಿ. ತಮ್ಮ 25 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ, ಉಪಾಧ್ಯಕ್ಷ,
ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಪಟ್ಟಣದ ಯಾವುದೇ ಭಾಗದಲ್ಲಿ
ನಿಂತರು ಗೆಲ್ಲುವಂತಹ ಸಾಮರ್ಥ್ಯವನ್ನು ಹೊಂದಿರುವ ರಾಜಕಾರಣಿಯೂ ಹೌದು. ಅನುಭವದ ಬಲದಿಂದಲೇ ಖಚಿತವಾದ
ಜನಪರ ಆಲೋಚನೆ ಮತ್ತು ಆಡಳಿತ ಕೌಶಲ್ಯವನ್ನು ಅವರು ರೂಡಿಸಿಕೊಂಡಿದ್ದಾರೆ. ಜೊತೆಗೆ ಹಾಲಿ ತಾಲ್ಲೂಕಿನಿಂದ
ರಾಜ್ಯ ಮಟ್ಟದ ವರೆಗೆ ಪ್ರಭಾವಿ ರಾಜಕಾರಣಿ ಮತ್ತು ಅಧಿಕಾರಿಗಳ ನಿಕಟ ಸಂಪರ್ಕವನ್ನು ಕೂಡ ಸಾಧಿಸಿಕೊಂಡಿದ್ದಾರೆ.

