ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ

ಸಿನಿಮಾ ತಾರೆಯರಿಗಾಗಿ ರಂಗು ರಂಗು
ಎಲ್ಲಿಗೆ ಬಂತು ಕುವೆಂಪು ಆಶಯ ; ಬಡವರ ಮದುವೆಗೆ ಡೇಟ್ ಲಭ್ಯ ಇರಲ್ಲ

ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಶುಕ್ರವಾರ ಸಂಜೆ ಗೋದೂಳಿ ಲಗ್ನದಲ್ಲಿ ಅದ್ದೂರಿ ಮಂತ್ರ ಮಾಂಗಲ್ಯವೊಂದು ಜರುಗಿದೆ. ಕುವೆಂಪು ಸದಾಶಯದ ಮಂತ್ರ ಮಾಂಗಲ್ಯ ಎಲ್ಲಾ ರೀತಿಯ ಸರಳ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭವೊಂದು ಹೈಫೈ ರೂಪದಲ್ಲಿ ನಡೆದಿದೆ.

ಹೇಮಾಂಗಣದ ಮುಂಭಾಗದಲ್ಲಿ ತಳಿರುತೋರಣಗಳಿಂದ ಸಿಂಗರಿಸಿ, ಫಲ, ಪುಷ್ಪಗಳನ್ನು ಬಳಸಿಕೊಂಡು ವಿಭಿನ್ನವಾಗಿ ಮಂತ್ರ ಮಾಂಗಲ್ಯ ವಿವಾಹ ಮಾಡಲಾಗಿದೆ. ಕುವೆಂಪು ಸರಳ ನಿಯಮಗಳಿಂದ ತಮ್ಮ ಪುತ್ರ ತೇಜಸ್ವಿ ವಿವಾಹವನ್ನು ಮಾಡಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಬಿಡುವಿದ್ದ ಸಂದರ್ಭ ವಧುವರರ ಸತ್ಕಾರ ಸ್ವೀಕರಿಸಿ ಎನ್ನುವ ಒಳಾರ್ಥದಲ್ಲಿ ವಿವಾಹವನ್ನು ಸರಳೀಕರಣಗೊಳಿಸಿದ್ದರು. ಆದರೆ ಅದೀಗ ಮುಂದುವರೆದು ಶ್ರೀಮಂತ ಕುಟುಂಬಗಳ ಸ್ವತ್ತಾಗಿದ್ದು ಸರಳತೆಯ ವಿವಾಹವನ್ನು ವೈಭವೀಕರಿಸಿ ಜಗತ್ತಿಗೆ ಕುವೆಂಪು ಸಂದೇಶ ಸಾರುವ ಹಂತಕ್ಕೆ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ತಮ್ಮ ಹೃದಯ ವೈಶಾಲ್ಯತೆಯನ್ನು ತೋರಿಸಿಕೊಳ್ಳುತ್ತಿದೆ‌.

ಹೇಮಾಂಗಣದ ಮುಂಭಾಗದಲ್ಲಿ ಬಾಳೆಯ ಗಿಡಗಳನ್ನು ಬಳಸಿಕೊಂಡು ಸಿಗರಿಸಿದರೆ. ವೇದಿಕೆಯಾಗಿ ಕಮಲದ ಹೂವುಗಳನ್ನು ಬಳಕೆ ಮಾಡಿಕೊಂಡು ವಧು-ವರರ ಕೈಯಿಂದ  ಸರಳತೆಯ ಪಠ್ಯವನ್ನು ಚಾಚು ತಪ್ಪದೆ ಹೇಳಿಸಿದರೆ. ಮುಂಭಾಗದ ಮರಗಳಿಗೆ ವಿದ್ಯುತ್ ದೀಪಾಲಂಕಾರಗಳನ್ನು ಮಾಡಿ ಕುಪ್ಪಳಿಯ ಶಾಂತ ನಿಸರ್ಗದ ಪರಿಚಯ ಮಾಡಿಸಿಕೊಟ್ಟರು. ಊಟಕ್ಕೆ ರೌಂಡ್ ಟೇಬಲ್ ಅಳವಡಿಸಿ ಅದಕ್ಕೆ ಶ್ವೇತ ವಸ್ತ್ರಗಳನ್ನು ಅಲಂಕರಿಸಿ ಯಾರು ಊಟವನ್ನು ಕಿಂಚಿತ್ತೂ ಹಾಳು ಮಾಡದಂತೆ ಜಾಗ್ರತೆವಹಿಸಿದರು. ಊಟಕ್ಕೂ ಮುನ್ನ ಆಯಕಟ್ಟಿನ ಜಾಗದಲ್ಲಿ ಬೆಂಗಳೂರಿನಿಂದ ಬಂದ ಅತಿಥಿಗಳಿಗೆ ಸುರಪಾನದ ಹಿತ ನೀಡಿದರು. ಮೂರ್ನಾಲ್ಕು ರೆಸಾರ್ಟ್ ಗಳಿಗೆ ಈ ಮದುವೆ ದೊಡ್ಡ ಲಾಭ ತಂದುಕೊಟ್ಟಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post