ಮಹಿಷಿ ಸಂಪರ್ಕ ರಸ್ತೆಗೆ ಶಂಕುಸ್ಥಾಪನೆ

ಹೊಸ ಅಭಿವೃದ್ಧಿ ಪರ್ವಕ್ಕೆ ತೆರೆದುಕೊಳ್ಳಲಿದೆ ಹೆದ್ದೂರು
ಮರೆತೇ ಹೋದ ಕಿಮ್ಮನೆ ರತ್ನಾಕರ್

ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೆಜ್ಜವಳ್ಳಿ-ಹೆದ್ದೂರು ಗ್ರಾಮ ಪಂಚಾಯಿತಿ ಸಂಪರ್ಕದ ಮಹಿಷಿ ಸೇತುವೆಯ 10 ಕೋಟಿ ವೆಚ್ಚದ ಸಂಪರ್ಕ ರಸ್ತೆಗೆ ಕಳೆದ ಶನಿವಾರ ಶಂಕುಸ್ಥಾಪನೆ ನೆರವೇರಿತು. ಈ ಸಂಪರ್ಕ ರಸ್ತೆಯಿಂದಾಗಿ ಬಹುತೇಕ ಹೆದ್ದೂರಿನ ಚಹರೆಯೆ ಬದಲಾಗುವ ಸೂಚನೆಗಳು ದೊರೆತಿದೆ. ಕಾರಣ ಹೆದ್ದೂರಿನಿಂದ ಬೆಜ್ಜವಳ್ಳಿಯ ರಾಜ್ಯ ಹೆದ್ದಾರಿ ಹಾಗೂ ಅಲ್ಲೆ ಸ್ವಲ್ಪ ದೂರದ ತೂದೂರಿನಲ್ಲಿ ನಿರ್ಮಾಣವಾಗುತ್ತಿರುವ ತೂದೂರಿನ ನೂತನ ಸೇತುವೆಯ ಕಾರಣದಿಂದ ರಾಷ್ಟ್ರೀಯ ಹೆದ್ದಾರಿ ಎರಡು ಕೂಡ ಸಂಪರ್ಕಕ್ಕೆ ದೊರಕುವ ಕಾರಣ ಬೆಜ್ಜವಳ್ಳಿಯಂತೆ ಹೆದ್ದೂರು ಕೂಡ ಹೊಸ ಸ್ವರೂಪ ಪಡೆಯಲಿದೆ ಎಂದು ಅಂದು ಕಿಕ್ಕಿರಿದು ಸೇರಿದ್ದ ಗ್ರಾಮಸ್ತರೆಲ್ಲರ ಅಭಿಪ್ರಾಯವಾಗಿತ್ತು.

ಎಂದಿನಂತೆ ಬಿಜೆಪಿ ಪಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಾಡು ಮಾಡಿದ ಕಾರಣ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟನೆ ಬಳಿಕ ಉಲ್ಲಾಸದಿಂದಲೇ ಮಾತನಾಡಿದರಲ್ಲದೇ ಮುಂದೆ 3600 ಕೋಟಿ ವೆಚ್ಚದಲ್ಲಿ ಆಗುಂಬೆ ಸುರಂಗ ಮಾರ್ಗದ ಪ್ರಸ್ತಾಪ ಅಂತಿಮ ಹಂತದಲ್ಲಿ ಇದೆ ಎಂದು ಸಭೆಯಲ್ಲಿ ಘೋಷಿಸಿದರು. ಈ ಸಂದರ್ಭದಲ್ಲಿ ಹೆದ್ದೂರು ಭಾಗ ಒಂದಕ್ಕೆ 56 ಕೋಟಿಗೂ ಹೆಚ್ಚಿನ ಅನುದಾನವನ್ನು ರಾಘವೇಂದ್ರ ನೀಡಿರುವುದು ಹೆದ್ದೂರಿಗೆ ನೀಡಿದ್ದು ಅವರ ಕಾಳಜಿಗೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿವೃದ್ಧಿಯಲ್ಲಿ ರಾಜಕಾರಣ ಸಲ್ಲದು. ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಹೆಚ್.ಡಿ.ರೇವಣ್ಣ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಪ್ರಶಂಸಿಸಿದರು.

ಸಭೆಯಲ್ಲಿ ಹೆದ್ದೂರು ಗ್ರಾ.ಪಂ. ಅಧ್ಯಕ್ಷ ಲೋಕೇಶ್‌, ಉಪಾಧ್ಯಕ್ಷೆ ಸುಚಲ, ಬೆಜ್ಜವಳ್ಳಿ ಗ್ರಾ.ಪಂ. ಅಧ್ಯಕ್ಷ ಗಬಡಿ ಉದಯ್‌, ಉಪಾಧ್ಯಕ್ಷ ಸುಬ್ರಹ್ಮಣ್ಯ, ಹೆದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆದ್ದೂರು ನವೀನ್‌, ಪಿಡಬ್ಲೂಡಿ ಎಇಇ ಉಮಾನಾಯ್ಕ್‌ ಮತ್ತಿತರರು ಇದ್ದರು.


ಮರೆತೇ ಹೋದ ಕಿಮ್ಮನೆ ರತ್ನಾಕರ್‌

ಸ್ವಾಗತದಿಂದ ಹಿಡಿದು ಪ್ರಸ್ತಾಪ ವಂದನಾರ್ಪಣೆಯವರೆಗೆ ಬಿಜೆಪಿಯ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರ ಎದುರು ಆರಗ ಜ್ಞಾನೇಂದ್ರ, ಬಿ.ವೈ.ರಾಘವೇಂದ್ರರ ಪ್ರಯತ್ನ ಹಾಗೂ ಕೊಡುಗೆಗಳನ್ನು ಪರಿಣಾಮಕಾರಿಯಾಗಿ ಮುಟ್ಟಿಸಲು ಹಿಂಜರಿಯಲಿಲ್ಲ. ತೂದೂರಿನ ನೂತನ ಸೇತುವೆ ಶ್ಯಾಮೇಗೌಡರ ಪತ್ನಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಬೀಗರು ತಮ್ಮನ್ನು ಕಂಡು ಖುದ್ದಾಗಿ ಅಲ್ಲೊಂದು ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿದ ಕಾರಣ ಅದನ್ನು ಹಾಗೂ ಕಾರಣಗಿರಿ ಸೇತುವೆಯನ್ನು ತಾವೇ ಮುತುವರ್ಜಿ ವಹಿಸಿ ನಿರ್ಮಾಣಕ್ಕೆ ಕಾರಣವಾಗಿರುವುದು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದರು. ಆದರೆ ಸದಾಕಾಲ ಜಡತನದಲ್ಲಿಯೇ ಕಳೆದು ಹೋಗುವ ಕಾಂಗ್ರೆಸ್‌ನ ಬಣ್ಣ ಇಲ್ಲೂ ಕೂಡ ಸಭೀಕರೆದುರು ಬಯಲಾಯ್ತು. ವಾಸ್ತವವಾಗಿ 25 ಕೋಟಿ ವೆಚ್ಚದ ಮಹಿಷಿ, 11.50 ಕೋಟಿ ವೆಚ್ಚದ ಚಂಗಾರು, 18 ಕೋಟಿ ವೆಚ್ಚದ ಕುಡ್ನಲ್ಲಿ ಸೇತುವೆಗಳಿಗೆ ಕಿಮ್ಮನೆ ರತ್ನಾಕರ ಶಂಕುಸ್ಥಾಪನೆ ನೆರವೇರಿಸಿದ್ದರು. ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಆಯೋಜಕರು ಜಿಲ್ಲಾ ಮಂತ್ರಿಯನ್ನು ನೆನಪಿಸಿಕೊಳ್ಳುವ ಗೋಜಿಗೂ ಹೋಗಲಿಲ್ಲ. ಇನ್ನು ಕಾಂಗ್ರೆಸ್‌ ಪಕ್ಷವನ್ನೇ ಪ್ರತಿನಿಧಿಸುತ್ತಿರುವ ಆರ್‌.ಎಂ.ಮಂಜುನಾಥ ಗೌಡರ ಭಾಷಣದಲ್ಲಿ ಕೂಡ ಈ ಎಲ್ಲಾ ಕಾಮಗಾರಿಗಳಿಗೆ ಮೂಲ ಕಾರಣ ಕಿಮ್ಮನೆ ರತ್ನಾಕರ ಎಂಬ ಸಣ್ಣ ಪ್ರಸ್ತಾಪ ಕೂಡ ಎಲ್ಲಿಯೂ ಕಂಡು ಬರಲಿಲ್ಲ. ಇದು ಕ್ಷೀಣ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಇರಿಸುಮುರುಸು ತಂದಿತ್ತು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post