ಶ್ವಾನಲೋಕದ ವಿಸ್ಮಯ ಪುಸ್ತಕ ಬಿಡುಗಡೆ

ಜನವರಿ 26 ; ಪ್ರಾಣಿ ಕಲ್ಯಾಣ ಕಾರ್ಯಕ್ರಮ
ಒಂದು ಸಾವಿರ ವಿದ್ಯಾರ್ಥಿಗಳಿಗೆ ಸೆಮಿನಾರ್

ತೀರ್ಥಹಳ್ಳಿಯ ಕೆನಲ್‌ ಕ್ಲಬ್‌‌ 1999ರಲ್ಲಿ ಪತ್ರಕರ್ತ ಪೆ.ದೇವಣ್ಣ ಉದ್ಘಾಟನೆಗೊಂಡಿದ್ದು 25ನೇ ವರ್ಷದ ಸಂಭ್ರಮಾಚರಣೆ ಆಚರಿಸಿಕೊಳ್ಳುತ್ತಿದೆ. ರಜತ ವರ್ಷಾಚರಣೆ, ಪ್ರಾಣಿ ಕಲ್ಯಾಣ ಕಾರ್ಯಕ್ರಮದ ಜೊತೆಗೆ ಶ್ವಾನಲೋಕದ ವಿಸ್ಮಯ ಪುಸ್ತಕ ಬಿಡುಗಡೆ ಸಮಾರಂಭ ಜನವರಿ 26ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಸಂಜೆ ಕೋಣಂದೂರು ರಾಷ್ಟ್ರೀಯ ವಸತಿ ಶಾಲೆ, ಕುಡುಮಲ್ಲಿಗೆ ಅಂಬೇಡ್ಕರ್‌ ಮಹಿಳಾ ವಸತಿ ಶಾಲೆಯಲ್ಲಿ ಸೆಮಿನಾರ್‌ ಹಮ್ಮಿಕೊಂಡಿದ್ದೇವೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಗೋಷ್ಟಿಯಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕಡಿದಾಳ್‌ ದಯಾನಂದ ಹೇಳಿದರು.

ಯುವಕರು, ಹಿರಿಯ ನಾಗರೀಕರಿಗೆ ಶ್ವಾನ ಸಾಕಾಣಿಕೆ, ನಿರ್ವಹಣೆ ಕುರಿತ ಮಾಹಿತಿ ತಿಳಿಸುವ ಬದಲು ಪ್ರಸಕ್ತ ಸಾಲಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ. ವೈದ್ಯರು ಎರಡು ತಂಡವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ. 25 ವರ್ಷಗಳ ಹಿಂದೆ ವೈದ್ಯ ಡಾ.ರಾಮಕೃಷ್ಣ ನೇತೃತ್ವದಲ್ಲಿ ಎರಡು, ಮೂರು ವರ್ಷಗಳಿಗೊಮ್ಮೆ ಶ್ವಾನಗಳ ಪ್ರದರ್ಶನ ನಿರಂತರವಾಗಿ ಮಾಡಿಕೊಂಡು ಬಂದಿದೆ. ದೇಸಿ ತಳಿಗಳ ಬೆಳವಣಿಗೆ, ತಳಿ ಉತ್ಪತ್ತಿ ಕಲ್ಯಾಣ ಕಾರ್ಯಕ್ರಮ ನಡೆಯುತ್ತಿದೆ. ರೇಬೀಸ್‌ ನಿಯಂತ್ರಣ ಸಂಬಂಧಿಸಿದಂತೆ ಪಶು ಸಂಗೋಪನೆ ಇಲಾಖೆಗೆ ಸಂಸ್ಥೆ ಸಹಕರಿಸಿದೆ ಎಂದರು.

ಬೆಂಗಳೂರಿನ ಲಿಯೋ ಚಾರಿಟಬಲ್‌ ಸಂಸ್ಥೆ ಮುಖ್ಯಸ್ಥೆ ಶೃತಿ ರತ್ನಾಕರ್‌ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಂಪನ್ಮೂಲ ತಜ್ಞರಾಗಿ ದೇಸಿ ಶ್ವಾನ ತಳಿಗಳ ಸಂಘದ ಅಧ್ಯಕ್ಷ ಡಾ.ಡಿ.ಟಿ.ಜಯರಾಮಯ್ಯ, ಪಶುಪಾಲನಾ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ.ಎ.ಎಂ.ಶಿವಕುಮಾರ್‌, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮುರಳೀಧರ ಕಿರಣಕೆರೆ, ಪರಿಸರಪ್ರೀಯ ಡಾ.ಎನ್‌ ಕಾಂತರಾಜ್‌ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕೆನೆಲ್‌ ಕ್ಲಬ್‌ ಅಧ್ಯಕ್ಷ ಎಚ್.ವಿ.ಕಾರ್ತಿಕ್‌ ಶರ್ಮ, ಪಶುಪಾಲನಾ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ.ವಿ.ಕೆ.ಮಂಜುನಾಥ್‌, ಡಾ.ಅರುಣ್‌ ಕುಮಾರ್‌, ಬಿ.ಕೆ.ಹರ್ಷ ಮತ್ತಿತರರು ಇದ್ದರು. 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post