ಎಳ್ಳಮಾವಾಸ್ಯೆಯ ಶಿವಕಾಶಿ ಪಟಾಕಿ ಟುಸ್

ಈ ಬಾರಿ ತೀರ್ಥಹಳ್ಳಿಯಲ್ಲಿ ಹಳೆಯ "ಸ್ಟಾಕ್" ಪಟಾಕಿ ಸಂಭ್ರಮ
ರಾಜಕೀಯ ಕಾರ್ಯಕ್ರಮದ ಉಳಿತಾಯದ ಪಟಾಕಿ ಸಿಡಿತ


ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ತೆಪ್ಪೋತ್ಸವಕ್ಕಾಗಿ ಸುಮಾರು 6 ಲಕ್ಷ ವೆಚ್ಚದ ಪಟಾಕಿ ಸಿಡಿತಕ್ಕೆ ಪ್ಲಾನ್ ಮಾಡಲಾಗಿದೆ‌. ಕಳೆದ ವರ್ಷ 5 ಲಕ್ಷ ಪಟಾಕಿ ಸಿಡಿಸಿದ್ದು ಈ ವರ್ಷ ಪೈಪೋಟಿಯ ರೂಪದಲ್ಲಿ ಒಂದು ಲಕ್ಷ ಹೆಚ್ಚುವರಿ ಪಟಾಕಿ ಸಿಡಿಸಲು ಸಿದ್ಧತೆ ಮಾಡಲಾಗಿದೆ.

ವಿಶೇಷವಾಗಿ ಶಿವಕಾಶಿಯ ತಂಡದಿಂದ ಸಿಡಿತಗೊಳ್ಳುತ್ತಿದ್ದ ಈ ಪಟಾಕಿ ಸಂಭ್ರಮಕ್ಕೆ ಕೋಕ್ ಬಿದ್ದಿದ್ದು ಪೂರ್ಣ ಪ್ರಮಾಣದಲ್ಲಿ ಸಿಡಿತಗೊಳ್ಳುತ್ತದೆಯೋ ಎಂಬ ಅನುಮಾನ ಸೃಷ್ಟಿಯಾಗುತ್ತಿದೆ. ಈಗಾಗಲೇ ತಲಾ 2 ಲಕ್ಷ ವೆಚ್ಚದಲ್ಲಿ ಮೂರು ತಂಡಗಳಿಗೆ ಪಟಾಕಿ ಸಿಡಿಸಲು ಅನುಮತಿಸಲಾಗಿದೆ. ಎರಡು ತಂಡಗಳು ಶಿವಕಾಶಿಯನ್ನು ಪ್ರತಿನಿಧಿಸುತ್ತಿದ್ದು ಮತ್ತೊಂದು ತಂಡ ತೀರ್ಥಹಳ್ಳಿಯದ್ದೇ ಇರಲಿದೆ. ಈ ತಂಡಕ್ಕೆ ನೀಡುವ ಪಟಾಕಿ ಹಿಂದಿನ ರಾಜಕೀಯ ಸಭೆ, ಸಮಾರಂಭದ ಲೆಕ್ಕಾಚಾರ ಸರಿಪಡಿಸಲು ಆದ್ಯತೆಯ ಆದಾರದಲ್ಲಿ ನೀಡಲಾಗುತ್ತಿದೆ.

ಒಂದು ಮಾಹಿತಿಯ ಪ್ರಕಾರ ರಾಜಕೀಯ ಮುಖಂಡರೊಬ್ಬರು ಸಭೆಗಾಗಿ ತರಿಸಿದ್ದ ಪಟಾಕಿ ಲೆಕ್ಕಾಚಾರವನ್ನು ಈಗ ಎಳ್ಳಮಾವಾಸ್ಯೆ ಜಾತ್ರೆಯ ನೆಪದಲ್ಲಿ ಮನ್ನಾ ಮಾಡುವ ಯೋಜನೆ ಇದಾಗಿದೆ. ಶಿವಕಾಶಿಯ ಸಂಭ್ರಮದ ಭ್ರಮೆಯ ಜೊತೆ ಜೊತೆಗೆ ತೀರ್ಥಹಳ್ಳಿ ತಂಡದ ಟುಸ್ ಪಟಾಕಿ ಸಂಭ್ರಮಕ್ಕೆ ತೆರೆ ಬಿದ್ದಿದೆ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬಂದಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post